Political News: ಉತ್ತರ ಭಾರತದಲ್ಲಿ ನಡೆದ ಕಾರ್ಯಕ್ರಮವ“ಂದರಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಮೋದಿ ವಿರುದ್ಧ ಮಾತನಾಡಿದ್ದು, ಮೋದಿಯ ಅಪ್ಪನೂ ಹೋಗ್ತಾನೆ ಅನ್ನೋ ರೀತಿ ಹೇಳಿಕೆ ನೀಡಿದ್ದಾರೆ. ಆಕ್ರೋಶದಲ್ಲಿ ನೀಡಿದ ಈ ಹೇಳಿಕೆ ವಿರುದ್ಧ ಇದೀಗ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.
ಗಾಲಿ ಜನಾರ್ಧನ ರೆಡ್ಡಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಖರ್ಗೆಯವರೇ, ಇದು ನಿಮ್ಮ ಸಂಸ್ಕಾರವೋ ಅಥವಾ ಹತಾಶೆಯ ಪರಮಾವಧಿಯೋ? AICC ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರೇ, ದೇಶದ ಪ್ರಧಾನಮಂತ್ರಿಗಳ ಬಗ್ಗೆ ಮಾತನಾಡುವಾಗ ಕನಿಷ್ಠ ರಾಜಕೀಯ ಸಭ್ಯತೆಯನ್ನಾದರೂ ಕಾಪಾಡಿಕೊಳ್ಳಿ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಬಗ್ಗೆ ನೀವು ಬಳಸಿದ ಅವಹೇಳನಕಾರಿ ಭಾಷೆ ನಿಮ್ಮ ಹುದ್ದೆಯ ಘನತೆಗೆ ತಕ್ಕುದಲ್ಲ ಎಂದು ಕಿಡಿಕಾರಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 140 ಕೋಟಿ ಭಾರತೀಯರ ಆಶಯ ಮತ್ತು ವಿಶ್ವಾಸದ ಪ್ರತೀಕ. ಅವರ ವಿರುದ್ಧ ರಾಜಕೀಯವಾಗಿ ಹೋರಾಡಲು ಸಾಧ್ಯವಾಗದಾಗ ಇಂತಹ ಕೀಳುಮಟ್ಟದ ಮಾತುಗಳ ಮೂಲಕ ನಿಮ್ಮ ಹತಾಶೆಯನ್ನು ಪ್ರದರ್ಶಿಸುವುದು ಕಾಂಗ್ರೆಸ್ನ ರಾಜಕೀಯ ದಿವಾಳಿತನವನ್ನು ತೋರಿಸುತ್ತದೆ ಜನಾರ್ಧನ ರೆಡ್ಡಿ ಖರ್ಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೆನಪಿರಲಿ ಖರ್ಗೆಯವರೇ, ಮೋದಿ ಅವರನ್ನು ನಿಂದಿಸಿದ ಮಾತ್ರಕ್ಕೆ ಮೋದಿ ಅವರ ಜನಬೆಂಬಲ ಕಡಿಮೆಯಾಗುವುದಿಲ್ಲ; ಬದಲಾಗಿ, ನಿಮ್ಮ ಮಾತುಗಳೇ ನಿಮ್ಮ ರಾಜಕೀಯ ಸಂಸ್ಕೃತಿಯನ್ನು ಬಯಲು ಮಾಡುತ್ತವೆ. ಕಾಂಗ್ರೆಸ್ಗೆ ಮೋದಿ ಅವರ ಮೇಲೆ ಟೀಕೆ ಮಾಡುವ ಹಕ್ಕಿದೆ. ಆದರೆ ಟೀಕೆಯ ಹೆಸರಿನಲ್ಲಿ ಅವಹೇಳನ ಮಾಡುವುದು ಪ್ರಜಾಪ್ರಭುತ್ವದ ಸಂಸ್ಕೃತಿಯಲ್ಲ. ಜನರ ಮುಂದೆ ನಿಮ್ಮ ಸಾಧನೆಗಳನ್ನು ಇಟ್ಟು ಮತ ಕೇಳಿ; ವೈಯಕ್ತಿಕ ನಿಂದನೆಗಳನ್ನಲ್ಲ!
ಮೋದಿಯವರನ್ನು ಟೀಕಿಸುವ ಮೊದಲು ನಿಮ್ಮ ಮಾತುಗಳ ಘನತೆಯನ್ನು ಕಾಪಾಡಿಕೊಳ್ಳಿ. ಜನರ ತೀರ್ಪು ನಿಂದನೆಗಳಿಂದಲ್ಲ, ನಿಮ್ಮ ಕೆಲಸ ಮತ್ತು ನಡವಳಿಕೆಯಿಂದ ನಿರ್ಧಾರವಾಗುತ್ತದೆ! ಎಂದು ಗಾಲಿ ಜನಾರ್ಧನ ರೆಡ್ಡಿ ಖರ್ಗೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.




