Horoscope: ಈ ರಾಶಿಯ ಪುರುಷರಿಗೆ ಶ್ರೀಮಂತ ಪತ್ನಿಯರು ಸಿಗುತ್ತಾರಂತೆ..

Horoscope: ನೀವು ಕೆಲವು ಜೋಡಿಗಳನ್ನು ನೋಡಿರಬಹುದು. ಎಲ್ಲ ಕಡೆ ಶ್ರೀಮಂತ ಪತಿ ಮತ್ತು ಹೆಚ್ಚೆನೂ ಶ್ರೀಮಂತಳಲ್ಲದ ಪತ್ನಿಯಿದ್ದರೆ, ಕೆಲವರಿಗೆ ಶ್ರೀಮಂತ ಪತ್ನಿಯೇ ಸಿಗುತ್ತಾಳೆ. ಕೆಲವು ಶ್ರೀಮಂತ ಹೆಣ್ಣು ಮಕ್ಕಳು ಆಸ್ತಿ ಅಂತಸ್ತು ನೋಡದೇ, ನಿಜವಾದ ಪ್ರೀತಿ ಮಾಡಿ ಮದುವೆಯಾಗಿರುತ್ತಾರೆ. ಅಥವಾ ಹುಡುಗನ ಗುಣ ನೋಡಿ, ಹೆಣ್ಣು ನೀಡುತ್ತಾರೆ. ಅಂಥ ರಾಶಿಯವರ ಬಗ್ಗೆ ನಾವಿಂದು ಹೇಳಲಿದ್ದೇವೆ.

ವೃಷಭ: ವೃಷಭ ರಾಶಿಯವರಲ್ಲಿ ಹೆಚ್ಚಿನವರಿಗೆ ಶ್ರೀಮಂತ ಪತ್ನಿ ಸಿಗುವ ಸಾಧ್ಯತೆಗಳಿರುತ್ತದೆ. ಹಾಗಂತ ವೃಷಭ ರಾಶಿಯವರು ಸ್ವಭಾಮಾನ ಬಿಡುವವರಲ್ಲ. ಪತ್ನಿ ಶ್ರೀಮಂತೆ ಇದ್ದರೂ, ಮನೆ ನಡೆಸಲು ತಮ್ಮ ದುಡ್ಡನ್ನೇ ಖರ್ಚು ಮಾಡುತ್ತಾರೆ.

ಸಿಂಹ: ಧೈರ್ಯಶಾಲಿ ರಾಶಿಯಾಗಿರುವ ಸಿಂಹ ರಾಶಿಯವರ ನಡುವಳಿಕೆ, ಗಾಂಭೀರ್ಯ ಶ್ರೀಮಂತ ಮಹಿಳೆಯನ್ನು ಸೆಳೆಯುವ ರೀತಿ ಇರುತ್ತದೆ. ಹಾಗಾಗಿ ಹೆಚ್ಚಿನ ಶ್ರೀಮಂತ ಮಹಿಳೆಯರು ಸಿಂಹ ರಾಶಿಯವರ ಗುಣಕ್ಕೆ ಮೆಚ್ಚಿ ಮದುವೆಯಾಗುತ್ತಾರೆ.

ತುಲಾ: ನೇರ ನುಡಿ, ಸ್ವಾಭಿಮಾನ, ಶಿಸ್ತು ಇರುವ ರಾಶಿ ಅಂದ್ರೆ ಅದು ತುಲಾ ರಾಶಿ. ಇವರ ಮಾತು ಕೂಡ ಆಕರ್ಷಕವಾಗಿರುತ್ತದೆ. ಬರೀ ಮಹಿಳೆಯರು ಮಾತ್ರವಲ್ಲ, ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಇವರ ಮಾತಿಗೆ ಮರಳಾಗುವವರೇ ಹೆಚ್ಚು. ಇವರ ಈ ಗುಣ ಸ್ವಭಾವವೇ ಶ್ರೀಮಂತರನ್ನು ಇವರತ್ತ ಸೆಳೆಯುವಂತೆ ಮಾಡುತ್ತದೆ.

ಮೀನ: ಮೀನ ರಾಶಿಯವರು ಪಾಪದ ಸ್ವಭಾವದವರು. ಗೌರವ, ಪ್ರೀತ, ಕಾಳಜಿ ತೋರುವ ಇವರ ಗುಣವೇ ಆಕರ್ಷಕವಾಗಿರುತ್ತದೆ. ಇದೇ ಗುಣಕ್ಕೆ ಮನಸೋತು, ಶ್ರೀಮಂತ ಮಹಿಳೆಯ ಜತೆ ಇವರ ವಿವಾಹವಾಗುವ ಸಾಧ್ಯತೆ ಇರುತ್ತದೆ.

About The Author