ಒಂದೊಂದು ರಾಶಿಯವರಿಗೂ ಒಂದೊಂದು ಗುಣ ಸ್ವಭಾವವಿರುವಂತೆ, ಕೆಲ ರಾಶಿಯವರಿಗೆ ಐಶಾರಾಮಿ ಜೀವನ ಅಂದ್ರೆ ತುಂಬಾ ಇಷ್ಟ ಅಂತಾ ಹೇಳಲಾಗುತ್ತದೆ. ಅಂಥ 5 ರಾಶಿಯವರ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಮಿಥುನ: ಅವಶಕ್ಯತೆಗೆ ಎಷ್ಟು ಬೇಕೋ, ಅಷ್ಟಕ್ಕೆ ಖರ್ಚು ಮಾಡಬೇಕೆಂಬ ನಿಯಮ ಅನುಸರಿಸುವ ಇವರು, ಅವಶ್ಯಕತೆ ಇರುವ ವಸ್ತುವಿಗೆ ಎಷ್ಟು ಬೇಕಾದರೂ ಖರ್ಚು ಮಾಡಲು ಹಿಂಜರಿಯುವುದಿಲ್ಲ. ಉದಾಹರಣೆಗೆ ಊಟ, ಬಟ್ಟೆ. ಹೊಟೇಲಿಗೆ ಹೋದಾಗ, ಅಥವಾ ಮನೆಗೆ ಏನಾದರೂ ತಿಂಡಿ ತಿನಿಸು, ದಿನಸಿ ಸಾಮಾನು ತರುವಾಗ ಉತ್ತಮ ಗುಣಮಟ್ಟದ ಆಹಾರವನ್ನೇ ತರುತ್ತಾರೆ. ಬಟ್ಟೆಗೆ ಹೆಚ್ಚಿನ ಬೆಲೆ ಇದ್ದರೂ, ಉತ್ತಮ ಕ್ವಾಲಿಟಿಯದ್ದಾಗಿದ್ದರೆ, ಅದನ್ನೇ ಕೊಂಡುಕೊಳ್ಳುತ್ತಾರೆ.
ಸಿಂಹ: ಹಣ ಖರ್ಚು ಮಾಡುವುದರಲ್ಲಿ ಸಿಂಹ ರಾಶಿಯವರು ಎತ್ತಿದ ಕೈ. ಇವರು ತಾವಷ್ಟೇ ಕಾಸ್ಟ್ಲಿ ಉಡುಗೊರೆ ತೆಗೆದುಕೊಳ್ಳುವುದಷ್ಟೇ ಅಲ್ಲದೇ, ಬೇರೆಯವರಿಗೂ ಉತ್ತಮ ಗುಣಮಟ್ಟದ ಗಿಫ್ಟ್ಗಳನ್ನ ನೀಡುತ್ತಾರೆ. ಹೇಗೆ ಹಣ ಸಂಪಾದಿಸುತ್ತಾರೋ, ಅದೇ ರೀತಿ ಖರ್ಚು ಮಾಡುತ್ತಾರೆ. ಬೇರೆಯವರಿಗೆ ಸಹಾಯ ಮಾಡುವಾಗಲೂ ಕೂಡ ಉದಾರ ಮನಸ್ಸಿನಿಂದ ಸಹಾಯ ಮಾಡುತ್ತಾರೆ.
ತುಲಾ: ಶಿಸ್ತಿಗೆ ಹೆಸರಾಗಿರುವ ತುಲಾ ರಾಶಿಯವರು, ಕಾಸ್ಟ್ಲಿ ವಸ್ತುವನ್ನೇ ಬಳಸಲು ಇಚ್ಚಿಸುತ್ತಾರೆ. ಉತ್ತಮ ಗುಣಮಟ್ಟದ ಬಟ್ಟೆ, ಶೂಸ್, ವಾಚ್, ಪರ್ಫ್ಯೂಮ್, ಹೀಗೆ ಬ್ರ್ಯಾಂಡೆಡ್ ವಸ್ತುಗಳನ್ನೇ ಬಳಸಲು ಇವರು ಇಚ್ಛಿಸುತ್ತಾರೆ. ಉಳಿತಾಯದ ಬಗ್ಗೆ ಅಷ್ಟು ತಲೆಕೆಡಿಸಿಕೊಳ್ಳದ ಇವರು, ಐಶಾರಾಮಿ ಜೀವನ ನಡೆಸಲು ಬಯಸುತ್ತಾರೆ. ಅದೇ ರೀತಿ ಕಷ್ಟಪಟ್ಟು, ನಿಯತ್ತಿನಿಂದ ದುಡಿಯುತ್ತಾರೆ. ಸ್ವಾಭಿಮಾನಿಯಾಗಿರುವ ಇವರು ತಮ್ಮ ಜೀವನಕ್ಕೆ ಬೇರೆಯವರ ಮೇಲೆ ಅವಲಂಬಿತರಾಗಿರುವುದಿಲ್ಲ.
ಕುಂಭ: ಕುಂಭ ರಾಶಿಯವರಿಗೆ ಶಾಪಿಂಗ್ ಮಾಡುವ ಹವ್ಯಾಸವಿರುತ್ತದೆ. ಮಾರುಕಟ್ಟೆಗೆ ಬರುವ ಹೊಸ ಹೊಸ ವಸ್ತುಗಳ ಮೇಲೆ ಇವರ ಕಣ್ಣುಗಳಿರುತ್ತದೆ. ಅದೆಷ್ಟೇ ದುಬಾರಿಯಾದರೂ ಕೂಡ ಅದನ್ನು ಖರೀದಿಸಲೇಬೇಕು ಅನ್ನೋ ಹಠ ಇವರದ್ದು. ಇನ್ನು ಭವಿಷ್ಯಕ್ಕೆ ಹಣ ಕೂಡಿಡುವ ಬದಲು, ಇಂದಿನ ದಿನವನ್ನ ಇಂದೇ ಆನಂದಿಸಬೇಕೆಂಬ ವಿಷಯದಲ್ಲಿ ನಂಬಿಕೆ ಇಡುತ್ತಾರೆ.
ಮಕರ: ಶ್ರಮ ಮತ್ತು ಧೃಡ ನಿರ್ಧಾರಕ್ಕೆ ಹೆಸರಾಗಿರುವ ಮಕರ ರಾಶಿಯವರು, ಯಾವುದಾದರೂ ವಸ್ತುವನ್ನು ಇಷ್ಟ ಪಟ್ಟರೆ, ಅಥವಾ ಅದು ಬೇಕೆ ಬೇಕು ಎಂದೆನಿಸಿದರೆ, ಅದೆಷ್ಟೇ ದುಡ್ಡಾದರೂ ಸರಿ ಕೊಂಡುಕೊಳ್ಳುವರು. ಆದರೆ ಅದಕ್ಕೂ ಮುನ್ನ ಹಲವರ ಬಳಿ, ಆ ವಸ್ತುವಿನ ಬಳಿ ಅಭಿಪ್ರಾಯ ಕೇಳಿ, ಉತ್ತಮ ಅಭಿಪ್ರಾಯ ಬಂದರೆ ಮಾತ್ರ ಆ ವಸ್ತುಗಳನ್ನು ಕೊಂಡುಕೊಳ್ಳುತ್ತಾರೆ. ಯಾಕಂದ್ರೆ ಇವರು ವಸ್ತುವಿನ ಕ್ವಾಲಿಟಿ ನೋಡಿ, ಆ ವಸ್ತುವನ್ನು ಕೊಂಡುಕೊಳ್ಳಲು ಬಯಸುತ್ತಾರೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




