Chanakya Neeti: ಈ ಮೂವರ ಜತೆ ಎಂದಿಗೂ ವಿರೋಧ ಬೇಡ ಅಂತಾರೆ ಚಾಣಕ್ಯರು

Chanakya Neeti: ಮನುಷ್ಯ ಎಂದಮೇಲೆ ಅವನಿಗೆ ವಿರೋಧಿಗಳು ಇದ್ದೇ ಇರುತ್ತಾರೆ. ಅವರು ಶತ್ರುತ್ವ ಮಾಡುವ ವಿರೋಧಿಗಳೂ ಇರಬಹುದು ಅಥವಾ ಹತ್ತಿರವಿದ್ದೇ, ಮನಸ್ಸಿನಲ್ಲೇ ಅಡೆತಡೆಗಳೇ ಬರಲಿ ಎನ್ನುವ ವಿರೋಧಗಳೇ ಇರಬಹುದು. ವಿರೋಧಿಗಳಂತೂ ಇದ್ದೇ ಇರುತ್ತಾರೆ. ಆದರೆ ನಾವು ಕೆಲವರ ಜತೆ ವಿರೋಧ ಕಟ್ಟಿಕ“ಳ್ಳುವ ಬದಲು, ಅವರ ಸುದ್ದಿಗೆ ಹೋಗದೇ ಸುಮ್ಮನಿರುವುದೇ ಉತ್ತಮ ಅಂತಾರೆ ಚಾಣಕ್ಯರು. ಹಾಗಾದ್ರೆ ಯಾರವರು ಮೂವರು ಅಂತಾ ತಿಳಿಯೋಣ ಬನ್ನಿ.

ಶಕ್ತಿಶಾಲಿ ಮನುಷ್ಯ: ಶಕ್ತಿ ಶಾಲಿ ಮನುಷ್ಯರ ಬಳಿ ಎಲ್ಲ ರೀತಿಯ ಅಧಿಕಾರವಿರುತ್ತದೆ. ಆ ಅಧಿಕಾರದ ಪ್ರಭಾವ ಬಳಸಿ, ಅವರು ನಿಮ್ಮ ಜೀವಕ್ಕೂ, ಜೀವನಕ್ಕೂ ಹಾನಿ ಮಾಡಬಹುದು. ಹಾಗಾಗಿ ಶಕ್ತಿಶಾಲಿ ಮನುಷ್ಯರು, ಆರ್ಥಿಕವಾಗಿ ಬಲವುಳ್ಳವರ ಬಳಿ ಜಗಳ ಬೇಡ ಅಂತಾರೆ ಚಾಣಕ್ಯರು.

ರಾಜ: ಯಾವುದೇ ದೇಶದ ರಾಜ, ಅಥವಾ ಯಾವುದೇ ರಾಜ್ಯದ ರಾಜ, ಅಥವಾ ಯಾವುದೇ ಪ್ರದೇಶದ ಆಡಳಿತಗಾರನಿರಲಿ ಅಂಥವರ ವಿರುದ್ಧ ದ್ವೇಷ ಕಟ್ಟಿಕೊಳ್ಳಬಾರದು ಎಂದು ಹೇಳುತ್ತಾರೆ ಚಾಣಕ್ಯರು. ಏಕೆಂದರೆ ಆತ ಪ್ರಭಾವಿಯಾಗಿದ್ದು, ಆತನ ಬಳಿ ಹಣ ಬಲ, ಅಧಿಕಾರ ಬಲ ಮತ್ತು ಸೈನ್ಯ ಬಲವೂ ಇರುತ್ತದೆ. ಅಂಥವರು ಎಲ್ಲ ಬಲವನ್ನು ಬಳಸಿ, ನಿಮ್ಮ ಮೇಲೆ ಹಾನಿ ಮಾಡಬಹುದು.

ನಿಮಗಾಗಿ ಅಡುಗೆ ಮಾಡುವವರು ಅಥವಾ ವೈದ್ಯರು: ಚಾಣಕ್ಯರ ಪ್ರಕಾರ ನಿಮಗಾಗಿ ಅಡುಗೆ ಮಾಡುವವರು ಮತ್ತು ವೈದ್ಯರ ಬಳಿ ಎಂದೂ ದ್ವೇಷ ಕಟ್ಟಿಕೊಳ್ಳಬಾರದಂತೆ. ಏಕೆಂದರೆ, ಇವರಿಬ್ಬರೂ ನಿಮ್ಮ ಜೀವಕ್ಕೆ ಅಪಾಯ ತರಬಹುದು. ಅಡುಗೆ ಮಾಡುವಾಗ ಊಟದಲ್ಲಿ ಏನಾದರೂ ಬೆರೆಸುವುದು. ಅಥವಾ ಚಿಕಿತ್ಸೆ ನೀಡುವಾಗ ಜೀವಕ್ಕೇ ಅಪಾಯ ಮಾಡಬಹುದು. ಹಾಗಾಗಿ ವೈದ್ಯರು ಮತ್ತು ಅಡುಗೆ ಮಾಡುವವರ ಬಳಿ ದ್ವೇಷ ಕಟ್ಟಿಕೊಳ್ಳಬೇಡಿ ಅಂತಾರೆ ಚಾಣಕ್ಯರು.

About The Author