ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿ ಏರ್ಟೆಲ್, ಮಾರುಕಟ್ಟೆಯಲ್ಲಿ ಜಿಯೋ ಮತ್ತು ವಿ ಕಂಪನಿಗಳಿಗೆ ಸಖತ್ ಪೈಪೋಟಿ ನೀಡಲು ಸಜ್ಜಾಗಿದೆ.. ಎಸ್ ‘ಗ್ರಾಹಕರ ಜೇಬಿಗೆ ತಕ್ಕಂತೆ ಬಜೆಟ್ ಬೆಲೆಯಿಂದ ಹಿಡಿದು ದೀರ್ಘಾವಧಿಯವರೆಗೆ ಹಲವು ಆಕರ್ಷಕ ಪ್ರೀ ಪೇಯ್ಡ್ ಪ್ಲಾನ್ಗಳನ್ನ ಏರ್ಟೆಲ್ ಪರಿಚಯಿಸಿದ್ದು, ಅದರಲ್ಲೂ ಕಡಿಮೆ ಡೇಟಾ ಜೊತೆಗೆ ಪೂರ್ತಿ ತಿಂಗಳ ವ್ಯಾಲಿಡಿಟಿ ಬಯಸೋರಿಗೆ ಏರ್ಟೆಲ್ನ 219 ರೂಪಾಯಿ ಪ್ಲಾನ್ ಸಖತ್ ಯೂಸ್ಫುಲ್ ಆಗಿದೆ.
ಎಸ್ ‘ಏರ್ಟೆಲ್ನ ಈ 219 ರೂಪಾಯಿ ರೀಚಾರ್ಜ್ ಪ್ಲಾನ್ನಲ್ಲಿ ಗ್ರಾಹಕರಿಗೆ ಒಟ್ಟು 2GB ಡೇಟಾ ಸಿಗುತ್ತೆ. ಇದರ ಜೊತೆಗೆ ಪೂರ್ತಿ 30 ದಿನಗಳ ವ್ಯಾಲಿಡಿಟಿ, ಯಾವುದೇ ನೆಟ್ವರ್ಕ್ಗೆ ಅನ್ಲಿಮಿಟೆಡ್ ವಾಯ್ಸ್ ಕಾಲ್ಸ್ ಹಾಗೂ ತಿಂಗಳಿಗೆ ಒಟ್ಟು 300 ಎಸ್ಎಂಎಸ್ ಸೌಲಭ್ಯ ಕೂಡ ಲಭ್ಯವಿದೆ. ಕೇವಲ ಕರೆ ಮತ್ತು ಕನಿಷ್ಠ ಇಂಟರ್ನೆಟ್ ಬಳಸೋರಿಗೆ ಇದು ಬೆಸ್ಟ್ ಆಪ್ಷನ್.
ಇನ್ನು ಹೆಚ್ಚು ಡೇಟಾ ಮತ್ತು ಎಂಟರ್ಟೈನ್ಮೆಂಟ್ ಬಯಸೋರಿಗೆ ಏರ್ಟೆಲ್ನಲ್ಲಿ 1,199 ರೂಪಾಯಿ ಪ್ಲಾನ್ ಕೂಡ ಇದೆ. ಇದರಲ್ಲಿ ಬರೋಬ್ಬರಿ 84 ದಿನಗಳ ವ್ಯಾಲಿಡಿಟಿ ಜೊತೆಗೆ ಪ್ರತಿದಿನ 2.5GB ಡೇಟಾ, ಅನ್ಲಿಮಿಟೆಡ್ ಕಾಲ್ಸ್ ಮತ್ತು ನಿತ್ಯ 100 ಎಸ್ಎಂಎಸ್ ಸಿಗುತ್ತೆ. ವಿಶೇಷ ಅಂದ್ರೆ, ಈ ಪ್ಲಾನ್ನಲ್ಲಿ ಅಮೆಜಾನ್ ಪ್ರೈಮ್ ಲೈಟ್ ಮತ್ತು ಅಡೋಬ್ ಎಕ್ಸ್ಪ್ರೆಸ್ ಪ್ರೀಮಿಯಂ ಚಂದಾದಾರಿಕೆ ಕೂಡ ಉಚಿತವಾಗಿ ಸಿಗಲಿದೆ.
ಹಾಗೆಯೇ, 1,099 ರೂಪಾಯಿ ಪ್ಲಾನ್ ಕೂಡ ಗ್ರಾಹಕರ ಗಮನ ಸೆಳೆಯುತ್ತಿದ್ದು, ಇದರಲ್ಲಿ 84 ದಿನಗಳ ವ್ಯಾಲಿಡಿಟಿಯೊಂದಿಗೆ ಅನಿಯಮಿತ ಡೇಟಾ, ಅನ್ಲಿಮಿಟೆಡ್ ವಾಯ್ಸ್ ಕಾಲ್ಸ್ ಹಾಗೂ ಪ್ರತಿದಿನ 100 ಎಸ್ಎಂಎಸ್ ಸೌಲಭ್ಯ ಸಿಗುತ್ತೆ ಅಂಥ ಹೇಳಲಾಗ್ತಿದೆ.. ಒಟ್ಟಿನಲ್ಲಿ, 219 ರೂಪಾಯಿ ಬಜೆಟ್ ಪ್ಲಾನ್ನಿಂದ ಹಿಡಿದು 84 ದಿನಗಳ ಹೆವಿ ಡೇಟಾ ಪ್ಲಾನ್ಗಳವರೆಗೆ ಏರ್ಟೆಲ್ ಗ್ರಾಹಕರಿಗೆ ಭರ್ಜರಿ ಆಯ್ಕೆಗಳನ್ನ ಈ ಮೂಲಕ ನೀಡಿದ್ದು, ಈ ಪ್ಲಾನ್ ಬಗ್ಗೆ ನಿಮ್ಮನಿಸಿಕೆ ಏನು ಅಂತ ಕಾಮೆಂಟ್ ಮಾಡಿ..




