Tuesday, July 16, 2024

Latest Posts

100 ದಿನದ ಸಂಭ್ರಮದಲ್ಲಿ ‘ಯಜಮಾನ’ ಗಳಿಸಿದ್ದೆಷ್ಟು..?

- Advertisement -

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಿತ್ರ ಯಜಮಾನ ರಿಲೀಸ್ ಆಗಿ ಇಂದಿಗೆ 95ನೇ ದಿನ. ಇನ್ನೈದು ದಿನದಲ್ಲಿ ಚಿತ್ರಕ್ಕೆ ಶತದಿನೋತ್ಸವದ ಸಂಭ್ರಮ. ಮುಖ್ಯ ಚಿತ್ರಮಂದಿರ ನರ್ತಕಿಯಲ್ಲಿ ಬಿಡುಗಡೆಯಾದ ಯಜಮಾನ ಸಿನಿಮಾ ಇದೇ ಚಿತ್ರಮಂದಿರದಲ್ಲಿ 100ಡೇಸ್ ಪೂರೈಸುತ್ತಿಲ್ಲ. ಯಾಕಂದ್ರೆ ಅಭಿಷೇಕ್ ಅಂಬರೀಶ್ ನಟನೆಯ ಅಮರ್ ಚಿತ್ರ ಅದೇ ಚಿತ್ರದಲ್ಲಿ ರಿಲೀಸ್ ಆಗಿದ್ದು ಯಶಸ್ವಿಯಾಗಿ ಓಡುತ್ತಿದೆ.

ಹೀಗಾಗಿ ಯಜಮಾನ ಇನ್ನು ಯಾವಯಾವ ಥಿಯೇಟರ್ ನಲ್ಲಿ ಪ್ರದರ್ಶನ ಕಾಣುತ್ತಿದೆ ಅಂತ ನೋಡೋದಾದ್ರೆ, ಬೆಂಗಳೂರಿನ ಮೇನಕಾ ಥಿಯೇಟರ್, ಮೈಸೂರಿನ ಪದ್ಮಾ ಟಾಕೀಸ್,  ಹುಬ್ಬಳ್ಳಿಯ ಸಂಜೋತಾ ಥಿಯೇಟರ್, ದಾವಣಗೆರೆಯ ಅಶೋಕ ಚಿತ್ರಮಂದಿರ, ಕೊಪ್ಪಳದ ಕನಕಜಾಲ ಚಿತ್ರಮಂದಿರ  ಸೇರಿದಂತೆ ಇನ್ನೂ ಹತ್ತು ಹಲವು ಥಿಯೇಟರ್ ಗಳಲ್ಲಿ ಯಜಮಾನ ಸಿನಿಮಾ ರಾಜ್ಯಾದ್ಯಂತ ಪ್ರದರ್ಶನ ಕಾಣ್ತಿದೆ. ಇನ್ನು 18ಕೋಟಿ ಬಜೆಟ್ ನ ಯಜಮಾನ ಸಿನಿಮಾ 100 ದಿನಕ್ಕೆ ಒಟ್ಟು ಸಂಗ್ರಸಿರೋದು ಸುಮಾರು 138 ಕೋಟಿ.

ಶತದಿನೋತ್ಸವದತ್ತ ಡಿಬಾಸ್ ನಟನೆಯ ‘ಯಜಮಾನ’…! ಮಿಸ್ ಮಾಡದೇ ಈ ವಿಡಿಯೋ ನೋಡಿ

- Advertisement -

Latest Posts

Don't Miss