ಮಾಡಿರೋದು 1 ಸಿನಿಮಾ, ಗಂಡಸರ ಹಾಗೆ ನಡೆದುಕೋ: ಗಾನವಿ ಪರ ಮಾತನಾಡುತ್ತ ಜಗ್ಗಿಗೆ ಬೈದ ಮಂಜ

Bigg Boss Kannada: ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ ಮಂಜ ಮತ್ತೆ ರಿಎಂಟ್ರಿ ನೀಡಿದ್ದು, ಮಾತಿನ ಮಲ್ಲಯುದ್ಧ ಮತ್ತೆ ಶುರುವಾಗಿದೆ. ಗಾನವಿ ಮತ್ತು ಜಗ್ಗನ ಮಧ್ಯೆ ಜಗಳ ನಡೆಯುತ್ತಿದ್ದು, ಈ ವೇಳೆ ಗಾನವಿ ಪರ ಮಾತನಾಡಲು ಬಂದ ಮಂಜ, ಜಗ್ಗನನ್ನು ಕುರಿತು ಮಾಡಿರೋದು 1 ಸಿನಿಮಾ, ಗಂಡಸರ ಹಾಗೆ ನಡೆದುಕೋ ಎಂದು ಗಂಡಸ್ತನದ ಪಾಠ ಮಾಡಲು ಮುಂದಾಗಿದ್ದಾನೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವೀಕೇಂಡ್‌ನಲ್ಲಿ ಕಿಚ್ಚ ಸರಿಯಾಗಿ ಕ್ಲಾಸ್ ತೆಗೆದುಕ“ಳ್ಳುವ ಸಂಭವವಿದೆ ಎಂದು ಜನ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆಗಿದ್ದೇನು..? : ಬಿಗ್‌ಬಾಸ್‌ನಲ್ಲಿ ಟಾಸ್ಕ್ ನಡೆಯುತ್ತಿದ್ದು, ಮನೆಯಲ್ಲಿರುವ ಫಿಮೇಲ್ ಪರ್ಫಾಮರ್ಸ್ ಆಗಿರುವ ಗಾನವಿ, ಸೌಂದರ್ಯಾ, ಆಸಿಯಾ ಅವರನ್ನು ರಾಣಿಯರನ್ನಾಗಿ ಮಾಡಲಾಗಿದ್ದು, ಆ ರಾಣಿಯರನ್ನು ಓಲೈಸುವ ಕಾರ್ಯವನ್ನು ಮನೆಯಲ್ಲಿರುವ ಪುರುಷರು ಮಾಡಬೇಕಾಗಿದೆ.

ಆದರೆ ಗಾನವಿ ತಂಡದಲ್ಲಿ ಈ ಕೆಲಸಕ್ಕೆ ಯಾರೂ ಮುಂದೆ ಬಂದಿಲ್ಲವೆಂದು ಗಾನವಿ ಬೇಸರ ವ್ಯಕ್ತಪಡಿಸಿದ್ದು, ಜಗ್ಗಿ ತನಗೆ ಮನೆಗೆಲಸವಿದೆ ಎಂದು ಹೇಳಿದ್ದಾರೆ. ಆ ಕಾರಣಕ್ಕೆ ಗಾನವಿ ಕೈಲಾಗದ್ದಕ್ಕೆ ಮೈ ಕೈ ಪರಚಿಕ“ಳ್ಳುತ್ತಿದ್ದಾರೆಂದು ಜಗ್ಗಿ ಕಾಲೆಳೆದಿದ್ದಾರೆ. ಈ ವೇಳೆ ಜಗಳ ಶುರುವಾಗಿದೆ.

ಈ ವೇಳೆ ಗಾನವಿಗೆ ಮಂಜ ಓಲೈಸುವ ಕೆಲಸ ಮಾಡಿದ್ದಾನೆ. ಮಾನಾ ಮರ್ಯಾದೆ ಇಲ್ಲದವಳು ಎಂದು ಜಗ್ಗಿ ಕೋಪದಲ್ಲಿ ಗಾನವಿಗೆ ಬೈದಿದ್ದಾನೆ. ಗಾನವಿ ಕೂಡ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾಳೆ. ಈ ವೇಳೆ ಮಂಜ ಮಧ್ಯ ಪ್ರವೇಶಿಸಿದ್ದು, ಮಾಡಿದ್ದು 1 ಸಿನಿಮಾ ಗಂಡಸಿನ ಹಾಗೆ ನಡೆದುಕೋ ಎಂದಿದ್ದಾನೆ. ಸದ್ಯ ಈ ದೃಶ್ಯ ಇಂದು ಪ್ರಸಾರವಾಗಲಿದ್ದು, ಈ ಬಗ್ಗೆ ಕಿಚ್ಚ ವೀಕೇಂಡ್‌ನಲ್ಲಿ ಸರಿಯಾಗಿ ಕ್ಲಾಸ್ ತೆಗೆದುಕ“ಳ್ಳಬಹುದು ಎಂದು ಪ್ರೇಕ್ಷಕರು ಅಂದಾಜು ಮಾಡಿದ್ದಾರೆ.

About The Author