Bollywood: ರಾಮಾಯಣದ ಭರ್ಜರಿ ಯಶಸ್ಸಿನ ಬಳಿಕ ಪುಟ್ಟಪರ್ತಿ ಭೇಟಿ ನೀಡಿದ ನಟಿ ಸಾಯಿ ಪಲ್ಲವಿ

Bollywood: ಸದ್ಯ ಭಾರತೀಯ ಸಿನಿ ಇಂಡಸ್ಟ್ರಿಯಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಸಿನಿಮಾ ಅಂದ್ರೆ ಅದು ರಾಮಾಯಣ ಭಾಗ 1. ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ, ಭರ್ಜರಿ ಕಲೆಕ್ಷನ್ ಮಾಡಿದೆ. ಈ ರೇಂಜಿಗೆ ಸಿನಿಮಾ ಯಶಸ್ಸು ಕಂಡ ಬಳಿಕ ಸಾಯಿ ಪಲ್ಲವಿ, ಪುಟ್ಟಪರ್ತಿ ಸಾಯಿ ಬಾಬಾ ಮಂದಿರಕ್ಕೆ ಭೇಟಿ ನೀಡಿದ್ದಾರೆ.

ಸಾಯಿ ಪಲ್ಲವಿ ಶ್ರೀ ಸತ್ಯ ಸಾಯಿ ಬಾಬಾ ಅವರ ಪರಮಭಕ್ತರಾಗಿದ್ದಾರೆ. ಹಾಗಾಗಿ ಬಾಬಾರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದ್ದಾರೆ. ಭಜನೆಯಲ್ಲೂ ಭಾಗಿಯಾಗಿದ್ದಾರೆ. ಸಾಯಿ ಪಲ್ಲವಿ ವಿಶೇಷ ದಿನಗಳಲ್ಲಿ ಸಾಯಿ ಬಾಬಾ ಸನ್ನಿಧಾನಕ್ಕೆ ಭೇಟಿ ನೀಡುತ್ತಾರೆ. ಇದೀಗ ಸಿನಿಮಾ ಯಶಸ್ಸು ಕಂಡ ಬಳಿಕ ಸಾಯಿ ಬಾಬಾರ ದರ್ಶನ ಮಾಡಿ ಧನ್ಯವಾದ ಸಲ್ಲಿಸಿದ್ದಾರೆ.

ಅಲ್ಲದೇ ಸಾಯಿ ಪಲ್ಲವಿ ಆಶ್ರಮಕ್ಕೆ ಬಂದಿದ್ದಾರೆಂದು ತಿಳಿದು, ಆಚೆ ಅವರ ಅಭಿಮಾನಿಗಳು ಕೂಡ ಆಕೆಯನ್ನ ನೋಡಲು ಕಾತುರದಿಂದ ಕಾಯುತ್ತಿದ್ದರು. ಈ ವೇಳೆ, ಸಾಯಿ ಪಲ್ಲವಿ ಅವರಡೆಗೆ ಕೈ ಬೀಸಿ, ಕೈ ಮುಗಿದು, ಇಂಥ ಪ್ರೀತಿ ತೋರಿಸಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದ್ದಾರೆ.

ಇನ್ನು ವಿಶೇಷ ಸಂಗತಿ ಅಂದ್ರೆ ಸಾಯಿ ಪಲ್ಲವಿ ಮಾತ್ರ ಸತ್ಯ ಸಾಯಿ ಬಾಬಾರ ಭಕ್ತೆಯಲ್ಲ. ಬದಲಾಗಿ ಅವರ ಮನೆಯವರೆಲ್ಲೂ ಸಾಯಿ ಬಾಬಾ ಭಕ್ತರೇ ಅಂತೆ. ಹಾಗಾಗಿಯೇ ಸಾಯಿ ಪಲ್ಲವಿಗೆ ಆ ಹೆಸರನ್ನಿರಿಸಿದ್ದು ಎಂದು ಅವರೇ ಹೇಳಿದ್ದಾರೆ.

About The Author