ಊಟದ ಸಮಯದಲ್ಲಿ ನನ್ನ ತಾಯಿ, ತಂದೆಯ ತೊಡೆಯ ಮೇಲೆ ಕುಳಿತುಕೊಳ್ಳುತ್ತಿದ್ದರು: ರಾಹುಲ್ ಗಾಂಧಿ

Political News: ನಿನ್ನೆ ದೆಹಲಿಯಲ್ಲಿ ಸೋನಿಯಾ ಗಾಂಧಿಯವರ ಜೀವನಾಧಾರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆದಿತ್ತು. ಈ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೆಲ ವಿಷಯಗಳನ್ನು ಹೇಳಿದ್ದಾರೆ.

ಪ್ರತಿದಿನ ತನ್ನ ತಾಯಿ ಸೋನಿಯಾ ಗಾಂಧಿಯವರು ಊಟದ ಸಮಯದಲ್ಲಿ ನನ್ನ ತಂದೆಯ ತೊಡೆಯ ಮೇಲೆ ಕುಳಿತುಕೊಳ್ಳುತ್ತಿದ್ದರು. ಪರಸ್ಪರ ಪ್ರೀತಿಯಿಂದ ಇರುತ್ತಿದ್ದರು. ಅವರನ್ನು ನೋಡಿ ನಾನು ಎಲ್ಲ ಮನೆಯಲ್ಲೂ ಪತಿ-ಪತ್ನಿ ಹೀಗೆ ಇರುತ್ತಾರೆ ಎಂದು ತಿಳಿದಿದ್ದೆ. ಆದರೆ, ನಾನು ಸ್ನೇಹಿತರ“ಬ್ಬರ ಮನೆಗೆ ಹೋದಾಗ, ಅಲ್ಲಿ ಪತಿ ಪತ್ನಿ ಬೇರೆ ಬೇರೆಯಾಗಿ ಊಟಕ್ಕೆ ಕುಳಿತಿದ್ದರು. ಆಗ ನನಗೆ ಇವರ ಪ್ರೀತಿಯ ಬೆಲೆ ತಿಳಿಯಿತು ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.

ಅಲ್ಲದೇ ನನ್ನ ತಂದೆ ತಾಯಿ ಜಗಳವಾಡುತ್ತಿರಲಿಲ್ಲ. ನನಗೂ ಪ್ರಿಯಾಂಕಾಗೂ ಕಂಪ್ಯೂಟರ್ ಖರೀದಿಸುವ ವಿಷಯಕ್ಕೆ ಇಬ್ಬರ ಮಧ್ಯೆ 1 ಬಾರಿ ಮಾತ್ರ ಭಿನ್ನಾಭಿಪ್ರಾಯ ವ್ಯಕ್ತವಾಗಿತ್ತು. ಆ ವೇಳೆ ಮಾತ್ರ ಅವರು ಜಗಳವಾಡಿದ್ದ ನೆನಪು. ಆದರೆ ಅವರು ಹೆಚ್ಚು ಜಗಳವಾಡುತ್ತಿರಲಿಲ್ಲ. ತುಂಬಾ ಅನ್ಯೋನ್ಯವಾಗಿದ್ದರು ಎಂದು ರಾಹುಲ್ ಗಾಂಧಿ ತಮ್ಮ ತಂದೆ ತಾಯಿ ಮಧ್ಯೆ ಇದ್ದ ಬಾಂಧವ್ಯವನ್ನು ನೆನಪಿಸಿಕ“ಂಡಿದ್ದಾರೆ.

ಇನ್ನು ರಾಹುಲ್ ನೀಡಿರುವ ಈ ಹೇಳಿಕೆಯ ಬಗ್ಗೆ ಕಾಂಗ್ರೆಸ್ಸಿಗರು ಮತ್ತು ಕಾಂಗ್ರೆಸ್ ಬೆಂಬಲಿಗರು ಬೆಂಬಲ ವ್ಯಕ್ತಪಡಿಸಿ, ಸಿಹಿ ನೆನಪು ಎಂಿದು ಹೇಳಿದರೆ, ಬಿಜೆಪಿಗರು ಮತ್ತು ಕಾಂಗ್ರೆಸ್ ವಿರೋಧಿಗಳು ಸೋನಿಯಾ ಗಾಂಧಿಯವರ ಪರ್ಸನಲ್ ವಿಷಯವನ್ನು ಎಲ್ಲರ ಮುಂದೆ ಹೇಳಿ ಅವರನ್ನು ರಾಹುಲ್ ಮುಜುಗರಪಡಿಸಿದ್ದಾರೆಂದು ಆರೋಪಿಸಿದ್ದಾರೆ.

ಆಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ಈ ಬಗ್ಗೆ ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಬರೆದಿದ್ದು, ಸಾರಿ ಮೇಡಂ.. ನಿಮ್ಮ ಜೀವನದ ಇಂಥ ವಿಶೇಷ ದಿನದಂದು ನಿಮಗೆ ಮುಜುಗರಪಡಿಸುವುದನ್ನು ನಿಮ್ಮ ಮಗ ತಪ್ಪಿಸಲಿಲ್ಲ. ಇಡೀ ದೇಶಕ್ಕೆ ಈ ಸತ್ಯ ಹಿಂದೆಯೇ ಅರಿವಾಗಿದೆ. ನಿಮಗೆ ಈಗಲಾದರೂ ಅರಿವಾಗಬಹುದು ಎಂದು ಭಾವಿಸಿದ್ದೇನೆ. ಈ ಪ್ರಾಡಕ್ಟ್ ಪದೇ ಪದೇ ಲಾಂಚ್ ಮತ್ತು ರಿ ಲಾಂಚ್ ಮಾಡುವುದನ್ನೂ ಮೀರಿದೆ ಎಂದು ವ್ಯಂಗ್ಯವಾಡಿದ್ದಾರೆ.

About The Author