Saturday, December 21, 2024

Latest Posts

ಸಿಎಂ ಬಂಪರ್ ಕೊಡುಗೆ- ಸರ್ಕಾರಿ ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ

- Advertisement -

ದೆಹಲಿ: 2020ರ ದೆಹಲಿ ವಿಧಾನಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷ ತಯಾರಿ ಶುರುವಿಟ್ಟುಕೊಂಡಿದೆ. ಮಹಿಳೆಯರಿಗೆ ಮೆಟ್ರೋ ಮತ್ತು ಬಸ್ ಪ್ರಯಾಣವನ್ನು ಉಚಿತವಾಗಿ ಒದಗಿಸಲು ದೆಹಲಿ ಸರ್ಕಾರ ಚಿಂತನೆ ನಡೆಸಿದೆ.

ಸಾರ್ವಜನಿಕ ಸಾರಿಯನ್ನು ಸಾಮಾನ್ಯವಾಗಿ ಹೆಚ್ಚಾಗಿ ಬಳಸೋದು ಮಹಿಳೆಯರೇ ಆದ್ದರಿಂದ ಅವರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡುವ ನಿರ್ಧಾರ ಕೈಗೊಂಡಿರೋದಾಗಿ ದೆಹಲಿ ಸಿಎಂ ಕೇಜ್ರಿವಾಲ್ ತಿಳಿಸಿದ್ದಾರೆ. ಅಲ್ಲದೆ ಈ ಮೂಲಕ ಸ್ವಂತ ವಾಹನ ಬಳಕೆ ಕೂಡ ಕಡಿಮೆಯಾಗಿ ಟ್ರಾಫಿಕ್ ಮತ್ತು ವಾಯು ಮಾಲಿನ್ಯ ನಿಯಂತ್ರಣವೂ ಆಗಲಿದೆ. ಹಾಗೆಯೇ ಮಹಿಳೆಯರಿಗೆ ಉತ್ತೇಜನ ಸಿಗಲಿದೆ ಅನ್ನೋದು ದೆಹಲಿ ಸಿಎಂ ಕೇಜ್ರಿವಾಲ್ ಉದ್ದೇಶ.

ಈ ಕುರಿತು ದೆಹಲಿ ಸರ್ಕಾರ ಅಧಿಕೃತ ಘೋಷಣೆ ಮಾಡಲಿದೆ ಅಂತ ತಿಳಿದುಬಂದಿದೆ. ಈ ಮೂಲಕ ಕೇಜ್ರಿವಾಲ್ 2020ರಲ್ಲಿ ನಡೆಯಲಿರೋ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸಿದ್ದು ಮಹಿಳೆಯರಿಗೆ ನೀಡಲುದ್ದೇಶಿಸಿರೋ ಈ ಯೋಜನೆ ಸಿಎಂ ಕೇಜ್ರಿವಾಲ್ ಗೆ ಪ್ಲಸ್ ಪಾಯಿಂಟ್ ಆಗಲಿದೆ.

ಮೋದಿಗೆ ಪಾಠ ಕಲಿಸಿದ ನಿತೀಶ್ ಕುಮಾರ್…!! ಮಿಸ್ ಮಾಡದೇ ಈ ವಿಡಿಯೋ ನೋಡಿ




- Advertisement -

Latest Posts

Don't Miss