Haveri News: ಹಾವೇರಿ: ಹಾವೇರಿಯ ಬಾಳಂಬೀಡ ಗ್ರಾನದಲ್ಲಿ ಗೋ ಶಾಲೆ ಅಡಿಗಲ್ಲು ಸಮಾರಂಭ ನಡೆಯಿತು. ಈ ವೇಳೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ಕಾರ್ಯಕ್ರಮದಲ್ಲಿ ಕನ್ಹೇರಿ ಮಠದ ಸ್ವಾಮೀಜಿ ಕೂಡ ಮಾತನಾಡಿದ್ದು, ರೈತನನ್ನ ಅನ್‌ಸ್ಕಿಲ್ಡ್ ಅಂತ ಪರಿಗಣಿಸಬೇಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಗೋಶಾಲೆ ನಿರ್ಮಾಣಕ್ಕೆ ಸಿದ್ದಲಿಂಗಣ್ಣ ಸಂಕಲ್ಪ ಮಾಡಿದ್ದಾರೆ. ದನ ಕಾಯೋದು ದೇಶದಲ್ಲೇ ಅತ್ಯಂತ ಕಠಿಣವಾದ ಕೆಲಸ. ರೈತನನ್ನ ಅನ್‌ಸ್ಕಿಲ್ಡ್ ಅಂತ ಪರಿಗಣಿಸಬೇಡಿ ಎಂದು ಸರ್ಕಾರಕ್ಕೆ ಮನವಿ. ರೈತನಿಗೆ 700 ಕೂಲಿ ಸಿಗುವಂತೆ ಸ್ಕಿಲ್ಡ್ ಲೇಬರ್ ಎಂದು ಪರಿಗಣಿಸಿ. ಸಬ್ಸಿಡಿ ಬೇಡ, ರೈತನನ್ನೇ ಸ್ಕಿಲ್ಡ್ ಲೇಬರ್ ಎಂದು ಪರಿಗಣಿಸಿ ಎಂದು ಕನ್ಹೇರಿ ಶ್ರೀಗಳು ಆಗ್ರಹಿಸಿದ್ದಾರೆ.
ರೈತರು ಕರ್ಮಯೋಗಿಗಳ ಜೊತೆಗೆ ಕುಶಲಕರ್ಮಿ ಯೋಗಿಗಳು ಆಗಿ. ಕೃಷಿ ವಿಜ್ಞಾನ ಓದಿದವರಿಗಿಂತ ನಿಜವಾದ ಕೃಷಿ ವಿಜ್ಞಾನಿ ರೈತ. ರೈತನದ್ದು ಕೃಷಿ ಪಾರ್ಟ್ ಟೈಮ್, ಪೊಲಿಟಿಕ್ಸ್ ಮಾತ್ರ ಫುಲ್ ಟೈಮ್ ಆಗಿದೆ. ಒಂದೇ ಬೆಳೆಯ ಮೇಲೆ ಅವಲಂಬಿತರಾಗಬೇಡಿ, ಪ್ರಯೋಗಶೀಲರಾಗಿ. ಮನೆಯಲ್ಲಿ ಜೈವಿಕ ಗೊಬ್ಬರ, ಬಯೋಗ್ಯಾಸ್ ತಯಾರಿಸಿ ಸ್ವಾವಲಂಬಿಗಳಾಗಿ. ಪ್ರತಿಯೊಬ್ಬ ರೈತ ಮನೆಯಲ್ಲಿ ಕನಿಷ್ಠ ಎರಡು ಆಕಳು ಸಾಕಬೇಕು ಎಂದು ರೈತರಿಗೆ ಅಪ್‌ಗ್ರೇಡ್ ಆಗಲು ಶ್ರೀಗಳು ಕರೆನೀಡಿದ್ದಾರೆ.
ಇನ್ನು ರೈತ ಯುವಕರಿಗೆ ಹೆಣ್ಣು ಕೊಡಲು ಹಿಂದೇಟು ಹಾಕುತ್ತಿರುವ ಬಗ್ಗೆ ಆತಂಕ ವ್ಯಕತಪಡಿಸಿರುವ ಶ್ರೀಗಳು, ರೈತ ಯುವಕರು ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ, ಧರ್ಮವಂತರನ್ನಾಗಿ ಬೆಳೆಸಿ. ತಾಯಂದಿರುವ ರೈತ ಮಕ್ಕಳಿಗೆ ತಮ್ಮ ಹೆಣ್ಣು ಮಕ್ಕಳನ್ನು ಕೊಡುವ ಮನಸ್ಸು ಮಾಡಿ ಎಂದು ಕನ್ಹೇರಿ ಶ್ರೀಗಳು ಹೇಳಿದ್ದಾರೆ.
ಇನ್ನು ಮಠದ ಆಸ್ತಿ ವಿಚಾರದಲ್ಲಿ ವಕ್ಫ್ ಕುರಿತು ಪ್ರಸ್ತಾಪಿಸಿ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದು, ಮಠದ ಆಸ್ತಿ ಸಂರಕ್ಷಣೆ ಮಠಾಧೀಶರ ಜವಾಬ್ದಾರಿ. ಧಾರ್ಮಿಕ ಆಸ್ತಿ ಮಾರಾಟಕ್ಕೆ ಮುಂದಾದರೆ ತಡೆಯುವ ಕೆಲಸ ಮಾಡಿ. ಧರ್ಮದ ಉಳಿವಿಗಾಗಿ ಧಾರ್ಮಿಕ ಆಸ್ತಿ ಉಳಿಸಬೇಕು ಎಂದು ಕನ್ಹೇರಿ ಶ್ರೀಗಳು ಹೇಳಿದ್ದಾರೆ.
ಅಲ್ಲದೇ, ಲಿಂಗಾಯತ–ವೀರಶೈವ ಎಂದು ವಿಭಜಿಸುವ ಮಾತುಗಳಿಗೆ ಕಿವಿಗೊಡಬೇಡಿ. ಕೆಲವರು ಸ್ವಾಮೀಜಿಗಳಿಗೆ ತಲೆ ಕೆಟ್ಟಿದೆ, ಬ್ಯುಸಿನೆಸ್ ಮಾಡ್ತಿದ್ದಾರೆ ಎಂದು ಶ್ರೀಗಳು ವಿಭಜನೆ ಮಾಡುವವರ ವಿರುದ್ಧ ಕಿಡಿಕಾರಿದ್ದಾರೆ.
ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ಆತಂಕವಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಧರ್ಮವನ್ನು ಟೀಕಿಸುವ ಕೆಲಸ ಆಗ್ತಿದೆ. ಧರ್ಮದ ಬಗ್ಗೆ ಅವಹೇಳನ ಮಾಡುವುದನ್ನು ಸಹಿಸಬೇಡಿ ಎಂದು ಹಿಂದೂಗಳಿಗೆ ಕನ್ಹೇರಿ ಶ್ರೀಗಳು ಕರೆ ನೀಡಿದ್ದಾರೆ.




