ಮಕ್ಕಳಿಗೆ ಹೆಚ್ಚು ಚಿಪ್ಸ್, ಮ್ಯಾಗಿ, ಜಂಕ್ ಫುಡ್ ಕೊಡ್ತೀರಾ..? ಹಾಗಾದ್ರೆ ಇಲ್ಲಿದೆ ಎಚ್ಚರಿಕೆಯ ಸಂದೇಶ

Health Tips: ಈಸಿಯಾಗಿ ತಯಾರಿಸಬಹುದಾದ ಮ್ಯಾಗಿ, ನೂಡಲ್ಸ್, ಸ್ವಲ್ಪ ಹಣ ನೀಡಿದರೂ ಸುಲಭವಾಗಿ ಸಿಗುವ ಚಿಪ್ಸ್, ಮೈದಾ ಹಾಕಿ ತಯಾರಿಸಿದ ಕೇಕ್, ಬಿಸ್ಕತ್ ಇತ್ಯಾದಿ ತಿಂಡಿಗಳನ್ನು ನೀವು ನಿಮ್ಮ ಮಕ್ಕಳಿಗೆ ಪದೇ ಪದೇ ನೀಡುತ್ತಿದ್ದೀರಾ..? ಹಾಗಾದ್ರೆ ನಿಮಗೆ 1 ಕೇಸ್ ಬಗ್ಗೆ ವಿವರಿಸಲಿದ್ದೇವೆ. ಕೇಳಿ..

ಓರ್ವ ಯುವತಿ ತಮ್ಮ ಮನೆಯ ಬಳಿ ನಡೆದ ಘಟನೆಯನ್ನು ವಿವರಿಸುತ್ತಾ ವೀಡಿಯೋ ಮಾಡಿದ್ದಾಳೆ. ಈಕೆಯ ಮಾತು ಕೇಳಿದ್ರೆ, ನೀವು ಬೆಚ್ಚಿ ಬೀಳೋದು ಗ್ಯಾರಂಟಿ. ಏಕೆಂದರೆ, ಇವರ ಮನೆಯ ಬಳಿ 1 ಮಗು ಪ್ರತಿದಿನ ಚಿಪ್ಸ್ ತಿನ್ನುತ್ತಿತ್ತಂತೆ. ಜತೆಗೆ ಕೇಕ್, ಬಿಸ್ಕತ್, ಮ್ಯಾಗಿ ಇದೆಲ್ಲ ಪದೇ ಪದೇ ತಿನ್ನುವ ರೂಢಿ ಆಕೆಗಿತ್ತು. ಪೋಷಕರು ಚಿಕ್ಕ ಮಗು ಅಂತಾ ಕೇಳಿದ್ದೆಲ್ಲಾ ತೆಗೆಸಿಕ“ಡುತ್ತಿದ್ದರು.

ಆದರೆ 1 ದಿನ ಆಕೆಗೆ ಹೊಟ್ಟೆ ನೋವಾಗಿ, ಆಕೆಯನ್ನು ಆಸ್ಪತ್ರೆಗೆ ಕರೆದ“ಯ್ಯಲಾಯಿತು. ಅಲ್ಲಿ ಆಕೆಯನ್ನು ಪರೀಕ್ಷಿಸಿದ ವೈದ್ಯರು. ಈಕೆಗೆ ಇಲ್ಲಿ ಚಿಕಿತ್ಸೆ ನೀಡುವುದು ಅಸಾಧ್ಯ. ಜಿಲ್ಲಾಸ್ಪತ್ರೆಗೆ ತಕ್ಷಣವೇ ಕರೆದ“ಯ್ಯಿರಿ ಅಂತಾ ಸಲಹೆ ನೀಡಿದರು. ಬಳಿಕ ಜಿಲ್ಲಾಸ್ಪತ್ರೆಯಲ್ಲಿ ಆಕೆಗೆ ಸ್ಕ್ಯಾನಿಂಗ್ ಎಲ್ಲವನ್ನೂ ಮಾಡಲಾಯಿತು.

ಬಳಿಕ ತಿಳಿದು ಬಂದಿದ್ದೇನೆಂದರೆ, ಆಕೆ ಸೇವಿಸುತ್ತಿದ್ದ ಆ ಜಂಕ್ ಫುಡ್ ಆಕೆಯ ದೇಹದಲ್ಲಿ ಜೀರ್ಣವಾಗದೇ, 1 ಕಡೆ ಸೇರಿತ್ತು. ಅದೇ ಆಹಾರ ಹಾಳಾಗಿ, ಆಕೆಗೆ ಹೊಟ್ಟೆನೋವು ಬಂದಿತ್ತು. ವೈದ್ಯರು ತರಹೇವಾರಿ ಚಿಕಿತ್ಸೆ ನೀಡಿ ಆಕೆಯನ್ನು ಬದುಕಿಸಲು ಪ್ರಯತ್ನಿಸಿದರಾದರೂ ಆಕೆ ಬದುಕುಳಿಯಲಿಲ್ಲ. ಹಾಗಾಗಿಯೇ ಮಕ್ಕಳಿಗೆ ಹೆಚ್ಚು ಜಂಕ್ ಫುಡ್ ನೀಡಬೇಡಿ ಎಂದು ಹೇಳುವುದು.

About The Author