ಪಾಕಿಸ್ತಾನದ ವಾಯುಪಡೆ ವಿಮಾನ ಪತನ

ಇಸ್ಲಾಮಾಬಾದ್​ನ ಪಿಡಿಘೇಬ್​ ಎಂಬಲ್ಲಿ ಪಾಕಿಸ್ತಾನ ವಾಯುಪಡೆ ಪಿಎಎಫ್​ಗೆ ಸೇರಿದ ವಿಮಾನ ಅಪಘಾತಕ್ಕೀಡಾಗಿದೆ ಎಂದು ವಾಯುಪಡೆ ತಿಳಿಸಿದೆ.

Karnataka TV Contact


ತರಬೇತಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದ್ದು ಅದೃಷ್ಟವಶಾತ್​ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಈ ಮೂಲಕ 2020ರಲ್ಲಿ ಅಪಘಾತಕ್ಕೀಡಾದ ಐದನೇ ವಿಮಾನ ಇದಾಗಿದೆ.


ಮಾರ್ಚ್ 23ರಂದು ಪರೇಡ್​​ಗೆ ಪೂರ್ವಾಭ್ಯಾಸ ಮಾಡ್ತಿದ್ದ ಪಿಇಎಫ್​ ವಿಮಾನ ಇಸ್ಲಾಬಾದ್​​ನ ಶಕರ್​​ಪರಿಯನ್​ ಎಂಬಲ್ಲಿ ದುರಂತಕ್ಕೀಡಾಗಿತ್ತು. ಈ ಅವಘಡದಲ್ಲಿ ವಿಂಗ್​ ಕಮಾಂಡ್​ ಪ್ರಾಣ ಕಳೆದುಕೊಂಡಿದ್ರು. ಫೆಬ್ರವರಿ 12ರಂದು ತರಬೇತಿ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಮರ್ದಾನ್​​ ಜಿಲ್ಲೆಯ ತಖ್ತ್​ ಭಾಯ್​ ಎಂಬಲ್ಲಿ ಇನ್ನೊಂದು ವಿಮಾನ ದುರಂತಕ್ಕೀಡಾಗಿತ್ತು. ಇದೇ ತಿಂಗಳಲ್ಲಿ ಲಾಹೋರ್​​​ – ಮುಲ್ತಾನ್​​ ಬಳಿ ಮತ್ತೊಂದು ವಿಮಾನ ಅಪಘಾತಕ್ಕೀಡಾಗಿತ್ತು. ಆದ್ರೆ ಈ ಎರಡೂ ಅಪಘಾತಗಳಲ್ಲೂ ಪೈಲಟ್​ಗಳು ಪ್ರಾಣಾಪಾಯದಿಂದ ಪಾರಾಗಿದ್ರು.
ಇಂದೂ ಕೂಡ ಪಿಎಎಫ್​ನ ಇನ್ನೊಂದು ವಿಮಾನ ಅಪಘಾತಕ್ಕೀಡಾಗಿದ್ದು ಈ ಮೂಲಕ ತರಬೇತಿ ಕಾರ್ಯಾಚರಣೆ ಸಂದರ್ಭದಲ್ಲಿ ದುರಂತಕ್ಕೀಡಾದ ಮೂರನೇ ವಿಮಾನ ಇದಾಗಿದೆ.

ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯಾಲಯ ಕೊಳ್ಳೇಗಾಲದಿಂದ ನೇರಪರಿಹಾರ,
ಕೊಳ್ಳೆಗಾಲದ ಪ್ರಸಿದ್ಧ ಮನೆತನದವರಾದ ಮೋಡಿ ಬೆಟ್ಟಪ್ಪನವರು
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು, ನಿಮ್ಮ ಧ್ವನಿಯ ಮೂಲಕ
ಸಮಸ್ಯೆಗಳನ್ನ ಅರಿತು ಪ್ರಶ್ನೆ ಶಾಸ್ತ್ರದಿಂದ ಹಾಗೂ ನಿಮ್ಮ ನಾಮ ನಕ್ಷತ್ರದಿಂದ
ಫೋನಿನ ಮೂಲಕ ಸಂಪೂರ್ಣ ಭವಿಷ್ಯವನ್ನು ನಿಖರವಾಗಿ ತಿಳಿಸುತ್ತಾರೆ.
ಸ್ತ್ರೀ ಪುರುಷ ವಶೀಕರಣ, ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ, ಅತ್ತೆ-ಸೊಸೆ ಕಲಹ, ಹಣಕಾಸಿನ ತೊಂದರೆ, ಮದುವೆಯಲ್ಲಿ ಅಡೆತಡೆ, ಸತಿಪತಿ ಕಲಹ, ಸಂತಾನ ಸಮಸ್ಯೆ, ಆರೋಗ್ಯ, ಉದ್ಯೋಗ, ಸಾಲಬಾಧೆ, ಮಾಟ-ಮಂತ್ರ, ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರೆ ಕೊಳ್ಳೇಗಾಲ ಸ್ಮಶಾನಕಾಳಿ ಅಮ್ಮನವರ ಪೂಜಾ ಶಕ್ತಿಯಿಂದ ಕೇವಲ ೫ ದಿನದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ..
ಫೋನಿನ ಮೂಲಕವೇ ಪರಿಹಾರ
ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155

About The Author