Wednesday, June 7, 2023

Latest Posts

‘ರಾಜ್ಯವನ್ನೇ ಮಾರೋದಕ್ಕೆ ಸರ್ಕಾರ ಯತ್ನ’- ಯಡಿಯೂರಪ್ಪ

- Advertisement -

ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಸೋತ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಟೀಕಿಸಿದ್ದಾರೆ.

ಶಿವಮೊಗ್ಗ ಗ್ರಾಮಾಂತರದ ಮತದಾರರ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಯಡಿಯೂರಪ್ಪ, ಮೈತ್ರಿ ನಾಯಕರು ಪ್ರಧಾನಿ ಬಗ್ಗೆ, ನನ್ನ ಬಗ್ಗೆ ಹಗುರವಾಗಿ ಮಾತಾಡಿದ್ರು. ಆದ್ರೆ ಈ ರಾಜ್ಯದ ಮತದಾರರು ವಿಚಲಿತರಾಗಲಿಲ್ಲ.

ಶಿವಮೊಗ್ಗ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಸಂಸದನಾಗೋ ವಿಶ್ವಾಸದಿಂದ ಹಿಂದಿ ಕಲಿತಾ ಇದ್ರು. ಆದ್ರೆ ಭಾರೀ ಅಂತರದಿಂದ ಬಿಜೆಪಿ ಅಭ್ಯರ್ಥಿ ರಾಘವೇಂದ್ರಗೆ ದೊಡ್ಡ ಗೆಲುವು ಸಿಕ್ಕಿದೆ ಇನ್ನೈದು ವರ್ಷದಲ್ಲಿ ಮತ್ತೆ ಚುನಾವಣೆ ಬರುತ್ತೆ. ಹಿಂದಿ ಕಲಿಯೋದನ್ನ ಮಾತ್ರ ನಿಲ್ಲಿಸಬೇಡಿ ಅಂತ ಸಲಹೆ ನೀಡೋ ಮೂಲಕ ವ್ಯಂಗ್ಯಮಾಡಿದ್ರು.

ರಾಜ್ಯವನ್ನೇ ಮಾರಾಟ ಮಾಡಲು ಸರ್ಕಾರ ಯತ್ನ

ಜಿಂದಾಲ್ ಭೂ ಪ್ರಕರಣ ಕುರಿತಾಗಿ ಮಾತನಾಡಿದ ಬಿಎಸ್ವೈ , ಇಡೀ ರಾಜ್ಯವನ್ನೇ ಮಾರಾಟ ಮಾಡೋಕೆ ಹೊರಟಿದ್ದಾರೆ. ಇಂತಹ ಸರಕಾರ ರಾಜ್ಯದಲ್ಲಿ ಉಳಿಯಬಾರದು. ಕೋಟಿ ಕೋಟಿ ಬೆಲೆ ಬಾಳುವ ಭೂಮಿಯನ್ನ ಕೇವಲ ಒಂದು ಕಾಲು ಲಕ್ಷಕ್ಕೆ ಭೂಮಿ ಮಾರಾಟ ಮಾಡ್ತಿದ್ದಾರೆ. ನಾವು ಸುಮ್ಮನೆ ಕೂರೋದಿಲ್ಲ. ಜೂನ್ ೫ ರಂದು ಶಾಸಕರು, ಸಂಸದರ ಸಭೆ ನಡೆಸಿ ಸರಕಾರದ ವೈಫಲ್ಯದ ಚರ್ಚೆ ಮಾಡುತ್ತೇವೆ ಅಂತ ಮೈತ್ರಿ ಸರ್ಕಾರದ ವಿರುದ್ಧ ಯಡಿಯೂರಪ್ಪ ಕಿಡಿ ಕಾರಿದ್ರು.

ಬಿಜೆಪಿಯವ್ರು ಇವಿಎಂ ಹ್ಯಾಕ್ ಮಾಡಿದ್ದಾರಾ…?ಈ ವಿಡಿಯೋ ತಪ್ಪದೇ ನೋಡಿ

https://www.youtube.com/watch?v=psvezPetkic
- Advertisement -

Latest Posts

Don't Miss