ಚೆನ್ನೈ: ಕಮಲ್ ಹಾಸನ್ ಭಾಷಣ ಮಾಡುತ್ತಿದ್ದ ವೇಳೆ ಅವರ ಮೇಲೆ ಚಪ್ಪಲಿ ಎಸೆದ ಘಟನೆ ಮಧುರೈನಲ್ಲಿ ನಡೆದಿದೆ.
ನಟ ಹಾಗೂ ಮಕ್ಕಳ್ ನೀದಿ ಮಯ್ಯಂ ಪಕ್ಷದ ಸಂಸ್ಥಾಪಕರೂ ಆದ ಕಮಲ್ ಹಾಸನ್ ಕೆಲ ದಿನಗಳ ಹಿಂದೆ ’ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಹಿಂದೂ, ಆತನ ಹೆಸರು ನಾಥೂರಾಮ್ ಗೋಡ್ಸೆ ’ ಅಂತ ಗಾಂಧೀಜೀಯವರನ್ನು ಹತ್ಯೆಗೈದ ಗೋಡ್ಸೆ ಬಗ್ಗೆ ಹೇಳಿಕೆ ನೀಡಿದ್ರು.
ಈ ಮಧ್ಯೆ ನಿನ್ನೆ ಸಂಜೆ ಮಧುರೈ ನಲ್ಲಿ ಪ್ರಚಾರದ ವೇಳೆ ಮಾತನಾಡುತ್ತಿದ್ದಾಗ ಮತ್ತೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.ಈ ವೇಳೆ ಬಿಜೆಪಿ ಕಾರ್ಯಕರ್ತರು ಸೇರಿದಂತೆ 11 ಮಂದಿ ವೇದಿಕೆ ಮೇಲಿದ್ದ ಕಮಲ್ ಹಾಸನ್ ಮೇಲೆ ಚಪ್ಪಲಿ ತೂರಿದರು. ಈ ಹಿನ್ನೆಲೆಯಲ್ಲಿ 11 ಮಂದಿ ಮೇಲೆ ದೂರು ದಾಖಲಾಗಿದೆ.
ಕಮಲ್ ಹಾಸನ್ ನೀಡಿದ್ದ ಹೇಳಿಕೆಯಿಂದ ಶಾಂತಿ ಸೌಹಾರ್ದತೆಗೆ ಧಕ್ಕೆಯಾಗುತ್ತೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತ ಬಿಜೆಪಿ ಸೇರಿದಂತೆ ಇತರೆ ಪಕ್ಷದ ಮುಖಂಡರು ಹೈಕೋರ್ಟ್ ಮೊರೆ ಹೋಗಿದ್ದಾರೆ.
ಕಮಲ್ ಹಾಸನ್ ಸಂಸ್ಥಾಪಿಸಿರೋ ಮಕ್ಕಳ್ ನೀದಿ ಮೈಯ್ಯಂ ಪಕ್ಷದಿಂದ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.