ರಾಮ-ಸೀತೆಯ ದಾಂಪತ್ಯ ಜೀವನ ಉತ್ತಮವಿಲ್ಲದಿರಲು ಕಾರಣವೇನು..?

ರಾಮ ಮತ್ತು ಸೀತೆ ದೂರವಾಗಲು ಹಲವು ಕಾರಣಗಳಿದೆ. ಶಾಪಗಳಿದೆ ಎಂದು ಪುರಾಣ ಕಥೆಗಳಲ್ಲಿ ಹೇಳಲಾಗಿದೆ. ಅಂಥ ಕಥೆಗಳಲ್ಲಿ ಗಿಣಿ ಶಾಪದಿಂದ ರಾಮ ಸೀತೆ ದೂರವಾದ ಕಥೆಯ ಬಗ್ಗೆ ಹೇಳಲಿದ್ದೇವೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಒಮ್ಮೆ ಸೀತೆ ಕಾಡಿನಲ್ಲಿ ಗೆಳತಿಯರೊಂದಿಗೆ ವಾಯುವಿಹಾರಕ್ಕೆ ಹೋಗಿದ್ದು, ಒಂದು ಮರದ ಕೆಳಗೆ ಕುಳಿತು ವಿಶ್ರಮಿಸುತ್ತಿದ್ದಳು. ಹೀಗೆ ವಿಶ್ರಮಿಸುತ್ತಿದ್ದಾಗ, ಅದೇ ಮರದ ಮೇಲೆ ಇದ್ದ ಜೋಡಿ ಗಿಳಿಗಳು ಸೀತೆ ರಾಮನನ್ನು ಸ್ವಯಂವರದ ಮೂಲಕ ಮದುವೆಯಾಗುತ್ತಾಳೆ ಎಂದುಮಾತನಾಡಿಕೊಳ್ಳುತ್ತದೆ. ಇದನ್ನು ನೋಡಿದ ಸೀತೆಗೆ ಆಶ್ಚರ್ಯವಾಗುತ್ತದೆ. ನನ್ನ ಭವಿಷ್ಯದ ಬಗ್ಗೆ ಈ ಗಿಳಿಗಳಿಗೆ ಹೇಗೆ ಗೊತ್ತು ಅಂತಾ ಸೀತೆ ಯೋಚಿಸುತ್ತಾಳೆ.

ನಂತರ ಆ ಗಿಳಿಗಳನ್ನ ಹಿಡಿಯಲು ತನ್ನ ಸ್ನೇಹಿತೆಯರಿಗೆ ಹೇಳುತ್ತಾಳೆ. ಗೆಳತಿಯರು ಗಿಳಿಗಳನ್ನ ಹಿಡಿದು ತಂದು ಸೀತೆ ಬಳಿ ಇರಿಸುತ್ತಾರೆ. ಆಗ ಸೀತೆ ಗಿಳಿಗಳನ್ನ ಕುರಿತು, ನಿಮಗೆ ನನ್ನ ಭವಿಷ್ಯದ ಬಗ್ಗೆ ಹೇಗೆ ಗೊತ್ತು..? ನೀವು ಯಾರು ಎಂದು ಕೇಳುತ್ತಾಳೆ.

ಆಗ ಆ ಗಿಳಿಗಳು, ನಾವು ಕಳೆದ ಜನ್ಮದಲ್ಲಿ ಮಹರ್ಷಿ ವಾಲ್ಮಿಕಿಯ ಆಶ್ರಮದಲ್ಲಿ ವಾಸಿಸುತ್ತಿದ್ದೆವು. ಆವಾಗ ರಾಮ ಸೀತೆಯ ಬಗ್ಗೆ ಅಲ್ಲಿ ಹೇಳುತ್ತಿದ್ದರು. ಹಾಗಾಗಿ ನಿಮ್ಮ ಬಗ್ಗೆ ನಮಗೆ ಗೊತ್ತು ಅಂತಾ ಹೇಳುತ್ತದೆ. ಆಗ ಸೀತೆ ತನ್ನ ಜೀವನದ ಬಗ್ಗೆ, ಜೀವನ ಸಂಗಾತಿಯ ಬಗ್ಗೆ ಪ್ರಶ್ನೆ ಕೇಳುತ್ತ ಹೋಗುತ್ತಾಳೆ. ಗಿಳಿಗಳು ಉತ್ತರಿಸುತ್ತ ಹೋಗುತ್ತದೆ. ಗಿಳಿಗಳು ಸೀತೆಗೆ ಸಂಬಂಧಿಸಿದ ಖುಷಿಯ ಸಂಗತಿಗಳನ್ನಷ್ಟೇ ಹೇಳುತ್ತದೆ. ಹಾಗಾಗಿ ಸೀತೆಗೆ ತನ್ನ ಭವಿಷ್ಯದ ಬಗ್ಗೆ ಇನ್ನಷ್ಟು ತಿಳಿಯಬೇಕೆಂಬ ಆಸೆಯಾಗುತ್ತದೆ.

