Friday, January 3, 2025

Latest Posts

ಸಿಎಂ ಎದುರೇ ‘ನಿಖಿಲ್ ಎಲ್ಲಿದ್ದೀಯಪ್ಪಾ’ ಎಂದ ಅರ್ಚಕ- ತಬ್ಬಿಬ್ಬಾದ ಎಚ್ಡಿಕೆ..!

- Advertisement -

ಕಲಬುರಗಿ: ಸಿಎಂ ಕುಮಾರಸ್ವಾಮಿ ಎದುರೇ ಗಾಣಗಾಪುರದ ಅರ್ಚಕರು ನಿಖಿಲ್ ಎಲ್ಲಿದ್ದೀಯಪ್ಪಾ ಎಂದ ಪ್ರಸಂಗ ನಡೆದಿದೆ. ಈ ಮಾತು ಕೇಳುತ್ತಿದ್ದಂತೆ ಸಿಎಂ ಕುಮಾರಸ್ವಾಮಿ ಕೆಲಕಾಲ ತಬ್ಬಿಬ್ಬಾಗಿಬಿಟ್ರು.

 ಕಲಬುರಗಿಯ ಗಾಣಗಾಪುರದ ಶ್ರೀ ಗುರು ದತ್ತಾತ್ರೇಯ ದೇವಸ್ಥಾನಕ್ಕೆ ಸಿಎಂ ತೆರಳಿದ್ರು. ಈ ವೇಳೆ ಪೂಜೆ ಸಿದ್ಧತೆ ಮಾಡಿಕೊಳ್ತಿದ್ದ ಅರ್ಚಕ ದತ್ತಾತ್ರೇಯ ಇದ್ದಕ್ಕಿದ್ದಂತೆ ‘ನಿಖಿಲ್ ಎಲ್ಲಿದ್ದೀಯಪ್ಪಾ’ ಎಂದುಬಿಟ್ಟರು. ಇದನ್ನ ಕೇಳಿದ ಕೂಡಲೇ ಸಿಎಂ ಒಂದು ಕ್ಷಣ ಶಾಕ್ ನಿಂದ ತಬ್ಬಿಬ್ಬಾಗಿಬಿಟ್ರು. ಹೀಗಾಗಿ ದೇವಸ್ಥಾನದಲ್ಲಿ ಕೆಲಕಾಲ ಗೊಂದಲ ವಾತಾವರಣ ಏರ್ಪಟ್ಟಿತ್ತು.

ಆದರೆ ಅರ್ಚಕ ದತ್ತಾತ್ರೇಯ ತಮ್ಮ ಪುತ್ರನ ಹೆಸರು ನಿಖಿಲ್ ಅಂತ. ಆತ ದೀಪಕ್ಕೆ ಬತ್ತಿ ತರುತ್ತೇನೆಂದು ಹೇಳಿ ಇನ್ನೂ ಬಾರದಿದ್ದಕ್ಕೆ ಆತನನ್ನು ಕರೆದದ್ದಾಗಿ ಸಿಎಂಗೆ ಸಮಜಾಯಿಷಿ ನೀಡಿದ್ರು. ಬಳಿಕ ಅಲ್ಲಿ ಉಂಟಾಗಿದ್ದ ಗೊಂದಲಕ್ಕೆ ತೆರೆಬಿತ್ತು.

ಈ ಬಗ್ಗೆ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ-
https://www.youtube.com/watch?v=ClriTZUQEyU&feature=youtu.be

- Advertisement -

Latest Posts

Don't Miss