Recipe: ಬೇಕಾಗುವ ಸಾಮಗ್ರಿ: 1 ಈರುಳ್ಳಿ, 10 ಎಸಳು ಬೆಳ್ಳುಳ್ಳಿ, 2 ಸ್ಪೂನ್ ಮೊಸರು, ಸ್ವಲ್ಪ ಕೊತ್ತೊಂಬರಿ ಸೊಪ್ಪು, ಖಾರದ ಪುಡಿ, ಅರಿಶಿನ ಪುಡಿ, ಗರಂ ಮಸಾಲೆ, ಉಪ್ಪು, 4ಸ್ಪೂನ್ ಎಣ್ಣೆ.
ಮಾಡುವ ವಿಧಾನ: ಕುಟ್ಟಣಿಗೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಮೊಸರು, ಕೊತ್ತೊಂಬರಿ ಸೊಪ್ಪು, ಖಾರದ ಪುಡಿ, ಅರಿಶಿನ ಪುಡಿ, ಗರಂ ಮಸಾಲೆ, ಉಪ್ಪು ಹಾಕಿ ತರಿ ತರಿಯಾಗಿ ಕುಟ್ಟಿ. ನಂತರ ಪ್ಯಾನ್ ಬಿಸಿ ಮಾಡಿ, ಅದರಲ್ಲಿ ಎಣ್ಣೆ ಹಾಕಿ, ಕುಟ್ಟಿದ ಮಿಶ್ರಣವನ್ನು ಹಾಕಿ, ಹಸಿ ವಾಸನೆ ಹೋಗುವವರೆಗೂ ಬೇಯಿಸಿದರೆ, ಈರುಳ್ಳಿ ಪಲ್ಯ ರೆಡಿ.




