Political News: ಕಾಂಗ್ರೆಸ್ ಯುವ ನಾಯಕ ನಲಪಾಡ್ ಹ್ಯಾರಿಸ್ ಸಂದರ್ಶನದಲ್ಲಿ ಮಾತನಾಡಿದ್ದು ನಿಖಿಲ್ ಕುಮಾರ್ ವಿರುದ್ಧ ಕಿಡಿಕಾರಿದ್ದಾರೆ.
ನಿಖಿಲ್ ಕುಮಾರ್ ಅವರು ಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಆಗಾಗ ರಾಜಕೀಯ ವಿಚಾರವಾಗಿ ವಾಗ್ದಾಳಿ ನಡೆಸುತ್ತಾರೆ. ಮತ್ತು ಹಲವು ಪ್ರಶ್ನೆಗಳನ್ನು ಕೇಳುತ್ತಾರೆ. ಈ ವಿಚಾರವಾಗಿ ನಲಪಾಡ್ ಅವರು ನಿಖಿಲ್ ವಿರುದ್ಧ ಕಿಡಿಕಾರಿದ್ದು, ನಿಖಿಲ್ ಏನಯ್ಯಾ ಮಾಡಿದ್ಯಾ ನೀನು ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಮಾತನಾಡೋಕ್ಕೆ ಎಂದು ಅರ್ಹತೆಯ ಬಗ್ಗೆ ಪ್ರಶ್ನಿಸಿದ್ದಾರೆ.
ನೀನು ಮಾತಾಡೋಾದ್ರೆ ನನ್ನ ಬಗ್ಗೆ ಮಾತಾಡು, ನಾನು ನೀನು ~~ಂದೇ. ಯೂತ್ ಕಾಂಗ್ರೆಸ್ ಬಗ್ಗೆ ಮಾತಾಡು. ನಿನ್ನ ಅರ್ಹತೆ ಅಷ್ಟೇ. ಆದರೆ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಏಕವಚನದಲ್ಲಿ ಮಾತಾಡೋಕ್ಕೆ ನೀನ್ಯಾರು ಎಂದು ಹ್ಯಾರಿಸ್ ಪ್ರಶ್ನಿಸಿದ್ದಾರೆ.
ಅಲ್ಲದೇ ಅವರ ಕೋಟಿ ಕೋಟಿ ಜನರಿಗೆ ಮುಖ್ಯಮಂತ್ರಿ, ಅವರಿಗೆ ಪ್ರಶ್ನಿಸುವ, ಏಕವಚನದಲ್ಲಿ ವಾಗ್ದಾಳಿ ಮಾಡುವ ಹಕ್ಕಿಲ್ಲ. ಮಾತನಾಡುವಾಗ ಗೌರವಿಸಿ ಮಾತನಾಡಬೇಕು ಎಂದು ಹೇಳಿರುವ ನಲಪಾಡ್, ನಾನು ಕುಮಾರಸ್ವಾಮಿ ಅವರ ಬಗ್ಗೆ ಕೀಳಾಗಿ ಮಾತನಾಡಿದ್ರೆ, ಅದು ನನ್ನ ತಂದೆ ಬಗ್ಗೆ ಹೋಗತ್ತೆ. ನನ್ನ ತಂದೆ ನನ್ನನ್ನು ಸರಿಯಾಗಿ ಬೆಳೆಸಿಲ್ಲವೆಂದೇ ಜನ ಮಾತನಾಡುತಾರೆಂದು ನಲಪಾಡ್ ಹೇಳಿದ್ದಾರೆ. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.




