ಇಂಥ ವಿಷಯದಲ್ಲಿ ನಾಚಿಕೊಳ್ಳಬಾರದೆಂದು ಹೇಳಿದ್ದಾರೆ ಚಾಣಕ್ಯರು..!

ಚಾಣಕ್ಯ ನೀತಿಯಲ್ಲಿ ಬರುವ ಹಲವಾರು ವಿಷಯಗಳ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅಂತೆಯೇ ಇಂದು ನಾವು, ಯಾವ ವಿಷಯದಲ್ಲಿ ನಾಚಿಕೊಳ್ಳಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಚಾಣಕ್ಯರ ಪ್ರಕಾರ 3 ವಿಷಯಗಳಲ್ಲಿ ನಾಚಿಕೊಳ್ಳಬಾರದಂತೆ. ಮೊದಲನೇಯದಾಗಿ ಹಣದ ಬಗ್ಗೆ, ಎರಡನೇಯದಾಗಿ ಊಟದ ಬಗ್ಗೆ ಮತ್ತು ಮೂರನೇಯದಾಗಿ ವಿದ್ಯೆ ಕಲಿಯುವಾಗ ನಾಚಿಕೊಳ್ಳಬಾರದು.

ಮನುಷ್ಯನಿಗೆ ಬದುಕಲು ಬೇಕಾಗಿರುವುದೇ ಹಣ. ಹಾಗಾಗಿ ಹಣದ ಬಗ್ಗೆ ನಮಗೆಂದೂ ನಾಚಿಕೆ ಇರಬಾರದು ಅಂತಾ ಚಾಣಕ್ಯರು ಹೇಳುತ್ತಾರೆ. ಉದಾಹರಣೆಗೆ ನೀವು ಕೆಲಸ ಮಾಡಿದ್ದಕ್ಕಾಗಿ ನಿಮಗೆ ಸಂಬಳ(ಅಥವಾ ಫೀಸ್) ನೀಡಲಾಗುತ್ತದೆ. ಆ ಸಂಬಳ ನೀಡಿದಾಗ ತೆಗೆದುಕೊಳ್ಳುವುದಕ್ಕೆ, ಅಥವಾ ಸಂಬಳ ಕೇಳುವುದಕ್ಕೆ ಹಿಂಜರಿಯಬಾರದು. ಯಾಕಂದ್ರೆ ದುಡಿದ ಸಂಬಳ ಬಂದರೆ ತಾನೇ ಜೀವನ ನಡೆಸಲಿಕ್ಕಾಗುವುದು. ಇದೇ ರೀತಿ ಯಾರಾದರೂ ನಿಮ್ಮ ಬಳಿ ಸಾಲ ತೆಗೆದುಕೊಂಡಿದ್ದರೆ, ಅದನ್ನ ಹಿಂದಿರುಗಿ ಕೇಳಲು ಎಂದೂ ಸಂಕೋಚ ಪಡಬೇಡಿ ಎನ್ನುತ್ತಾರೆ ಚಾಣಕ್ಯರು.

ಎರಡನೇಯದಾಗಿ ಊಟಕ್ಕಾಗಿ ನಾಚಿಕೊಳ್ಳಬಾರದಂತೆ. ಕೆಲವರು ಊಟ ಮಾಡುವಾಗ ತಮಗೆ ಏನು ಬೇಕೋ ಅದನ್ನು ಕೇಳಲು ಅಥವಾ ಬಡಿಸಿಕೊಳ್ಳಲು ಹಿಂಜರಿಯುತ್ತಾರೆ. ಆದ್ರೆ ಊಟ ಮಾಡುವಾಗ ಯಾವಾಗಲೂ ನಾಚಿಕೊಳ್ಳಬಾರದು ಮತ್ತು ಅಹಂಕಾರ ತೋರಿಸಬಾರದು. ಊಟಕ್ಕೆ ಕುಳಿತಾಗ ನಾಚಿಕೊಂಡರೆ, ಪೂರ್ತಿ ಹೊಟ್ಟೆ ತುಂಬುವುದಿಲ್ಲ. ಅಹಂಕಾರ ತೋರಿಸಿದರೆ, ಸಿಗುವ ಊಟವೂ ಸಿಗುವುದಿಲ್ಲ.

ಮೂರನೇಯದಾಗಿ ವಿದ್ಯೆ ಕಲಿಯುವಾಗ ನಾಚಿಕೊಳ್ಳಬಾರದು.  ಶಿಕ್ಷಣ, ಸಂಗೀತ, ನೃತ್ಯ ಹೀಗೆ ಯಾವ ವಿದ್ಯೆಯನ್ನೇ ಕಲಿಯುವಾಗ, ಅದನ್ನು ನಿಷ್ಠೆಯಿಂದ ಕಲಿಯಬೇಕು. ಅದರ ಬಗ್ಗೆ ಯಾವುದೇ ಅನುಮಾನಗಳಿದ್ದರೆ, ಶಿಕ್ಷಕರ ಬಳಿ ಕೇಳಬೇಕು. ಹಾಗೆ ಕೇಳದೇ, ನಾಚಿಕೊಂಡರೆ, ನಿಮಗೆ ಪೂರ್ತಿ ವಿದ್ಯೆಯೂ ಹತ್ತುವುದಿಲ್ಲ, ನಿಮ್ಮ ಸಮಯವೂ ವ್ಯರ್ಥವಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author