Dasara Special: ಮಂಗಳೂರು ದಸರಾ ಉತ್ಸವದ ಹಿಂದಿದೆ ಅವಮಾನಕ್ಕೆ ತಕ್ಕ ಉತ್ತರ ನೀಡಿದವರ ಕಥೆ..

Dasara Special: ನಮ್ಮ ರಾಜ್ಯದಲ್ಲಿ ಮೈಸೂರು ದಸರಾಗೆ ಎಷ್ಟು ಪ್ರಾಮುಖ್ಯತೆ ಇದೆಯೋ, ಅಷ್ಟೇ ಮಂಗಳೂರು ದಸರಾಗೂ ಇದೆ. ಆದರೆ ಮೈಸೂರು ದಸರಾ ಶತಮಾನಗಳಿಂದ ನಡೆದು ಬಂದ ಉತ್ಸವವಾಗಿದ್ದು, ಮಂಗಳೂರು ದಸರಾ ಇತ್ತೀಚಿಗೆ ಶುರುವಾಗಿದ್ದು. ಆದರೆ ಮಂಗಳೂರು ದಸರಾವನ್ನು ಅಷ್ಟು ವಿಜೃಂಭಣೆಯಿಂದ ಮಾಡಲು ಕಾರಣವೇನು..? ಈ ಕಾರ್ಯಕ್ರಮದ ಹಿಂದಿರುವ ಕಥೆ ಏನು ಅಂತಾ ತಿಳಿಯೋಣ ಬನ್ನಿ..

100 ವರ್ಷಗಳ ಹಿಂದೆ ಜಾರಪ್ಪ ನಾಯಕ ಎಂಬುವವರು ತಮ್ಮ ಮನೆಯವರ ಜತೆ ಉತ್ತರಕನ್ನಡದ ಗೋಕರ್ಣಕ್ಕೆ ಮಹಾಬಲೇಶ್ವರನ ದರ್ಶನಕ್ಕಾಗಿ ಹೋಗಿದ್ದರು. ಆದರೆ ಅವರಿಗೆ ದೇವರ ದರ್ಶನ ಮಾಡಲು ಬಿಡದೇ, ಅವಮಾನ ಮಾಡಿ ಕಳುಹಿಸಲಾಯಿತು. ಜಾತಿನಿಂದನೆ ಮಾಡಿ, ಕಳುಹಿಸಲಾಯಿತು. ಈ ಅವಮಾನವನ್ನು ಸಹಿಸಲಾಗದ ಜಾರಪ್ಪ ನಾಯಕರು, ತಮ್ಮೂರಿಗೆ ಅಂದ್ರೆ, ಮಂಗಳೂರಿಗೆ ಬಂದು, ತಮಗಾದ ಕಹಿ ಅನುಭವವನ್ನು ಹೇಳಿದರು.

ಬಳಿಕ ನಾರಾಯಣ ಗುರುಗಳ ಅನುಗ್ರಹದಂತೆ, ಕೇರಳದ ಓರ್ವ ವ್ಯಕ್ತಿಯ ಸಹಾಯ ಮತ್ತು ಗ್ರಾಮಸ್ಥರ ಸಹಾಯದಿಂದ 1 ದೇವಸ್ಥಾನ ನಿರ್ಮಿಸಿ, ಅಲ್ಲಿ ಎಲ್ಲ ಜಾತಿಯವರೂ ಬರುವ ವ್ಯವಸ್ಥೆ ಮಾಡಲು ನಿರ್ಧರಿಸಿದರು. ಹೀಗೆ ನಿರ್ಮಾಣವಾದ ದೇವಸ್ಥಾನವೇ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ.

1912ರಲ್ಲಿ ನಾರಾಯಣ ಗುರುಗಳೇ ಇಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದರು. ಬಳಿಕ 1991ರಲ್ಲಿ ಜನಾರ್ಧನ ಪೂಜಾರಿಗಳ ನೇತೃತ್ವದಲ್ಲಿ ದೇವಸ್ಥಾನವನ್ನು ಅಭಿವೃದ್ಧಿ ಮಾಡಲಾಯಿತು. ಈ ದೇವಸ್ಥಾನವನ್ನು ಅಂದಿನ ಪಿಎಂ ಆಗಿದ್ದ ರಾಜೀವ್ ಗಾಂಧಿಯವರು ಬಂದು ಉದ್ಘಾಟಿಸಿದ್ದರು.

ಬಳಿಕ ದೇವಸ್ಥಾನವನ್ನು ಅಭಿವೃದ್ಧಿಗ“ಳಿಸುತ್ತ, ದಸರಾ ಹಬ್ಬವನ್ನು ಆಚರಿಸಲು ಶುರು ಮಾಡಿದರು. ಇದೀಗ ಹಲವು ವರ್ಷಗಳಿಂದ ಇಲ್ಲಿ ದಸರಾ ಆಚರಣೆ ಆರಂಭಿಸಿದ್ದು, ಅದು ಕುದ್ರೋಳಿ ದಸರಾ ಎಂದೇ ಪ್ರಖ್ಯಾತಿಯಾಗಿದೆ.

ಇಲ್ಲಿ ಶಾರದಾ ದೇವಿ ಸೇರಿ ಗಣೇಶ ಮತ್ತು ನವದುರ್ಗೆಯರನ್ನು ಪ್ರತಿಷ್ಠಾಪಿಸಿ, 9 ದಿನ ವಿಶೇಷ ಪೂಜೆ ಮಾಡಿ, ದಸರಾ ಹಬ್ಬದ ದಿನವೇ ಇವರನ್ನೆಲ್ಲ ಮೆರವಣಿಗೆಯ ಮೂಲಕ, ವಿಸರ್ಜಿಸಲಾಗುತ್ತದೆ. ಈ ವೇಳೆ ಬೇರೆ ಬೇರೆ ಕಾರ್ಯಕ್ರಮಗಳು ಸೇರಿ, ಪಿಲಿನಲಿಕೆ ಕೂಡ ಇರುತ್ತದೆ.

About The Author