Saturday, October 12, 2024

Latest Posts

‘ಬಂಡಾಯ ಶುರುವಾಗೋ ಮುಂಚೆಯೇ ಗೌರವದಿಂದ ರಿಸೈನ್ ಮಾಡಿ’- ಸಿ.ಟಿ.ರವಿ

- Advertisement -

ಚಿಕ್ಕಮಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಗೆಲುವಿನ ಹಿನ್ನೆಲೆಯಲ್ಲಿ ಸಿಎಂಗೆ ಬಿಜೆಪಿ ಮುಖಂಡ ಸಿ.ಟಿ ರವಿ ಸಲಹೆ ನೀಡುವ ಮೂಲಕ ವ್ಯಂಗ್ಯವಾಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ.ರವಿ, ಕಾಂಗ್ರೆಸ್-ಜೆಡಿಎಸ್ ಗೆ ಒಂದೊಂದು ಕ್ಷೇತ್ರದ ಸಮಪಾಲು ಅಲ್ಲ, ಸಮಪಾಲು ಮನೆಹಾಳು ಎಂಬ ಸ್ಥಿತಿಗೆ ಬಂದಿದ್ದಾರೆ. ಹೀಗಾಗಿ ಸಿಎಂ ನೈತಿಕ ಹೊಣೆ ಹೊತ್ತು, ರಾಜೀನಾಮೆ ನೀಡಬೇಕು ಎಂದು ಟೀಕೆ ಮಾಡಿದರು.

ಇನ್ನು ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ಸ್ಪರ್ಧಿಸಿ ಸೋತಿರುವ ನಿಖಿಲ್ ಕುಮಾರಸ್ವಾಮಿ ಬಗ್ಗೆ ಮಾತನಾಡಿದ ಸಿ.ಟಿ.ರವಿ ಸಿಎಂ ಮಗನೇ ಹೆಣ್ಣು ಮಗಳ ವಿರುದ್ಧ ಸೋತಿದ್ದಾರೆ. ಜನ ನಿಮ್ಮ ಸರ್ಕಾರ ಬೇಡವೆಂದು ಹೇಳಿದ್ದಾರೆ.ಮೈತ್ರಿ ಸರ್ಕಾರದಲ್ಲಿ ಒಬ್ಬರ ಮೇಲೆ ಒಬ್ಬರಿಗೆ ವಿಶ್ವಾಸವಿಲ್ಲ.ಹೀನಾಯ ಸೋಲಿನಲ್ಲೂ ಸಿಎಂ ಬಂಡತನ ತೋರಿದ್ರೆ ಬಂಡಾಯ ಕೂಡ ಜಾಸ್ತಿಯಾಗುತ್ತೆ. ಬಂಡಾಯದಿಂದ ಸರ್ಕಾರ ಬೀಳೋ ಬದಲು, ಗೌರವದಿಂದ ರಾಜೀನಾಮೆ ನೀಡಿ ಎಂದು ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ.

ಮೋದಿ ಬಗ್ಗೆ ವಿನಯ್ ಗುರೂಜಿ ಏನೇ ಹೇಳಿದ್ರು ಗೊತ್ತಾ…? ಈ ವಿಡಿಯೋ ತಪ್ಪದೇ ನೋಡಿ.

https://www.youtube.com/watch?v=37KnWEAonRk

- Advertisement -

Latest Posts

Don't Miss