Monday, December 23, 2024

Latest Posts

‘ಸಿದ್ದರಾಮಯ್ಯ ಮರಕೋತಿ ಆಡೋದಕ್ಕೇ ಲಾಯಕ್ಕು’- ಆಯನೂರು

- Advertisement -

ಶಿವಮೊಗ್ಗ:  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬರೀ ಮರಕೋತಿ ಆಡೋದಕ್ಕೆ ಸರಿ ಅಂತ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಟೀಕಿಸಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಆಯನೂರು ಮಂಜುನಾಥ್, ಚುನಾವಣೆ ವೇಳೆ ಸಿದ್ದರಾಮಯ್ಯ ತಮ್ಮ ಘನತೆಗೆ ತಕ್ಕಂತೆ ಮಾತನಾಡದೆ, ಪ್ರಧಾನಿ ಮೋದಿಯವರಿಂದ ಹಿಡಿದು ಯಡಿಯೂರಪ್ಪರವರ ವರೆಗೂ ಏಕಪಾತ್ರಾಭಿನಯ ಮಾಡಿ ಟೀಕಿಸಿದ್ರು. ಸಿದ್ದರಾಮಯ್ಯ ರಾಹುಲ್ ಗಾಂಧಿಯವರ ಭಟ್ಟಂಗಿ ರೀತಿ ವರ್ತಿಸಿದ್ರು. ಆದ್ರೆ ಮತದಾರರು ಅವರೆಲ್ಲರಿಗೂ ಒಳ್ಳೇ ಪಾಠ ಕಲಿಸಿದ್ದಾರೆ ಅಂತ ಟೀಕೆ ಮಾಡಿದ್ರು.

ಇನ್ನು ದೇವೆೇಗೌಡರು ಮತ್ತು ಸಿದ್ಧರಾಮಯ್ಯ ಬಿಜೆಪಿಯನ್ನ ಒಂದಂಕಿ ದಾಟಲು ಬಿಡೋದಿಲ್ಲ ಅಂತ ಹೇಳ್ತಿದ್ರು. ಆದ್ರೆ ಅವರೇ ಒಂದೊಂದು ಇಟ್ಟುಕೊಂಡು ಅವಮಾನಕ್ಕೊಳಗಾದ್ರು ಅಂತ ಆಯನೂರು ಮಂಜುನಾಥ್ ಲೇವಡಿ ಮಾಡಿದ್ರು.

ಯಡಿಯೂರಪ್ಪ ಕನಸಿಗೆ ಸಿದ್ದು ಸಪೋರ್ಟ್…! ಮಿಸ್ ಮಾಡದೇ ಈ ವಿಡಿಯೋ ನೋಡಿ

- Advertisement -

Latest Posts

Don't Miss