ಯುಎಇ ತಂಡದ ಇಬ್ಬರು ಆಟಗಾರರು ಫಿಕ್ಸಿಂಗ್ ಮಾಡಿ ಸಿಕ್ಕಿಬಿದ್ದಿದ್ದಾರೆ. ಈ ಇಬ್ಬರು ಆಟಗಾರರಿಗೆ ಐಸಿಸಿ ಎಂಟು ವರ್ಷ ನಿಷೇಧ ಶಿಕ್ಷೆ ವಿಧಿಸಿದೆ. ಯುಎಇ ತಂಡದ ಆಟಗಾರರಾದ ಮೊಹಮ್ಮದ್ ನಾವಿದ್ ಮತ್ತು ಶೈವೇನ್ ಅನ್ವರ್ ಮ್ಯಾಚ್ ಫಿಕ್ಸಿಂಗ್ ಮಾಡಿದ ಆರೋಪ ಸಾಬೀತಾಗಿದ್ದು, ಇವರಿಬ್ಬರನ್ನು ಎಂಟು ವರ್ಷ ಕ್ರಿಕೇಟ್ನಿಂದ ನಿಷೇಧಿಸಲಾಗಿದೆ.



ಇವರಿಬ್ಬರು ಕೂಡ 2019ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿದ್ದರೆಂದು ಆರೋಪವಿದ್ದು, ಇದು ಸಾಬೀತಾಗಿದ್ದ ಕಾರಣ ಐಸಿಸಿ ಇನ್ನು 8 ವರ್ಷಗಳ ಕಾಲ ಕ್ರಿಕೇಟ್ನಿಂದ ನಿಷೇಧ ಹೇರಿದೆ. 2019ರಿಂದ ಇವರ ಶಿಕ್ಷೆಯ ಅವಧಿ ಶುರುವಾಗಿದ್ದು, ಇನ್ನು 6 ವರ್ಷಗಳ ಕಾಲ ಇವರು ಯಾವುದೇ ರೀತಿಯ ಕ್ರಿಕೇಟ್ನಲ್ಲಿ ಭಾಗವಹಿಸುವಂತಿಲ್ಲ.
ಕ್ರಿಕೇಟ್ ಲೋಕದಲ್ಲಿ ಇತ್ತೀಚೆಗಷ್ಟೇ ಗುರುತಿಸಿಕೊಂಡಿದ್ದ ಯುಎಇ ತಂಡಕ್ಕೆ ಈ ಆಟಗಾರರಿಂದ ಧಕ್ಕೆ ಬಂದಿದೆ. ಮ್ಯಾಚ್ ಫಿಕ್ಸಿಂಗ್ ಆರೋಪದಡಿ ಸಿಕ್ಕಿಬಿದ್ದ ಎಷ್ಟೋ ಕ್ರಿಕೇಟಿಗರಿಗೆ ಐಸಿಸಿ ಶಿಕ್ಷೆ ವಿಧಿಸಿದೆ, ಆದರೂ ಕೂಡ ಮ್ಯಾಚ್ ಫಿಕ್ಸಿಂಗ್ ಭೂತ ಬಿಟ್ಟು ಹೊರಬರಲು ಕೆಲ ಆಟಗಾರರು ಮನಸ್ಸು ಮಾಡದಿರುವುದು ವಿಪರ್ಯಾಸದ ಸಂಗತಿ.




