ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನ ರದ್ದು ಮಾಡಿದ ಬಳಿಕ ಕಣಿವೆ ರಾಜ್ಯದಲ್ಲಿ ನಡೆಯುತ್ತಿದ್ದ ಭಯೋತ್ಪಾದಕ ಚಟುವಟಿಕೆ ಗಣನೀಯವಾಗಿ ಕಡಿಮೆಯಾಗಿದೆ ಅಂತಾ ಜಿ. ಕಿಶನ್ ರೆಡ್ಡಿ ಬುಧವಾರ ರಾಜ್ಯಸಭೆಯಲ್ಲಿ ಹೇಳಿದ್ರು.

ಕಾಶ್ಮೀರದಲ್ಲಿ 370ನೇ ವಿಧಿ ರದ್ದುಪಡಿಸಿದ ನಂತರ ದೇಶದಲ್ಲಿ ಎಷ್ಟು ಭಯೋತ್ಪಾದಕ ಚಟುವಟಿಕೆ ನಡೆದಿವೆ..? ಈ ಭಯೋತ್ಪಾದನ ಚಟುವಟಿಕೆ ನಿಯಂತ್ರಿಸಲು ಸರ್ಕಾರ ಯಾವ ರೀತಿ ಕ್ರಮ ಕೈಗೊಂಡಿದೆ ಅಂತಾ ರಾಜ್ಯಸಭೆಯಲ್ಲಿ ಎಂ.ವಿ. ಶ್ರೇಯಮ್ಸ್ ಕುಮಾರ್ ಪ್ರಶ್ನೆ ಮಾಡಿದ್ರು. ಇದಕ್ಕೆ ಪ್ರತ್ಯುತ್ತರ ನೀಡಿದ ಜಿ. ಕಿಶನ್ ರೆಡ್ಡಿ ಆಗಸ್ಟ್ 2019ರಿಂದ ಸೆಪ್ಟಂಬರ್ 2020ರ ಅವಧಿಯಲ್ಲಿ ಅತ್ಯಂತ ಭಯಾನಕವಾದ ಭಯೋತ್ಪಾದಕ ಕೃತ್ಯಗಳು ಜಮ್ಮು ಕಾಶ್ಮೀರದಲ್ಲಿ ನಡೆದೇ ಇಲ್ಲ ಅಂತಾ ಹೇಳಿದ್ರು.




