Health Tips: ನೀವು ಆಗ ತಾನೇ ಊಟ ಮಾಡಿರುತ್ತೀರಿ. ಆದರೆ 1 ಗಂಟೆ ಕಳೆದು ಮತ್ತೆ ನಿಮಗೆ ಹಸಿವಾಗುತ್ತದೆ. ಹಾಗಾದ್ರೆ ಅಷ್ಟು ಊಟ ಮಾಡಿದ್ರೂ, ನಿಮಗೆ ಮತ್ತೆ ಹಸಿವಾಗೋದ್ಯಾಕೆ..? ಇದಕ್ಕೆ ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಯಾಕೆ ಹೀಗಾಗುತ್ತದೆ ಎಂದರೆ, ನಿಮ್ಮ ಆಹಾರದಲ್ಲಿ ಹಸಿವಾಗದಂತೆ, ತೂಕ ಹೆಚ್ಚಿಸದಂತೆ ನಿಮ್ಮ ಆರೋಗ್ಯ ಅಭಿವೃದ್ಧಿಪಡಿಸುವ ಆಹಾರವಿಲ್ಲದಿದ್ದರೆ, ಈ ರೀತಿ ಪದೇ ಪದೇ ಹಸಿವಾಗುತ್ತದೆ. ಆಹಾರದಲ್ಲಿ ಬರೀ ಕಾರ್ಬೋಹೈಡ್ರೇಟ್ ಇದ್ದಲ್ಲಿ, ಅದರ ಸೇವನೆಯಿಂದ ನಿಮ್ಮ ದೇಹಕ್ಕೆ ಸಿಗಬೇಕಾದ ಶಕ್ತಿ ಎಷ್ಟು ಬೇಗ ಸಿಗುತ್ತದೆಯೋ, ಅಷ್ಟೇ ಬೇಗ ಖಾಲಿಯಾಗುತ್ತದೆ.
ಹಾಗಾಗಿ ನಿಮಗೆ ಮತ್ತೆ ಮತ್ತೆ ಹಸಿವಾಗಲು ಪ್ರಾರಂಭಿಸುತ್ತದೆ. ಅದಕ್ಕಾಗಿಯೇ ಆಹಾರದಲ್ಲಿ ಕಾರ್ಬೋಹೈಡರೇಟ್ ಜತೆಗೆ ಪ್ರೋಟೀನ್ ಅಂಶ ಕೂಡ ಇರಲಿ. ಅನ್ನದ ಜತೆಗೆ, ಹಸಿ ತರಕಾರಿ, ಪನೀರ್, ಎಗ್, ಕಡಲೆ ಪದಾರ್ಥ. ನೆನೆಸಿದ ದ್ವಿದಳ ಧಾನ್ಯಗಳ ಪದಾರ್ಥ. ಹೀಗೆ ಈ ಥರದ್ದನ್ನೆಲ್ಲ ತಿಂದರೆ, ನಿಮ್ಮ ದೇಹಕ್ಕೆ ಪ್ರೋಟೀನ್ ಸಿಗುತ್ತದೆ. ಆಗ ನಿಮಗೆ ಶಕ್ತಿ ಸಿಗುತ್ತದೆ. ದೇಹಕ್ಕೆ ಪ್ರೋಟೀನ್ ಸಿಗುತ್ತದೆ. ಆಗ ಪದೇ ಪದೇ ಹಸಿವಾಗುವುದಿಲ್ಲ.




