Thursday, December 5, 2024

Latest Posts

ಸುಳ್ಳಾಯ್ತು ದ್ವಾರಕಾನಾಥ್ ಗುರೂಜಿ HMT ಭವಿಷ್ಯ- ನಿಜವಾಗಲಿಲ್ಲ ಸಿಎಂಗೆ ಕೊಟ್ಟಿದ್ದ ಭರವಸೆ

- Advertisement -

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲನುಭವಿಸಿದ ಮೈತ್ರಿ ಪಕ್ಷಗಳಿಗೆ ಮುಖಭಂಗವಾಗಿದೆ.ಇನ್ನು ಚುನಾವಣಾ ಫಲಿತಾಂಶದ ಬಗ್ಗೆ ರಾಜಕೀಯ ವಿಮರ್ಶೆ ಹೊರತುಪಡಿಸಿ ಕೆಲ ಜ್ಯೋತಿಷಿಗಳು ಹಾಗೂ ತೆಂಗಿನ ಕಾಯಿ ಕೂಡ ಭವಿಷ್ಯ ನುಡಿದಿತ್ತು. ಈ ಪೈಕಿ ತೀರಾ ಆಸಕ್ತಿ ಕೆರಳಿಸಿದ್ದೇ ದ್ವಾರಕಾನಾಥ್ ಗುರೂಜಿ ಸಿಎಂ ಕುಮಾರಸ್ವಾಮಿಗೆ ನುಡಿದಿದ್ದ ಭವಿಷ್ಯ.

ಚುನಾವಣೆಗೂ ಮುನ್ನ ಸಾಕಷ್ಟು ದೇವಸ್ಥಾನ, ಪೂಜೆ ಪುನಸ್ಕಾರಗಳನ್ನು ಮಾಡಿದ್ದ ಸಿಎಂ ಕುಮಾರಸ್ವಾಮಿ, ಬೆಂಗಳೂರಿನ ದ್ವಾರಕಾನಾಥ್ ಗುರೂಜಿ ಮೊರೆ ಹೋಗಿದ್ರು. ಈ ಬಾರಿ ರಾಜ್ಯದಲ್ಲಿ ಮೈತ್ರಿ ಸರ್ಕಾರವೇ ಗೆಲ್ಲಬೇಕೆನ್ನೋ ನಿಟ್ಟಿನಲ್ಲಿ ಪೂಜೆ ಕೂಡ ಮಾಡಿಸಿದ್ರು. ಆಗ ದ್ವಾರಕಾನಾಥ್ ಗುರೂಜಿ, ರಾಜ್ಯದಲ್ಲಿ ನೀವು ಬಹುಮತ ಪಡೆಯೋದಕ್ಕೆ ಆಗಲಿಲ್ಲ ಅಂದ್ರೂ ‘HMT’ ಅಂದ್ರೆ ಹಾಸನ, ಮಂಡ್ಯ, ತುಮಕೂರಿನಲ್ಲಿ ಗೆಲುವು ನಿಮ್ದೇ, ನೀವ್ ಯೋಚ್ನೆ ಮಾಡ್ಬೇಡಿ ಅಂತ ಸಿಎಂಗೆ ಧೈರ್ಯ ಹೇಳಿ ಕಳುಹಿಸಿದ್ರು.

ಆದ್ರೆ ಗುರೂಜಿ ಅದ್ಯಾವ ಲೆಕ್ಕಾಚಾರದ ಮೇಲೆ ಆ ಮಾತು ಹೇಳಿದ್ರೊ ಗೊತ್ತಿಲ್ಲ, ಆದ್ರೆ ಅವರ ಭವಿಷ್ಯ ಸುಳ್ಳಾಗಿಹೋಗಿದೆ. ‘HMT’ ಯಲ್ಲಿ ಹಾಸನ ಕ್ಷೇತ್ರ ಹೊರತುಪಡಿಸಿ ತುಮಕೂರು ಮತ್ತು ಮಂಡ್ಯದಲ್ಲಿ ಸೋತು ಸುಣ್ಣವಾಗಿದ್ದಾರೆ. ಒಂದೆಡೆ ಪುತ್ರ ನಿಖಿಲ್ ಕುಮಾರ್ ಸೋಲು ಮತ್ತೊಂದೆಡೆ ತಮ್ಮ ತಂದೆ ದೇವೇಗೌಡರ ಸೋಲು ಇವೆರಡನ್ನೂ ಸಿಎಂ ಕುಮಾರಸ್ವಾಮಿ ನಿರೀಕ್ಷೆ ಮಾಡಿಯೇ ಇರಲಿಲ್ಲ. ಇದರಿಂದ ಜರ್ಜರಿತರಾಗಿರೋ ಸಿಎಂ ಕುಮಾರಸ್ವಾಮಿ, ನನ್ ಲೆಕ್ಕಾಚಾರ ತಪ್ಪಿದೆ, ಆದ್ರೆ ಗುರೂಜಿ ಹೇಳಿದ ಭವಿಷ್ಯ ಹೇಗಪ್ಪಾ ಸುಳ್ಳಾಯ್ತು ಅಂತ ತಮ್ಮನ್ನ ತಾವೇ ಪ್ರಶ್ನಿಸಿಕೊಳ್ಳೋಹಾಗಾಗಿದೆ.

ಇನ್ನೊಂದೆಡೆ ರಾಜ್ಯದ 25 ಸ್ಥಾನಗಳನ್ನು ಬಾಚಿಕೊಂಡಿರೋ ಬಿಜೆಪಿ ಮಾತ್ರ ಮೈತ್ರಿ ಪಕ್ಷಗಳನ್ನ ನೋಡಿ ರಣಕೇಕೆ ಹಾಕುತ್ತಿದೆ.

ಮಂಡ್ಯದಲ್ಲಿ ಟ್ರಾಲ್ ಆಗ್ತಿದ್ದಾರೆ ಜೆಡಿಎಸ್ ನಾಯಕರು. ಯಾಕೆ ಅಂತ ತಿಳ್ಕೊಬೇಕಾದ್ರೆ ಈ ವಿಡಿಯೋ ತಪ್ಪದೇ ನೋಡಿ.

- Advertisement -

Latest Posts

Don't Miss