Koppala News: ಬಿಜೆಪಿ ಗೆದ್ದರೆ 5 ಗ್ಯಾರಂಟಿಗಳೂ ವಾಪಸ್: ಸಚಿವ ಶಿವರಾಜ್ ತಂಗಡಗಿ ಎಚ್ಚರಿಕೆ..!

Koppala News: ಬಿಜೆಪಿ ಗೆದ್ದರೆ 5 ಗ್ಯಾರಂಟಿಗಳೂ ಕ್ಯಾನ್ಸಲ್ ಆಗತ್ತೆ ಎಂದು ಸಚಿವ ಶಿವರಾಜ್ ತಂಗಡಗಿ ಎಚ್ಚರಿಸಿದ್ದಾರೆ. Koppalaದ ಕನಕಗಿರಿಯಲ್ಲಿ ಕಾರ್ಯಕ್ರದಲ್ಲಿ ಭಾಷಣ ಮಾಡುವಾಗ ಮಾತನಾಡಿರುವ ಅವರು, ಮುಂಬರುವ ಚುನಾವಣೆಯಲ್ಲಿ ನೀವು ಬಿಜೆಪಿಯನ್ನು ಗೆಲ್ಲಿಸಿದರೆ, ನಿಮಗೆ ಈಗ ಸಿಗುತ್ತಿರುವ 5 ಗ್ಯಾರಂಟಿ ಯೋಜನೆಗಳೂ ರದ್ದಾಗುತ್ತದೆ ಎಂದು ತಂಗಡಗಿ ಎಚ್ಚರಿಸಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರಮುಖವಾಗಿ ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಯೋಜನೆಗಳು ಸಂಪೂರ್ಣವಾಗಿ ರದ್ದಾಗೋದು ಫಿಕ್ಸ್. ಈಗ ನೀವು ಫ್ರೀ ಬಸ್ ಸೌಲಭ್ಯ ಪಡೆದು ತವರು ಮನೆ, ಸಂಬಂಧಿಕರ ಮನೆ, ದೇವಾಲಯಗಳಿಗೆ ಸುಲಭವಾಗಿ ಪ್ರಯಾಣಿಸುತ್ತಿದ್ದೀರಿ. ಆದರೆ ಬಿಜೆಪಿ ಏನಾದರೂ ಗೆದ್ದು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ್ರೆ, ಈ ಎಲ್ಲ ಯೋಜನೆಗಳು ರದ್ದಾಗುತ್ತದೆ ಎಂದು ತಂಗಡಗಿ ಹೇಳಿದ್ದಾರೆ.

ಹಾಗಾಗಿ ಮುಂದಿನ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲ್ಲಿಸಬೇಕು ಅನ್ನೋ ರೀತಿಯಲ್ಲಿ ಸಚಿವರು ಹೇಳಿಕೆ ನೀಡಿದ್ದು, ಶಿವರಾಜ್ ತಂಗಡಗಿ ಹೇಳಿಕೆ ಇದೀಗ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಉಂಟು ಮಾಡಿದೆ.

About The Author