Mumbai News: ತನ್ನ ಪ್ರೇಮಿ ಚೇತನ್ನನ್ನು ವಿವಾಹವಾಗಲು, ಅಪ್ಪ-ಅಮ್ಮ ಮದುವೆ ನಿಶ್ಚಯಿಸಿದ್ದ ಹುಡುಗ, ಉದ್ಯಮಿ ಕೇತನ್ ಹತ್ಯೆ ಮಾಡಿದ್ದ ಸೀಯಾ ಕೇಸ್ ಬಗ್ಗೆ ಇನ್ನ್ನ“ಂದು ಸುದ್ದಿ ಬಯಲಾಗಿದೆ.
ಇದೇ ನವೆಂಬರ್ನಲ್ಲಿ ಸಿಯಾ ಮತ್ತು ಕೇತನ್ ಮದುವೆ ನಿಗದಿಯಾಗಿತ್ತು. ರಾಜಸ್ತಾನದ ಅರಮನೆಯಲ್ಲಿ ಮದುವೆಗೆ ಸಿದ್ಧತೆ ನಡೆದಿದ್ದು, 17 ಕೋಟಿ ರೂಪಾಯಿ ಬಾಡಿಗೆಯೂ ನೀಡಲಾಗಿತ್ತು. ಆದರೆ ತನಗೆ ಈ ಮದುವೆ ಭಾರೀ ಇಷ್ಟವಾಗಿದೆ ಎಂಬಂತೆ ನಟಿಸಿದ್ದ ಸಿಯಾ ತನ್ನ ಪ್ರೀತಿ ಬಗ್ಗೆ ಮನೆಯಲ್ಲೂ ಹೇಳದೇ, ಕೇತನ್ ಬಳಿಯೂ ಹೇಳದೇ ನಾಟವಾಡಿದ್ದಳು. ಹತ್ಯೆಗೆ ಸಂಚು ರೂಪಿಸಿದ್ದಳು.
ಪ್ರಿ ವೆಡ್ಡಿಂಗ್ ಫೋಟೋ ಶೂಟ್ ನೆಪದಲ್ಲಿ ಕೇತನ್ನನ್ನೂ ಚೇತನ್ನನ್ನೂ 1 ಸ್ಥಳಕ್ಕೆ ಕರೆಸಿ, ಚೇತನ್ ಸಹಾಯದಿಂದ ಕೇತನ್ನ್ನು ಬೆಟ್ಟದಿಂದ ನೂಕಿ, ಹತ್ಯೆಯೂ ಮಾಡಿದ್ದಳು. ಬಳಿಕ ಇದು ಹತ್ಯೆಯಲ್ಲ, ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದು ಅನ್ನೋ ರೀತಿ ಕಥೆ ಕಟ್ಟಿದ್ದಳು. ಆದರೆ ಪೋಲೀಸರು ಈ ಕೇಸ್ ಬೇಧಿಸಿ, ಇದು ಹತ್ಯೆ ಅನ್ನುವುದನ್ನು ಸಾಬೀತು ಪಡಿಸಿದ್ದಾರೆ. ಅಲ್ಲದೇ ಸೀಯಾ ಮತ್ತು ಚೇತನ್ ತಾವು ಹತ್ಯೆ ಮಾಡಿರುವುದು ಸತ್ಯ ಎಂದು ಒಪ್ಪಿಕ“ಂಡಿದ್ದಾರೆ.
ಇದೀಗ ಆಕೆಯ ಬರ್ತ್ಡೇಯನ್ನು ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಬೇಕು ಎಂಬ ಕಾರಣಕ್ಕೆ, ಕೇತನ್ ತಂದೆ ಮಹಾಬಲೇಶ್ವರ್ದಲ್ಲಿ 70 ರೂಮ್ ಬುಕ್ ಮಾಡಿದ್ದರು. ಜೂನ್ 20ಕ್ಕೆ ಸೀಯಾ ಬರ್ತ್ಡೇ ಇತ್ತು. ಹೀಗಾಗಿ ಸಂಬಂಧಿಕರ ಜತೆ ಈ ಬರ್ತಡೇ ಮಾಡಿ, ಆಕೆಯ ಬರ್ತ್ಡೆ ಸ್ಪೆಶಲ್ ಮಾಡಬೇಕು ಎಂದು ಕೇತನ್ ತಂದೆ, ವಿಶಾಲ್ ಅಗರ್ವಾಲ್ ನಿರ್ಧರಿಸಿದ್ದರಂತೆ.
ಆದರೆ ಪಾರ್ಟಿ ಎಲ್ಲಾ ಬೇಡಾ, ನಾವಿಬ್ಬರೇ ಪ್ರಿ ವೆಡ್ಡಿಂಗ್ ಫೋಟೋ ಶೂಟ್ಗೆ ಟ್ರೆಕಿಂಗ್ ಹೋಗೋಣವೆಂದು ಸೀಯಾ ಕೇತನ್ಗೆ ಹೇಳಿ, ಹೇಗೋ ಪ್ಲಾನ್ ಸಕ್ಸಸ್ ಆಗುವಂತೆ ಮಾಡಿದ್ದಳು. ಬಳಿಕ ಅಲ್ಲಿ ಕೇತನ್ ಹತ್ಯೆ ನಡೆದಿತ್ತು.




