BSNL ಗ್ರಾಹಕರಿಗೆ ಡಬಲ್ ಧಮಾಕಾ.. 380 ದಿನ ವ್ಯಾಲಿಡಿಟಿ, ₹1 ಲಕ್ಷ ವಿಮೆ!

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗಾಗಿ ಆಕರ್ಷಕ ವಾರ್ಷಿಕ ರೀಚಾರ್ಜ್ ಯೋಜನೆಯೊಂದನ್ನು ಇದೀಗ ಮತ್ತೊಮ್ಮೆ ಪರಿಚಯಿಸಿದೆ. ಎಸ್ ‘2,449 ರೂಪಾಯಿ ಮೌಲ್ಯದ ಈ ವಿಶೇಷ ಯೋಜನೆಯಲ್ಲಿ, ಸಾಮಾನ್ಯ 365 ದಿನಗಳ ಬದಲಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಒಟ್ಟು 380 ದಿನಗಳ ಮಾನ್ಯತೆ ದೊರೆಯಲಿದೆ. ಅಂದರೆ ಒಮ್ಮೆ ರೀಚಾರ್ಜ್ ಮಾಡಿದರೆ 12 ತಿಂಗಳು ಮತ್ತು ಹೆಚ್ಚುವರಿ 15 ದಿನಗಳವರೆಗೆ ಮೊಬೈಲ್ ಸೇವೆ ಲಭ್ಯವಿರಲಿದೆ ಅಂತ ಹೇಳಲಾಗ್ತಿದೆ.

ಈ ಯೋಜನೆಯ ಇತರ ಪ್ರಮುಖ ಪ್ರಯೋಜನಗಳನ್ನು ನೋಡುವುದಾದರೆ, ಗ್ರಾಹಕರಿಗೆ ಪ್ರತಿದಿನ 2 ಜಿಬಿ ಹೈ-ಸ್ಪೀಡ್ ಡೇಟಾ ಸಿಗಲಿದೆ. ಸಾಮಾಜಿಕ ಜಾಲತಾಣಗಳ ಬಳಕೆ ಮತ್ತು ವೀಡಿಯೊ ವೀಕ್ಷಣೆಗೆ ಇದು ಸಾಕಾಗುತ್ತದೆ. ಇದರ ಜೊತೆಗೆ, ದೇಶಾದ್ಯಂತ ಅನಿಯಮಿತ ಧ್ವನಿ ಕರೆಗಳ ಸೌಲಭ್ಯ ಹಾಗೂ ಬ್ಯಾಂಕಿಂಗ್ ಅಲರ್ಟ್ ಮತ್ತು ಒಟಿಪಿ ಸಂದೇಶಗಳಿಗಾಗಿ ಪ್ರತಿದಿನ 100 ಎಸ್‌ಎಂಎಸ್ ಕಳುಹಿಸುವ ಅವಕಾಶವನ್ನೂ ಸಹ ನೀಡಿದ್ದಾರೆ.

ಸಾಮಾನ್ಯ ರೀಚಾರ್ಜ್ ಪ್ಲಾನ್‌ಗಳಿಗಿಂತ ಭಿನ್ನವಾಗಿ, ಈ ಯೋಜನೆಯಲ್ಲಿ ಗ್ರಾಹಕರಿಗೆ ಎರಡು ವಿಶೇಷ ವಿಮಾ ಸೌಲಭ್ಯಗಳನ್ನೂ ಒದಗಿಸಲಾಗಿದ್ದು, ಮೊದಲನೆಯದಾಗಿ, 1 ಲಕ್ಷ ರೂಪಾಯಿ ಮೌಲ್ಯದ ಅಪಘಾತ ಮರಣ ವಿಮಾ ರಕ್ಷಣೆ ಸಿಗಲಿದೆ. ಎರಡನೆಯದಾಗಿ, ಇತ್ತೀಚೆಗೆ ಹೆಚ್ಚುತ್ತಿರುವ ಆನ್‌ಲೈನ್ ವಂಚನೆ, ಫಿಶಿಂಗ್ ಮತ್ತು ಸೈಬರ್ ಕಳ್ಳತನದಿಂದ ರಕ್ಷಣೆ ನೀಡಲು 10 ಸಾವಿರ ರೂಪಾಯಿ ಮೌಲ್ಯದ ಸೈಬರ್ ವಿಮೆಯನ್ನು ಕೂಡ ನೀಡಲಾಗುತ್ತಿದೆ. ‘ಓರಿಯಂಟಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್’ ಸಹಯೋಗದಲ್ಲಿ ಈ ವಿಮಾ ಸೌಲಭ್ಯವನ್ನು ಕಲ್ಪಿಸಲಾಗಿದೆ ಅಂತ ಹೇಳಲಾಗ್ತಿದೆ.

ಆದಾಗ್ಯೂ, ಅಪಘಾತ ಹಾಗೂ ಸೈಬರ್ ವಿಮಾ ಕ್ಲೈಮ್‌ಗಳಿಗೆ ಸಂಬಂಧಪಟ್ಟ ಸಂಸ್ಥೆಯ ಷರತ್ತು ಮತ್ತು ನಿಯಮಗಳು ಅನ್ವಯವಾಗಲಿದ್ದು, ಒಟ್ಟಿನಲ್ಲಿ, ದೀರ್ಘಾವಧಿಯ ವ್ಯಾಲಿಡಿಟಿ ಜೊತೆಗೆ ವಿಮಾ ರಕ್ಷಣೆಯನ್ನೂ ಬಯಸುವ ಗ್ರಾಹಕರಿಗೆ ಬಿಎಸ್‌ಎನ್‌ಎಲ್‌ನ 2,449 ರೂಪಾಯಿ ಯೋಜನೆ ಉತ್ತಮ ಆಯ್ಕೆಯಾಗಿದೆ ಎಂದೇ ಹೇಳಬಹುದು..

About The Author