Hubli News: ಹಾಲಿನ ದರ ಏರಿಸಿದ್ರೆ ನಾವು ಬೆಲ್ಲದ ಡಿಕಾಕ್ಷನ್ ಕುಡೀತಿವಿ..

Hubli News: ರಾಜ್ಯ ಸರ್ಕಾರ ಕೊನೆಗೂ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಶಾಕ್ ನೀಡಿದೆ. ಪ್ರತಿ ಲೀಟರ್ ಹಾಲಿನ ದರವನ್ನು 8 ರೂಪಾಯಿ ಹೆಚ್ಚಿಸಲು ನಿರ್ಧಾರ ಕೈಗೊಳ್ಳಲಾಗಿದ್ದು, ಪರಿಷ್ಕೃತ ದರ ನವೆಂಬರ್ 1ರಿಂದ ಜಾರಿಗೆ ಬರಲಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಹಾಲಿನ ದರ ಏರಿಕೆ ಮತ್ತಷ್ಟು ಹೊರೆಯಾಗುವ ಆತಂಕ ಎದುರಾಗಿದೆ.

ಬೆಳಗ್ಗೆ ಎದ್ದ ತಕ್ಷಣ ಮನೆಗಳಲ್ಲಿ ಮೊದಲು ಬೇಕಾಗುವ ಅಗತ್ಯ ವಸ್ತುಗಳಲ್ಲಿ ಹಾಲು ಕೂಡ ಒಂದು. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬರಿಗೂ ಹಾಲು ದಿನನಿತ್ಯದ ಅವಶ್ಯಕತೆ. ಚಹಾ, ಕಾಫಿ, ತಿಂಡಿ ತಯಾರಿಕೆ ಸೇರಿದಂತೆ ಹಲವು ಕೆಲಸಗಳಿಗೆ ಹಾಲು ಅನಿವಾರ್ಯ. ಇಂತಹ ಅಗತ್ಯ ವಸ್ತುವಿನ ಬೆಲೆಯೇ ಈಗ ಏರಿಕೆಯಾಗುತ್ತಿದೆ.

ಪ್ರತಿ ಲೀಟರ್ ಹಾಲಿನ ದರವನ್ನು 8 ರೂಪಾಯಿ ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ನವೆಂಬರ್ 1ರಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ. ಒಂದು ಲೀಟರ್‌ಗೆ 8 ರೂಪಾಯಿ ಹೆಚ್ಚಳ ಎಂದರೆ ದಿನನಿತ್ಯ ಹಾಲು ಖರೀದಿಸುವ ಕುಟುಂಬಗಳ ಮಾಸಿಕ ಖರ್ಚಿನ ಮೇಲೂ ಪರಿಣಾಮ ಬೀಳಲಿದೆ.

ಈಗಾಗಲೇ ಅಡುಗೆ ಅನಿಲ, ತರಕಾರಿ, ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಸಂಕಷ್ಟ ಅನುಭವಿಸುತ್ತಿದ್ದಾರೆ. ಅದರಲ್ಲೂ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಪ್ರತಿ ರೂಪಾಯಿಯನ್ನೂ ಲೆಕ್ಕ ಹಾಕಿ ಖರ್ಚು ಮಾಡುವ ಪರಿಸ್ಥಿತಿಯಲ್ಲಿವೆ. ಇಂತಹ ಸಂದರ್ಭದಲ್ಲಿ ಹಾಲಿನ ದರ ಏರಿಕೆ ಜನರ ಬಜೆಟ್‌ಗೆ ಮತ್ತೊಂದು ಹೊಡೆತ ನೀಡಲಿದೆ ಎಂಬುದು ಸಾರ್ವಜನಿಕರ ಆತಂಕ.

ಹಾಲು ಕೇವಲ ಒಂದು ವಸ್ತುವಲ್ಲ, ಬಹುತೇಕ ಕುಟುಂಬಗಳ ದಿನನಿತ್ಯದ ಅಗತ್ಯ. ಪ್ರತಿದಿನ ಲೀಟರ್‌ಗಟ್ಟಲೆ ಹಾಲು ಖರೀದಿಸುವ ಕುಟುಂಬಗಳಿಗೆ ಈ ಏರಿಕೆ ದೊಡ್ಡ ಹೊರೆಯಾಗಲಿದೆ. ಅದರಲ್ಲೂ ದುಡಿದು ಜೀವನ ನಡೆಸುವ ಆಟೋ ಚಾಲಕರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರಿಗೂ ಬೆಲೆ ಏರಿಕೆಯ ಬಿಸಿ ತಟ್ಟಲಿದೆ.

ಒಂದೆಡೆ ಬೆಲೆ ಏರಿಕೆಯಿಂದ ಜನರ ಜೀವನ ನಿರ್ವಹಣೆ ಕಷ್ಟವಾಗುತ್ತಿದ್ದರೆ, ಮತ್ತೊಂದೆಡೆ ಅಗತ್ಯ ವಸ್ತುವಾದ ಹಾಲಿನ ದರದಲ್ಲೂ 8 ರೂಪಾಯಿ ಹೆಚ್ಚಳವಾಗುತ್ತಿದೆ. ಸರ್ಕಾರದ ಈ ನಿರ್ಧಾರದಿಂದ ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳ ಮೇಲೆ ಎಷ್ಟು ಹೊರೆ ಬೀಳಲಿದೆ? ಬೆಲೆ ಏರಿಕೆಗೆ ತಕ್ಕಂತೆ ಜನರ ಆದಾಯವೂ ಹೆಚ್ಚಾಗುತ್ತದೆಯೇ ಎಂಬ ಪ್ರಶ್ನೆ ಈಗ ಸಾರ್ವಜನಿಕರಲ್ಲಿ ಮೂಡಿದೆ.

ಕ್ಯಾಮೆರಾ ಪರ್ಸನ್ ಹೇಮಂತ್ ಕುಮಾರ್ ಜೊತೆ ಸಂಗಮೇಶ್ ಸತ್ತಿಗೇರಿ, ಕರ್ನಾಟಕ ಟಿವಿ, ಹುಬ್ಬಳ್ಳಿ.

About The Author