Mahabharat: ಗಾಂಧಾರಿ ಈ 2 ಸಮಯದಲ್ಲಿ ತನ್ನ ಕಣ್ಣಿಗೆ ಕಟ್ಟಿದ್ದ ಪಟ್ಟಿಯನ್ನು ಬಿಚ್ಚಿದ್ದಳು.. ಯಾಕೆ ಗೊತ್ತಾ..?

Mahabharat: ಮಹಾಭಾರತದಲ್ಲಿ ಗಾಂಧಾರಿ ತನ್ನ ಪತಿಗಾಗಿ ಪ್ರತೀ ಕ್ಷಣವೂ ಕಣ್ಣಿದ್ದೂ, ಕುರುಡರಂತಿರುತ್ತಾಳೆ. ಪತಿಗೆ ಕಣ್ಣು ಕಾಣದ ಕಾರಣ, ತಾನೂ ಕಣ್ಣಿಗೆ ಪಟ್ಟಿ ಕಟ್ಟಿ ಕುರುಡಿಯಂತೆ ಜೀವನ ಮಾಡುತ್ತಾಳೆ. ಆದರೆ ಆಕೆ 2 ಸಮಯದಲ್ಲಿ ಆ ವಸ್ತ್ರವನ್ನು ತೆಗೆಯುತ್ತಾಳೆ. ಹಾಗಾದ್ರೆ ಯಾರಿಗಾಗಿ ಮತ್ತು ಯಾಕಾಗಿ ಗಾಂಧಾರಿ ತನ್ನ ಕಣ್ಣಿಗೆ ಕಟ್ಟಿದ್ದ ಪಟ್ಟಿಯನ್ನು ತೆಗೆಯುತ್ತಾಳೆಂದು ತಿಳಿಯೋಣ ಬನ್ನಿ.

ಪ್ರಸಂಗ 1: ಮಹಾಭಾರತ ಯುದ್ಧ ನಡೆಯುವ ಸಂದರ್ಭದಲ್ಲಿ ದುರ್ಯೋಧನನಿಗೆ ಅತೀ ಹೆಚ್ಚು ಶಕ್ತಿಯ ಅವಶ್ಯಕತೆ ಇರುತ್ತದೆ. ಆಗ ಗಾಂಧಾರಿ, ನೀನು ಅತೀ ಹೆಚ್ಚು ಶಕ್ತಿಶಾಲಿಯಾಗಬೇಕು. ಸೋಲೋಪ್ಪಬಾರದು ಅಂದ್ರೆ, ನನ್ನ ಮುಂದೆ ಬೆತ್ತಲೆಯಾಗಿ ಬರಬೇಕು. ನನ್ನ ದೃಷ್ಟಿಯ ಶಕ್ತಿ ನಿನ್ನ ದೇಹ ಸೇರಬೇಕು. ಆಗ ನಿನ್ನನ್ನು ಯಾರೂ ಸೋಲಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾಳೆ.

ಅಮ್ಮನ ಮಾತನ್ನು ಕೇಳಿದ ದುರ್ಯೋಧನ, ನೀವು ಹೇಳಿದ ಹಾಗೇ ಆಗಲಿ ಎಂದು ಬೆತ್ತಲೆಯಾಗಿ ಅಮ್ಮನ ಬಳಿ ಹೋಗುತ್ತಿರುತ್ತಾನೆ. ಆಗ ಪ್ರತ್ಯಕ್ಷನಾದ ಕೃಷ್ಣ. ನೀನು ಅಮ್ಮನ ಮುಂದೆ ಬೆತ್ತಲೆಯಾಗಿ ಹೋಗಲು ಸಣ್ಣ ಮಗುವೇ..? ಯುದ್ಧ ಮಾಡುವಷ್ಟು ಹಿರಿಯನಾಗಿರುವ ನೀರು ಅಮ್ಮನ ಎದುರು ಹೀಗೆ ಬೆತ್ತಲೆಯಾಗಿ ಹೋಗಬಾರದು. ಪೂರ್ತಿ ನಿರ್ವಸ್ತ್ರನಾಗುವ ಬದಲು, ಗುಪ್ತಾಂಗ ಕಾಣದಂತೆ ವಸ್ತ್ರ ಹಾಕಿ ಹೋಗು ಎನ್ನುತ್ತಾನೆ.

ಆಗ ಕೃಷ್ಣನ ಮಾತು ಹೌದು ಎನ್ನಿಸಿ ದುರ್ಯೋಧನ ಗುಪ್ತಾಂಗ ಕಾಣದಂತೆ ಕವಚ ಹಾಕಿ ಹೋಗುತ್ತಾನೆ. ಗಾಂಧಾರಿಯ ದೃಷ್ಟಿ ಅವನ ಅಂಗದ ಮೇಲೆ ಬಿದ್ದರೂ, ಗುಪ್ತಾಂಗಕ್ಕೆ ಆ ಶಕ್ತಿ ತಾಗದೇ, ಆ ಭಾಗ ನಿಶ್ಶಕ್ತವಾಗಿಯೇ ಉಳಿಯುತ್ತದೆ. ಹಾಗಾಗಿ ದುರ್ಯೋಧನ ಮಹಾಭಾರತ ಯುದ್ಧದಲ್ಲಿ ಸಾವನ್ನಪ್ಪುತ್ತಾನೆ.

ಪ್ರಸಂಗ 2: ಮಹಾಭಾರತದಲ್ಲಿ ತನ್ನ ಪುತ್ರರೆಲ್ಲ ಮರಣವಾದ ಸಂದರ್ಭದಲ್ಲಿ ಗಾಂಧಾರಿ ಕಣ್ಣಿಗೆ ಕಟ್ಟಿದ್ದ ಪಟ್ಟಿ ಬಿಚ್ಚಿದಳು ಎಂದು ಹೇಳಲಾಗುತ್ತದೆ.

About The Author