Sandalwood: ಸದ್ಯ ಸ್ಯಾಂಡಲ್ವುಡ್ನಲ್ಲಿ ಸೌಂಡ್ ಮಾಡುತ್ತಿರುವ ಸಿನಿಮಾ ಆಗಿರುವ ಪ್ರೇಮದ ಊರಲಿ ಸಿನಿಮಾ ಖ್ಯಾತಿಯ ರಮಿಕಾ ಶಿವು ಸಂದರ್ಶನದಲ್ಲಿ ಮಾತನಾಡಿದ್ದಾರೆ.
ನೀನಾದೆ ನಾ ಧಾರಾವಾಹಿಯಲ್ಲಿ ಸಿಕ್ಕ ವೇದಾ ಪಾತ್ರ ಯಾವ ರೀತಿ ರಮಿಕಾ ಜೀವನದ ದಿಕ್ಕನ್ನೇ ಬದಲಾಯಿಸಿತು ಎಂಬ ಬಗ್ಗೆ ರಮಿಕಾ ಮಾತನಾಡಿದ್ದಾರೆ. ಪಾರು ಧಾರಾವಾಹಿ ಮುಗಿದ ಬಳಿಕ ರಮಿಕಾ ಸಣ್ಣ ಬ್ರೇಕ್ ಪಡೆದಿದ್ದರಂತೆ. ಬಳಿಕ ಅವರಿಗೆ ಯಾವ ಸಿನಿಮಾ, ಸಿರಿಯಲ್ನಲ್ಲಿ ಕೆಲಸ ಮಾಡಲಾಗಲಿಲ್ಲ. ಆದರೆ 6 ತಿಂಗಳ ಬಳಿಕ ಕತೆಯ 1 ಲೈನ್ ಕೇಳಿಯೇ, ರಮಿಕಾ ಸಿರಿಯಲ್ನಲ್ಲಿ ನಟಿಸಲು ಓಕೆ ಎಂದಿದ್ದರಂತೆ. ಅಲ್ಲಿಂದ ವೇದಾಳ ಜರ್ನಿ ಶುರುವಾಗಿದ್ದು.
ತಾಳಿಗಾಗಿ ಶ್ರೀಮಂತೆ, ವಿದ್ಯಾವಂತೆ ಆಗಿದ್ದರೂ, ಬಡವ ಮತ್ತು ರೌಡಿಯ ಜತೆ ಜೀವನ ಮಾಡಲು ವೇದಾ ನಿರ್ಧರಿಸುತ್ತಾಳೆ. ಈ ಕಥೆ ಬೇರೆ ಕಥೆಗಿಂತ ವಿಭಿನ್ನವಾಗಿದ್ದ ಕಾರಣ ಈ ಪಾತ್ರ ಮಾಡಲು ನಾನು ನಿರ್ಧರಿಸಿದೆ ಅಂತಾರೆ ರಮಿಕಾ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




