Friday, March 14, 2025

Latest Posts

2023 ರ ಒಲಂಪಿಕ್ಸ್ ಕ್ರೀಡಾಕೂಟ ಆಸ್ಟ್ರೇಲಿಯಾದ ಬ್ರಿಸ್ಬೇನ್ ಪಾಲು

- Advertisement -

www.karnatakatv.net :ಒಲಂಪಿಕ್ಸ್‌ ಕ್ರೀಡಾಕೂಟ ಆರಂಭಕ್ಕೆ ಇನ್ನೆರಡು ದಿನ ಬಾಕಿಯಿರುವಾಗಲೆ, 2032 ಒಲಿಂಪಿಕ್ಸ್‌ ಕ್ರೀಡಾಕೂಟ ಆಯೋಜನೆಗೆ ಆಸ್ಟ್ರೇಲಿಯಾದ ಬ್ರಿಸ್ಬೇನ್‌ ಆತಿಥ್ಯದ ಹಕ್ಕನ್ನು ಪಡೆದುಕೊಂಡಿದೆ. ಇದರೊಂದಿಗೆ ಆಸ್ಟ್ರೇಲಿಯಾ ಮೂರನೇ ಬಾರಿಗೆ ಒಲಂಪಿಕ್ಸ್‌ ಆಯೋಜನೆಗೆ ಆತಿಥ್ಯವನ್ನು ಪಡೆದುಕೊಂಡಂತೆ ಆಗಿದೆ.

ಹೌದು, ಟೋಕಿಯೋ ಒಲಂಪಿಕ್ಸ್‌ ಮುಕ್ತಾಯದ ಬಳಿಕ 2024ರಲ್ಲಿ ಪ್ಯಾರಿಸ್‌ನಲ್ಲಿ ಒಲಂಪಿಕ್ಸ್‌ ಕ್ರೀಡಾಕೂಟ ನಡೆಯಲಿದೆ. ನಂತರ 2028ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ಜಗತ್ತಿನ ಅತಿದೊಡ್ಡ ಕ್ರೀಡಾಜಾತ್ರೆ ನಡೆಯಲಿದೆ. ಇನ್ನು 2032ರ ಒಲಂಪಿಕ್ಸ್‌ ಕ್ರೀಡಾಕೂಟದ ಆತಿಥ್ಯದ ಹಕ್ಕು ಬ್ರಿಸ್ಬೇನ್ ಪಾಲಾಗಿದೆ ಎಂದು ಅಂತಾರಾಷ್ಟ್ರೀಯ ಒಲಂಪಿಕ್ಸ್‌ ಸಮಿತಿ ಇಂದು ತಿಳಿಸಿದೆ.

- Advertisement -

Latest Posts

Don't Miss