ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ರಾಬರ್ಟ್ ಸಿನಿಮಾದ್ದೇ ಹವಾ. ಎಲ್ಲಿ ನೋಡಿದರಲ್ಲಿ ಡಿಬಾಸ್ ಅಭಿನಯದ್ದೇ ಗುಣಗಾನ. ಬಾಕ್ಸಾಫೀಸ್ ಕೊಳ್ಳೆ ಹೊಡಿಯೋದು ಗ್ಯಾರಂಟಿ ಅನ್ನೋ ರೇಂಜ್‌ಗೆ ರಾಬರ್ಟ್ ಸಿನಿಮಾ ಓಡುತ್ತಿದೆ. ಇದೇ ಸಂಭ್ರಮದ ಮಧ್ಯೆ ಡಿಬಾಸ್ ದರ್ಶನ್ ಮಂತ್ರಾಲಯಕ್ಕೆ ಭೇಟಿ ನೀಡಿ, ರಾಯರ ದರ್ಶನ ಮಾಡಿ, ಆಶೀರ್ವಾದ ಪಡೆದಿದ್ದಾರೆ.



ಮಂತ್ರಾಲಯದ ಸುಬುದೇಂದ್ರ ಶ್ರೀಗಳ ಆಶೀರ್ವಾದ ಪಡೆದ ದರ್ಶನ್, ಮಂತ್ರಾಲಯದಲ್ಲಿರುವ ಗೋವುಗಳನ್ನ ಕೂಡ ದಚ್ಚು ಭೇಟಿ ಮಾಡಿದ್ದಾರೆ. ಮೊದಲೇ ಪ್ರಾಣಿ ಪ್ರಿಯರಾದ ದರ್ಶನ್‌ಗೆ ಹಸುವೆಂದರೆ ಕೊಂಚ ಹೆಚ್ಚೇ ಪ್ರೀತಿ. ಚಿಕ್ಕವರಿದ್ದಾಗ ಹಸುವಿನ ಹಾಲು ಕರೆದು ಅದನ್ನು ಮಾರಿ, ಅದರಿಂದ ಬಂದ ಹಣದಿಂದಲೇ ನಾನು ಜೀವನ ಮಾಡಿದ್ದೇನೆಂದು ದರ್ಶನ್ ಹೇಳಿದ್ದರು. ಇಂದು ಮಂತ್ರಾಲಯದಲ್ಲಿರುವ ಗೋವುಗಳನ್ನ ನೋಡಿ, ಅಲ್ಲಿದ ಕರುವನ್ನ ಕೂಡ ಮುದ್ದಾಡಿದ್ದಾರೆ.
ಪ್ರಾಣಿ ಪ್ರಿಯರಾಗಿರುವ ದಚ್ಚು, ಹಲವಾರು ಪ್ರಾಣಿಗಳನ್ನು ದತ್ತು ಪಡೆದು , ತಮ್ಮ ಫಾರ್ಮ್‌ಹೌಸ್‌ನಲ್ಲಿ ಸಾಕುತ್ತಿದ್ದಾರೆ. ಅಲ್ಲದೇ, ಸಫಾರಿಗೆ ಹೋದಾಗ ಪ್ರಾಣಿಗಳ ಫೋಟೋಶೂಟ್ ಮಾಡಿ, ಅದನ್ನು ಎಕ್ಸಿಬಿಷನ್‌ಗೆ ಇಟ್ಟು, ಅದರಿಂದ ಬಂದ ದುಡ್ಡನ್ನ ಪ್ರಾಣಿಗಳ ಸಹಾಯಕ್ಕೆ ನೀಡುತ್ತಾರೆ ದಚ್ಚು.

