ಕುಮಾರಸ್ವಾಮಿ ಮಾತಾಡೋಕೆ ಒಂದು ಅರ್ಹತೆ ಇದೆ. ಆದ್ರೆ : Mohammed Haris Nalapad Exclusive Interview

Political News: ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿರುವ ಕಾಂಗ್ರೆಸ್ ಯುವ ನಾಯಕ ನಲಪಾಡ್ ಹ್ಯಾರಿಸ್, ಜೆಡಿಎಸ್ ನಾಯಕರ ಬಗ್ಗೆ ನಿಖಿಲ್ ಬಗ್ಗೆ ಕಿಡಿಕಾರಿದ್ದಾರೆ.

ಡಿಕೆಶಿ ಸಾಹೇಬ್ರು ಮತ್ತು ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ರೂ ಓಕೆ. ಅವರಿಬ್ಬರೂ ಅದೇ ಲೆವಲ್‌ಲಲ್ಲೇ ಇದ್ದಾರೆ. ಆದರೆ ಕುಮಾರಸ್ವಾಮಿಯವರು ಅವರ ಸ್ಟ್ಯಾಂಡರ್ಡ್ ಬಿಟ್ಟು ಮಾತನಾಡುತ್ತಾರೆ. ಅವರು ಓರ್ವ ಪ್ರಧಾನಿಯ ಮಗ. ಕೇಂದ್ರ ಸಚಿವರು. ಆದರೆ ಅದೆಲ್ಲವನ್ನೂ ಮರೆತು ಅವರು ವಾಗ್ದಾಳಿ ಮಾಡ್ತಾರೆ ಎಂದು ನಲಪಾಡ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಕುಮಾರಸ್ವಾಮಿ, ನಾನು ಡಿಕೆಶಿ ಸಿಎಂ ಅಂತಾ oಪ್ಪೋಕ್ಕೆ ಸಾಧ್ಯಾ ಇಲ್ಲಾ ಎಂದಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ನಲಪಾಡ್ ಅವರು ಓಕೆ ಅಂದ್ರು ಇಲ್ಲದಿದರೂ ಸಿಎಂ ಡಿಕೆಶಿನೇ. ಕುಮಾರಸ್ವಾಮಿಗೂ ಡಿಕೆಶಿನೇ ಸಿಎಂ ಎಂದು ನಲಪಾಡ್ ಹೇಳಿದ್ದಾರೆ.

ಅಲ್ಲದೇ ನಾವು ನಿಮ್ಮ ಪಕ್ಷದ ಹಿರಿಯ ನಾಯಕರಿಗೆ ಗೌರವಿಸುತ್ತೇವೆ. ನೀವೂ ನಮ್ಮ ಪಕ್ಷದ ಹಿರಿಯರಿಗೆ ಗೌರವಿಸಿ. ನಿಖಿಲ್‌ಕೂ ಡಿಕೆಶಿ ಲೆವಲ್‌ಗೂ ಎಂದಿಗೂ ಸಮ ಬರಲು ಸಾಧ್ಯವಿಲ್ಲ. ಅವರು 1 ಪಕ್ಷದ ಫ್ಯಾಮಿಲಿಯಲ್ಲಿ ಜನಿಸಿದ್ದಾರೆಂದ ಮಾತ್ರಕ್ಕೆ, ನಮ್ಮ ಸಿಎಂ ಸಾಹೇಬರ ಲೆವಲ್‌ಗೆ ಬರಲು ಸಾಧ್ಯವಿಲ್ಲ ಎಂದು ನಲಪಾಡ್ ಹೇಳಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

About The Author