ಆಗ ಆ ಗಿಳಿಗಳು ತಮ್ಮ ಅರಮನೆಗೆ ಬಂದಿರುವಂತೆ ಕೇಳಿಕೊಳ್ಳುತ್ತಾಳೆ. ಆದ್ರೆ ಗಿಳಿಗಳು ನಾವು ಪರಿಸರದಲ್ಲಿ ಹಾಯಾಗಿ, ಹಾರಾಡಿಕೊಂಡಿರಲು ಬಯಸುತ್ತೇವೆ. ನಾವು ಪಂಜರದಲ್ಲಿರಲು ಇಷ್ಟಪಡುವುದಿಲ್ಲ ಎಂದು ಗಂಡು ಗಿಳಿ ಹೇಳುತ್ತದೆ. ಆಗ ಸೀತೆ ಗಂಡು ಗಿಳಿಯನ್ನ ಪಂಜರದಿಂದ ಕಳಿಸಿ, ಹೆಣ್ಣು ಗಿಳಿಯನ್ನಷ್ಟೇ ಪಂಜರದಲ್ಲಿರಿಸಿಕೊಳ್ಳುತ್ತಾಳೆ.

ಆಗ ಗಂಡು ಗಿಳಿ ಸೀತೆಯನ್ನು ಕುರಿತು, ನನ್ನ ಪತ್ನಿ ಗರ್ಭಿಣಿಯಾಗಿದ್ದಾಳೆ. ನೀವು ಅವಳನ್ನು ಪಂಜರದಲ್ಲಿಟ್ಟರೆ, ಅವಳಿಗೆ ತೊಂದರೆಯಾಗುತ್ತದೆ. ದಯವಿಟ್ಟು ಅವಳನ್ನು ಬಿಟ್ಟುಬಿಡಿ ಎಂದು ಕೇಳುತ್ತದೆ. ಆದ್ರೆ ಸೀತೆ ಅದರ ಮಾತು ಕೇಳುವುದಿಲ್ಲ. ಹೆಣ್ಣು ಗಿಳಿಯನ್ನ ಪಂಜರದಲ್ಲೇ ಇರಿಸುತ್ತಾಳೆ. ಆಗ ಸಿಟ್ಟಾದ ಹೆಣ್ಣು ಗಿಳಿ, ನಾನು ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ನನ್ನನ್ನು ನನ್ನ ಪತಿಯಿಂದ ದೂರ ಮಾಡಿದ ಹಾಗೇ, ನೀನೂ ಕೂಡ ಗರ್ಭಿಣಿಯಾಗಿದ್ದಾಗ, ನಿನ್ನ ಪತಿಯಿಂದ ದೂರವಾಗು ಎಂದು ಶಾಪ ನೀಡಿ, ತಕ್ಷಣ ಮರಣ ಹೊಂದುತ್ತದೆ. ಆಗ ಸೀತೆಗೆ ತನ್ನ ತಪ್ಪಿನ ಅರಿವಾಗುತ್ತದೆಯಾದರೂ, ಸಮಯ ಕಳೆದು ಹೋಗಿರುತ್ತದೆ.

ಹಾಗಾಗಿ ಸೀತೆ ಗರ್ಭಿಣಿಯಾಗಿದ್ದ ಸಮಯದಲ್ಲಿ ರಾಮನಿಂದ ದೂರವಾಗಿ ಮಹರ್ಷಿ ವಾಲ್ಮೀಕಿಯ ಆಶ್ರಮದಲ್ಲಿರುತ್ತಾಳೆ. ನಂತರ ಲವ ಕುಶನಿಗೆ ಜನ್ಮ ನೀಡುತ್ತಾಳೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

About The Author