Chanakya Neeti: ಅತಿಥಿಗಳನ್ನು ನಾವು ದೇವರಂತೆ ಕಾಣಬೇಕಂತೆ. ಹಾಗಾಗಿಯೇ ಭಾರತದಲ್ಲಿ ಅತಿಥಿ ದೇವೋಭವ ಎಂಬ ಮಾತಿದೆ. ಆದರೆ ಕೆಲವು ಅತಿಥಿಗಳನ್ನು ದೂರವಿಡಿ ಎನ್ನುತ್ತಾರೆ ಚಾಣಕ್ಯರು. ಹಾಾಗಾದ್ರೆ ಎಂಥ ಅತಿಥಿಗಳನ್ನು ನಾವು ದೂರವಿರಿಸಬೇಕು ಎಂದು ತಿಳಿಯೋಣ ಬನ್ನಿ..
ಲಾಭಕ್ಕಾಗಿ ಬರುವ ಅತಿಥಿಗಳನ್ನು ದೂರವಿಡಿ: ಕೆಲವರನ್ನು ಪದೇ ಪದೇ ಭೇಟಿಯಾದಾಗಲೇ ಅವರ ಮನಸ್ಥಿತಿ ಹೇಗಿದೆ ಎಂಬುದು ಅರ್ಥವಾಗುತ್ತದೆ. ನಿಮ್ಮ ಮನೆಗೆ ಬರುವ ಅತಿಥಿಗಳು ಬರೀ ಲಾಭಕ್ಕಾಗಿಯೇ ನಿಮ್ಮ ಮನೆಗೆ ಬರುವಂತಿದ್ದರೆ, ಅಂಥವರನ್ನು ದೂರವಿಡಿ. ಏಕೆಂದರೆ ಅಂಥ ಸಂಬಂಧಿಕರು ಲಾಭ ಸಿಗುವವರೆಗೂ ಮಾತ್ರ ಉತ್ತಮರಂತಿರುತ್ತಾರೆ. ಲಾಭ ಬರುವುದು ನಿಂತಾಗ, ನಿಮ್ಮನ್ನು ಅಪರಿಚಿತರಂತೆ ಕಾಣುತ್ತಾರೆ. ಇಂಥವರ ಸಂಬಂಧ ಇಲ್ಲದಿದ್ದರೇ ಉತ್ತಮ.
ಚಾಡಿ ಹೇಳುವ ಅತಿಥಿಗಳನ್ನು ದೂರವಿಡಿ: ನಿಮ್ಮ ಮನೆಗೆ ಬಂದು ಇತರ ಸಂಬಂಧಿಕರ ಜತೆಗೆ ನಿಮ್ಮ ಬಳಿ ಚಾಡಿ ಹೇಳುವ ಅತಿಥಿಗಳು ಬಂದರೆ, ಅಂಥವರನ್ನು ದೂರವಿಡಿ. ಏಕೆಂದರೆ, ಇಂದು ನಿಮ್ಮ ಬಳಿ ಬೇರೆಯವರ ಬಗ್ಗೆ ಚಾಡಿ ಹೇಳುವವರು, ನಾಳೆ ಬೇರೆ ಸಂಬಂಧಿಕರ ಬಳಿ ನಿಮ್ಮ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನು ಆಡೇ ಆಡುತ್ತಾರೆ. ಹಾಗಾಗಿ ಚಾಡಿ ಹೇಳುವ ಅತಿಥಿಗಳನ್ನು ದೂರವಿಡಿ.
ಪದೇ ಪದೇ ಬರುವ ಅತಿಥಿಗಳನ್ನು ದೂರವಿಡಿ: ನಿಮ್ಮ ಮನೆಗೆ ಅತಿಥಿಗಳು ಪದೇ ಪದೇ ಬರುತ್ತಿದ್ದಾರೆ ಎಂದರೆ, ಅವರ ಆ ರೀತಿಯ ಅಭ್ಯಾಸ ನಿಮ್ಮ ಸಮಯ ವ್ಯರ್ಥ ಮಾಡಬಹುದು. ಅಥವಾ ನಿಮ್ಮ ಖುಷಿಗೆ ಅಡ್ಡಿಯಾಗಬಹುದು. ಹಾಗಾಗಿ ಪದೇ ಪದೇ ಮನೆಗೆ ಬರುವ ಅತಿಥಿಗಳನ್ನು ನಯವಾಗಿಯೇ ದೂರವಿರಿಸಿ.
ನಿಮ್ಮ ಯಶಸ್ಸು ಕಂಡು ಅಸೂಯೆ ಪಡುವವರನ್ನು ದೂರವಿಡಿ: ನೀವು ಮನೆ, ಕಾರು ಖರೀದಿಸಿದ್ರಿ. ನಿಮ್ಮ ಮಕ್ಕಳು ಉತ್ತಮ ಫಲಿತಾಂಶ ಪಡೆದರು. ಅಥವಾ ನಿಮ್ಮ ಮಕ್ಕಳಿಗೆ ಉತ್ತಮ ಸಂಬಳದ ಕೆಲಸ ಸಿಕ್ಕರೆ, ನಿಮ್ಮ ಬಗ್ಗೆ ನಿಮ್ಮ ಸಂಬಂಧಿಕರು ಅಸೂಯೆ ಪಡುತ್ತಾರೆ ಎಂದಾದಲ್ಲಿ ಅಂಥವರಿಂದ ದೂರವಿರುವುದೇ ಉತ್ತಮ. ಏಕೆಂದರೆ, ಅಸೂಯೆ ಪಡುವವರು ಎಂದಿಗೂ ಅಪಾಯಕಾರಿ ಮನುಷ್ಯರೇ ಆಗಿರುತ್ತಾರೆ.
ಕೋಪ, ವಿನಾಕಾರಣ ವಾದ ಮಾಡುವವರನ್ನು ದೂರವಿಡಿ: ನಿಮ್ಮ ಬಳಿ ಮಾತನಾಡುತ್ತ ಸಣ್ಣ ಸಣ್ಣ ವಿಷಯಕ್ಕೂ ವಾದ ಮಾಡುವವರು. ಅಥವಾ ನೀವು ಮಾತನಾಡಿಸಿದರೂ ಹೆಚ್ಚು ಪ್ರತಿಕ್ರಿಯೆ ನೀಡದವರು. ನಿಮ್ಮನ್ನು ನಿರ್ಲಕ್ಷಿಸುವವರು ಅಥವಾ ನಿಮ್ಮ ಬಗ್ಗೆ ವಿನಾಕಾರಣ ಕೋಪ ಮಾಡುವವರನ್ನು ಸದಾ ದೂರವೇ ಇಡಿ. ಇಂಥವರು ನಿಮ್ಮ ಮಾನಸಿಕ ನೆಮ್ಮದಿಯನ್ನೇ ಹಾಳು ಮಾಡಬಲ್ಲರು.




