Hubli News: ಕರ್ನಾಟಕ ರಾಜ್ಯೋತ್ಸವ ರನ್‌ಗೆ ಹೆಚ್‌ಸಿಜಿ ಸುಚಿರಾಯು ಆಸ್ಪತ್ರೆ ಮೆಡಿಕಲ್ ಪಾರ್ಟ್ನರ್

Hubli News: ಕನ್ನಡ ರಾಜ್ಯೋತ್ಸವದ ಸಂಭ್ರಮದ ಜೊತೆಗೆ ಆರೋಗ್ಯ ಜಾಗೃತಿ ಮೂಡಿಸುವ ಉದ್ದೇಶದಿಂದ ಹುಬ್ಬಳ್ಳಿಯಲ್ಲಿ ಕರ್ನಾಟಕ ರಾಜ್ಯೋತ್ಸವ ರನ್ ಆಯೋಜಿಸಲಾಗಿತ್ತು. 200ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ಈ ಓಟಕ್ಕೆ ಹೆಚ್‌ಸಿಜಿ ಸುಚಿರಾಯು ಆಸ್ಪತ್ರೆ ಮೆಡಿಕಲ್ ಪಾರ್ಟ್ನರ್ ಆಗಿ ವೈದ್ಯಕೀಯ ನೆರವು ನೀಡಿತು.

ಹುಬ್ಬಳ್ಳಿಯ ಡೆಕಾಥ್ಲಾನ್‌ನಲ್ಲಿ ಅಬ್ಬೆಷನ್ ರನ್ ಕ್ಲಬ್ ವತಿಯಿಂದ ಕರ್ನಾಟಕ ರಾಜ್ಯೋತ್ಸವ ರನ್ ಆಯೋಜಿಸಲಾಗಿತ್ತು. 3K ಮತ್ತು 5K ವಿಭಾಗಗಳಲ್ಲಿ ನಡೆದ ಓಟದಲ್ಲಿ 200ಕ್ಕೂ ಹೆಚ್ಚು ಮಂದಿ ಉತ್ಸಾಹದಿಂದ ಪಾಲ್ಗೊಂಡು ಆರೋಗ್ಯಕರ ಜೀವನಶೈಲಿಯ ಸಂದೇಶ ಸಾರಿದರು.

ಕಾರ್ಯಕ್ರಮದ ಮೆಡಿಕಲ್ ಪಾರ್ಟ್ನರ್ ಆಗಿದ್ದ ಹೆಚ್‌ಸಿಜಿ ಸುಚಿರಾಯು ಆಸ್ಪತ್ರೆ, ಓಟಗಾರರಿಗೆ ಮೂಲ ಆರೋಗ್ಯ ತಪಾಸಣೆ, ಆಂಬ್ಯುಲೆನ್ಸ್ ಹಾಗೂ ಅಗತ್ಯ ವೈದ್ಯಕೀಯ ನೆರವು ಒದಗಿಸಿತು.

ಈ ವೇಳೆ ಮಾತನಾಡಿದ ಆಸ್ಪತ್ರೆಯ ಮುಖ್ಯ ಕಾರ್ಯಾಚರಣಾಧಿಕಾರಿ ಮಂಜುನಾಥ್ ಹೆಚ್.ಡಿ., ಆರೋಗ್ಯ ಸೇವೆ ಆಸ್ಪತ್ರೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗಬಾರದು. ಜನರಲ್ಲಿ ಫಿಟ್‌ನೆಸ್ ಮತ್ತು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಮುಖ್ಯ ಎಂದು ಹೇಳಿದರು.

ಅಬ್ಬೆಷನ್ ರನ್ ಕ್ಲಬ್‌ನ ಅಕ್ಷಯ್ ಕುಮಾರ್ ಬೆಳ್ಳಾರಿ ಮಾತನಾಡಿ, ಓಟದ ಮೂಲಕ ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳಲು ಜನರನ್ನು ಪ್ರೇರೇಪಿಸುವುದು ಕಾರ್ಯಕ್ರಮದ ಉದ್ದೇಶ. ವೈದ್ಯಕೀಯ ನೆರವು ನೀಡಿದ ಹೆಚ್‌ಸಿಜಿ ಸುಚಿರಾಯು ಆಸ್ಪತ್ರೆಯ ಸಹಕಾರಕ್ಕೆ ಧನ್ಯವಾದ ಸಲ್ಲಿಸಿದರು.

ಕನ್ನಡ ರಾಜ್ಯೋತ್ಸವದ ಸಂಭ್ರಮದೊಂದಿಗೆ ಆರೋಗ್ಯ ಮತ್ತು ಫಿಟ್‌ನೆಸ್ ಜಾಗೃತಿ ಮೂಡಿಸಿದ ಕರ್ನಾಟಕ ರಾಜ್ಯೋತ್ಸವ ರನ್ ಯಶಸ್ವಿಯಾಗಿ ನಡೆಯಿತು.

About The Author