ಯಾವುದಾದರೂ ಮುಖ್ಯ ವಸ್ತುಗಳನ್ನು ಕೊಂಡುಕೊಳ್ಳುವುದಿದ್ದರೆ, ಉತ್ತಮ ದಿನ, ಮುಹೂರ್ತವನ್ನು ನೋಡಬೇಕಾಗುತ್ತದೆ. ಹಾಗಾಗಿ ನಮಗೆ ಬೇಕಾದ ದಿನ ಬೇಕಾದ ವಸ್ತುಗಳನ್ನು ನಾವು ಕೊಂಡುಕೊಳ್ಳುವಂತಿಲ್ಲ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಭಾನುವಾರ ಭಾನುವಿಗೆ ಅಂದರೆ ಸೂರ್ಯನಿಗೆ ಸಂಬಂಧಪಟ್ಟ ದಿನವಾಗಿದೆ. ಹಾಗಾಗಿ ಈ ದಿನ ಕಬ್ಬಿಣದ ವಸ್ತು, ಫರ್ನಿಚರ್, ಯಂತ್ರಗಳನ್ನ, ಮನೆಯಲ್ಲಿ ಉಪಯೋಗಿಸುವ ವಸ್ತುಗಳನ್ನ ಕೊಂಡುಕೊಳ್ಳುವುದು ನಿಷಿದ್ಧವಾಗಿದೆ. ಹೀಗೆ ಮಾಡಿದರೆ, ಉತ್ತಮವಲ್ಲ ಎಂದು ಪರಿಗಣಿಸಲಾಗಿದೆ.

ಸೋಮವಾರದಂದು ಮೊಬೈಲ್, ಕಂಪ್ಯೂಟರ್, ಟಿವಿ, ಫ್ರಿಜ್, ಬೇಳೆ ಕಾಳು, ಪುಸ್ತಕ, ಸಂಗೀತ ಮತ್ತು ಕ್ರೀಡೆಗೆ ಸಂಬಂಧಿಸಿದ ವಸ್ತುಗಳನ್ನ ಖರೀದಿಸಬಾರದು.

ಮಂಗಳವಾರದಂದು ಏನನ್ನೂ ಖರೀದಿಸದಿದ್ದರೆ ಉತ್ತಮ. ಬೇಕಾದ್ರೆ ಹನುಮಂತನಿಗೆ ಅರ್ಪಿಸಲು ತುಳಸಿ, ವೀಳ್ಯದೆಲೆಯ ಮಾಲೆ, ಗಣಪತಿಗೆ ಹೂವು ಹಣ್ಣು ಖರೀದಿಸಿ. ಆದ್ರೆ ಮನೆಯಲ್ಲಿ ಉಪಯೋಗಿಸುವ ವಸ್ತುಗಳನ್ನ ಮಾತ್ರ ಖರೀದಿಸಬೇಡಿ. ಅದರಲ್ಲೂ ಮದುವೆ ಮುಂಜಿ ಸೇರಿ ಶುಭಕಾರ್ಯಗಳಿಗೆ ಬಟ್ಟೆಯನ್ನಂತೂ ಖರೀದಿಸಲೇಬೇಡಿ.
ಬುಧವಾರದಂದು ಅಕ್ಕಿ ಖರೀಸಿದಬಾರದು. ಅಲ್ಲದೇ ಕಟ್ಟಿಗೆ, ಪಾತ್ರೆ, ಔಷಧಿಗಳನ್ನ ಖರೀದಿಸಬಾರದು.
ಗುರುವಾರ ಗುರುಗಳ ದಿನವಾಗಿದೆ. ಹಾಗಾಗಿ ಈ ದಿನ ಸೂಕ್ಷ್ಮ ವಸ್ತುಗಳನ್ನು, ನೀರಿಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸಬಾರದೆನ್ನಲಾಗಿದೆ.
ಶುಕ್ರವಾರದಂದು ಲಕ್ಷ್ಮೀ ಪೂಜೆಗೆ ಮಹತ್ವ ನೀಡಲಾಗಿದೆ. ಈ ದಿನ ವಾಹನ, ಆಸ್ತಿ, ಎಲೆಕ್ಟ್ರಾನಿಕ್ ವಾಹನಗಳನ್ನ ಖರೀದಿಸಬಾರದೆನ್ನಲಾಗಿದೆ.
ಶನಿವಾರದಂದು ಕೂಡ ಏನನ್ನೂ ಖರೀದಿಸದಿದ್ದರೆ ಉತ್ತಮ. ಈ ದಿನವನ್ನು ಶನಿಯ ವಾರವೆಂದು ಪರಿಗಣಿಸಲಾಗಿದೆ. ಈ ದಿನ ಹನುಮಂತನಿಗೂ ಕೂಡ ಪೂಜೆ ಸಲ್ಲಿಸಲಾಗುತ್ತದೆ. ಈ ದಿನ ಮಸಾಲೆ ಪದಾರ್ಥ, ಧವಸ ಧಾನ್ಯ, ಬೀರು, ಪರ್ಸ್,ಇತ್ಯಾದಿ ವಸ್ತುಗಳನ್ನು ಖರಿಸಿದಬಾರದು.





