ಯಾವ ಮನುಷ್ಯನ ಮೇಲೆ ಶನಿದೇವರ ಕೃಪೆ ಇರುತ್ತದೆಯೋ, ಆತ ಜೀವನದಲ್ಲಿ ಖಂಡಿತವಾಗಿಯೂ ಉದ್ಧಾರವಾಗುತ್ತಾನೆ ಎಂಬ ನಂಬಿಕೆ ಇದೆ. ಅದೇ ಶನಿದೇವರ ವಕೃದೃಷ್ಟಿ ಯಾರ ಮೇಲೆ ಬೀಳುತ್ತದೆಯೋ, ಆತನಿಗೆ ಕಷ್ಟ ಕಟ್ಟಿಟ್ಟ ಬುತ್ತಿ ಅಂತಲೂ ಎಲ್ಲರಿಗೂ ಗೊತ್ತಿದೆ. ಹಾಗಾದ್ರೆ ಶನಿದೇವನ ಕೃಪೆ ನಮ್ಮ ಮೇಲಾಗಬೇಕು ಅಂದ್ರೆ ನಾವು ಏನು ಮಾಡಬೇಕು..? ಯಾವ ವಸ್ತುವನ್ನ ನಮ್ಮ ಬಳಿ ಇರಿಸಿಕೊಳ್ಳಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..


ಶನಿದೇವನ ಕೃಪೆ ನಿಮ್ಮ ಮೇಲಿರಬೇಕು ಅಂದ್ರೆ, ಪ್ರತೀ ಶನಿವಾರ ಆಂಜನೇಯನ, ಶನಿದೇವನ ದೇವಸ್ಥಾನಕ್ಕೆ ಹೋಗಬೇಕು. ದೇವರ ದರ್ಶನ ಮಾಡಬೇಕು. ಸಾಧ್ಯವಾದಲ್ಲಿ ಕಪ್ಪು ಎಳ್ಳು ದಾನ ಮಾಡಿ. ಮತ್ತು ಒಂದು ಬಟ್ಟಲಿನಲ್ಲಿ ಎಳ್ಳೆಣ್ಣೆ ಇಟ್ಟು, ಅದರಲ್ಲಿ ಮುಖ ನೋಡಿಕೊಂಡು ಆ ಎಣ್ಣೆಯನ್ನ ಶನಿ ದೇವಸ್ಥಾನಕ್ಕೆ ನೀಡಿ. ಹೀಗೆ ಮಾಡಿದ್ದಲ್ಲಿ, ನಿಮಗೆ ಸಾಡೇಸಾಥಿ, ಅಷ್ಟಮ, ಪಂಚಮ ಶನಿಯ ಕಾಟವಿದ್ದರೆ, ಕಷ್ಟ ಕಡಿಮೆಯಾಗುತ್ತದೆ.
ಅಲ್ಲದೇ, ಶನಿವಾರದಂದು ಮಾಂಸಾಹಾರ ಸೇವನೆ ಮಾಡಬೇಡಿ. ಪ್ರತಿದಿನ ಹನುಮಾನ್ ಚಾಲೀಸಾ ಪಠಿಸಿ ಅಥವಾ ಆಲಿಸಿ. ಶನಿದೇವರಿಗೆ ನೀಲಿ ಮತ್ತು ಕಪ್ಪು ಬಣ್ಣ ಪ್ರಿಯವಾಗಿದೆ. ಹಾಗಾಗಿ ಶನಿವಾರದಂದು ನೀಲಿ ಬಣ್ಣದ ಬಟ್ಟೆ ಧರಿಸಿ. ಕಪ್ಪು ಬಣ್ಣ ಧರಿಸಿದರೆ, ನಿಮಗೆ ಯಾವುದೇ ಸಮಸ್ಯೆ ಇರದಿದ್ದಲ್ಲಿ, ಕಪ್ಪು ಬಣ್ಣದ ಬಟ್ಟೆ ಧರಿಸಿ. ಯಾಕಂದ್ರೆ ಕೆಲವರಿಗೆ ಕಪ್ಪು ಬಣ್ಣದ ಬಟ್ಟೆ ಧರಿಸಿದರೆ, ಕೇಡಾಗುವ, ಮನಶಾಂತಿ ಹಾಳಾಗುವ ಸಂಭವವಿರುತ್ತದೆ. ಅಥವಾ ಕಪ್ಪು ಅಥವಾ ನೀಲಿ ಬಣ್ಣದ ಕರವಸ್ತ್ರವನ್ನ ಯಾವಾಗಲೂ ನಿಮ್ಮ ಜೇಬಿನಲ್ಲಿರಿಸಿಕೊಳ್ಳಿ.
ಅಥವಾ ಇದರ ಬದಲು ನೀಲಿ ಬಣ್ಣದ ಹೂವನ್ನ ಕೂಡ ಶನಿದೇವರಿಗೆ ಅರ್ಪಿಸಬಹುದು. ಜೊತೆಗೆ ನೀಲಿ ಬಣ್ಣದ ಹೂವನ್ನ ನಿಮ್ಮ ಜೇಬಿನಲ್ಲಿರಿಸಿಕೊಳ್ಳಿ. ಇನ್ನೊಂದು ಮುಖ್ಯವಾದ ವಿಷಯಅಂದ್ರೆ ಕಾಗೆಗೆ ಹಿಂಸೆ ನೀಡಬೇಡಿ. ಕಾಗೆ ಶನಿದೇವನ ವಾಹನವಾಗಿದೆ. ಕಾಗೆಗೆ ಹಿಂಸೆ ನೀಡಿದರೆ, ಶನಿದೇವನ ಕೆಂಗಣ್ಣಿಗೆ ಗುರಿಯಾಗುತ್ತೀರಿ.