ರಶ್ಮಿಕಾ-ವಿಜಯ್‌ ಮಾತು ವೈರಲ್: ಈಕೆಯಂತೆ ನೀವೆಂದೂ ಆಗಬೇಡಿ ಎಂದು ಕರೆ ನೀಡಿದ ಇನ್‌ಫ್ಲುಯೆನ್ಸರ್

Bollywood: ರಶ್ಮಿಕಾ ಮತ್ತು ವಿಜಯೇ ದೇವರಕ“ಂಡ ಸದ್ಯ ರಣಬಾಲಿ ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಫೇಮಸ್ ಪಾಡ್‌ಕಾಸ್ಟ್ ಗಳಿಗೆ ಹೋಗಿ, ಇಬ್ಬರೂ ಸಂದರ್ಶನ ನೀಡಿದ್ದಾರೆ.

ಆದರೆ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಸಂದರ್ಶನ ನೀಡಿರುವ ವಿಜಯ್ ಮತ್ತು ರಶ್ಮಿಕಾ, ಸಿನಿಮಾ ಜತೆಗೆ ತಮ್ಮ ವಿವಾಹದ ಬಗ್ಗೆಯೂ ಮಾತನಾಡಿದ್ದಾರೆ. ಈ ವೇಳೆ ರಶ್ಮಿಕಾ ಪ್ರಪೋಸ್ ಬಗ್ಗೆ ಮಾತನಾಡಿರುವ ವಿಜಯ್, ಆಕೆ ನನ್ನ ಬಳಿ ಮದುವೆಯಾಗೋಣ ಎಂದು ಕೇಳಿದಳು. ಅದಕ್ಕೆ ನಾನು 100 ಸಲಾ ಕೇಳಿಕೋ ಎಂದು ಹೇಳಿದೆ ಎಂದು ವಿಜಯೇ ಹೇಳಿದ್ದಾರೆ.

ಆಗ ಕರಣ್ ನೀವು 100 ಸಲಾ ಕೇಳಿದ್ರಾ ಎಂದು ರಶ್ಮಿಕಾಗೆ ಕೇಳಿದಾಗ ಆಕೆ, ನಾನು ಇಡೀ ವರ್ಷಾ ಕೇಳಿದ್ದೇನೆ. ಆ ಬಳಿಕ ನಮ್ಮ ಮದುವೆಯಾಯಿತು ಎಂದು ಹೇಳಿದ್ದಾರೆ. ಈ ಹೇಳಿಕೆ ನೀಡಿದ ಬಳಿಕ ರಶ್ಮಿಕಾ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ.

ಈ ಹೇಳಿಕೆಗೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ರಶ್ಮಿಕಾಳಂತೆ ನೀವೆಂದಿಗೂ ಆಗಬೇಡಿ ಎಂದು ಕರೆ ನೀಡಿದ್ದಾರೆ. ಓರ್ವ ಪುರುಷನ ಬಳಿ ಆಸ್ತಿ ಪಾಸ್ತಿ, ಪವರ್, ಅಂದ ಚಂದ ಏನೇ ಇರಲಿ. ಆತನಿಗೆ ನೀವು ಪ್ರಪೋಸ್ ಮಾಡಿದಾಗ, ಆತ ಈ ರೀತಿ ಡಿಮ್ಯಾಂಡ್ ಮಾಡಿದರೆ, ನೀವು ಆತನಿಂದ ದೂರವಾಗುವುದೇ ಲೇಸು ಎಂದು ಹೇಳಿದ್ದಾರೆ.

ಅಲ್ಲದೇ ಓರ್ವ ಹೆಣ್ಣು, ತನ್ನ ಕಾಲ ಮೇಲೆ ತಾನು ನಿಲ್ಲುವುದನ್ನು ಕಲಿಯಬೇಕು. ಗಂಡಿನ ಪ್ರೀತಿಯ ಸಹಾಯವಿಲ್ಲದಿದ್ದರೂ ಬದುಕಲು ರೆಡಿ ಇರಬೇಕು. ಇಂದಿನ ಕಾಲದಲ್ಲೂ ಗಂಡಿನ ಅಡಿಯಾಳಾಗಿ ಇರಬಾರದು. ನಿಮಗೆ ಯಾರಾದ್ರೂ ಈ ರೀತಿ ಡಿಮ್ಯಾಂಡ್ ಮಾಡಿದ್ರೆ, ನೀವೆಂದೂ ರಶ್ಮಿಕಾ ಆಗಬೇಡಿ ಎಂದು ಹೇಳಿದ್ದಾರೆ.

About The Author