- Advertisement -
ಇಂಡೊನೇಷ್ಯಾ ದಲ್ಲಿ ಸೇನೆಗೆ ಸೇರಿರುವ ಮಹಿಳಾ ಸೈನಿಕರಿಗೆ ಕಡ್ಡಾಯವಾಗಿ ನಡೆಸುತ್ತಿದ್ದ ಕನ್ಯತ್ವ ಪರೀಕ್ಷೆಯನ್ನು ರದ್ದು ಪಡಿಸಿದೆ. ಈ ನಿರ್ಧಾರವನ್ನು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ಸ್ವಾಗತಿಸಿದೆ.
7 ವರ್ಷಗಳ ಹಿಂದೆಯೇ ಕನ್ಯತ್ವ ಪರೀಕ್ಷೆಗೆ ವೈಜ್ಞಾನಿಕ ಆಧಾರವಿಲ್ಲ ಎಂದು ಘೋಷಿಸಿತ್ತು. ಅದರ ಹೊರತಾಗಿಯೂ ಇಂಡೊನೇಷ್ಯಾ ಸೇನೆ ತನ್ನ ಮಹಿಳಾ ಸೈನಿಕರಿಗೆ ಕನ್ಯತ್ವ ಪರೀಕ್ಷೆಯನ್ನು ನಡೆಸುತ್ತಿತ್ತು.
ಈ ಬಗ್ಗೆ ಸೇನಾ ಮುಖ್ಯಸ್ಥ ಅಂದಿಕಾ ಪೆರ್ಕಸಾ ಮಾಧ್ಯಮದ ಮುಂದೆ ಮಾಹಿತಿ ಹಂಚಿಕೊಂಡಿದ್ದಾರೆ. ಇದುವರೆಗೂ ಆ ದೇಶದ ಸೇನೆಗೆ ಸೇರ್ಪಡೆಗೊಂಡ ಮಹಿಳೆಯರ ಕನ್ಯಾ ಪೊರೆ ಕಳಚಿಕೊಂಡಿದೆಯೋ ಇಲ್ಲವೋ ಎಂಬುದನ್ನು ಕೈ ಬೆರಳುಗಳಿಂದಲೇ ಪರೀಕ್ಷೆ ಕೈಗೊಳ್ಳುವ ಮೂಲಕ ಕನ್ಯತ್ವ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ ಈಗ ಅದನ್ನು ರದ್ದು ಗೋಳಿಸಿದೆ
ವಿನುತಾ ಹವಾಲ್ದಾರ್ ಕರ್ನಾಟಕ ಟಿವಿ ಬೆಂಗಳೂರು
- Advertisement -