Hubli News: ಹುಬ್ಬಳ್ಳಿಯ ನವನಗರದ ಸನಾತನ ಗಣಪತಿ ವಿಸರ್ಜನೆ ವೇಳೆ ಕ್ಲಬ್ ಡ್ಯಾನ್ಸರ್ ಹುಡುಗಿಯನ್ನು ಕರೆಯಿಸಿ ಡ್ಯಾನ್ಸ್ ಮಾಡಿಸಿರುವ ವಿಡಿಯೋ ವೈರಲ್ ಆಗಿದೆ.
ಹುಬ್ಬಳ್ಳಿಯ ನವನಗರದ ಸನಾತನ ಗಣಪತಿ ವಿಸರ್ಜನೆ ವೇಳೆಯಲ್ಲಿ ಕ್ಲಬ್ ಡ್ಯಾನ್ಸರ್ ಹುಡುಗಿಯನ್ನು ಕರೆಯಿಸಿ ಸೊಂಟ ತೋರಿಸಿ ಡ್ಯಾನ್ಸ್ ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು, ಗಣೇಶ ವಿಸರ್ಜನೆ ವೇಳೆ ಅಶ್ಲೀಲ ರೀತಿಯಲ್ಲಿ ಯುವತಿಯನ್ನು ಕರೆಯಿಸಿ ಡ್ಯಾನ್ಸ್ ಮಾಡಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ನಿನ್ನೆ 21ನೇ ದಿನ ನಡೆದ ಗಣೇಶ ವಿಸರ್ಜನೆ ವೇಳೆ ಸನಾತನ ಗಣೇಶ ಮಂಡಳಿ ವಿವಾದ ಸೃಷ್ಟಿಸಿದೆ. ವಿಸರ್ಜನೆ ವೇಳೆ ಮಹಾರಾಷ್ಟ್ರ ಮೂಲದ ಡ್ಯಾನ್ಸರ್ ನಿಶಾ ಅವರು ಭರ್ಜರಿ ಸ್ಟೆಪ್ಸ್ ಹಾಕಿದ್ದು, ಟ್ರ್ಯಾಕ್ಟರ್ ಮೇಲೆ ಹತ್ತಿ ಸೊಂಟ ಕುಲುಕಿಸಿದ್ದಾರೆ.
ಮಹಾರಾಷ್ಟ್ರ ಮೂಲದ ನಿಶಾ ಮುಂಬೈಕರ್ ಅವರ ಡ್ಯಾನ್ಸ್‌ಗೆ ಪಡ್ಡೆ ಹುಡುಗರು ಫುಲ್ ಫಿದಾ ಆಗಿದ್ದಾರೆ.
ಯುವತಿಯ ಸಖತ್ ಡ್ಯಾನ್ಸ್‌ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದ್ದಂತೆ, ಗಣೇಶ ಮಂಡಳಿಯ ನಡೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.




