ಪಂಚಮಸಾಲಿ ಪ್ರತಿಜ್ಞಾಪಂಚಾಯತ್ ಹಿನ್ನೆಲೆಯಲ್ಲಿ ಶಕ್ತಿ ಪ್ರದರ್ಶನ…!

www.karnatakatv.net: ಹುಬ್ಬಳ್ಳಿ: ಮಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಹೋರಾಟದ  ಹಿನ್ನೆಲೆಯಲ್ಲಿ ಪ್ರತಿಜ್ಞಾ ಪಂಚಾಯತ್ ಹಮ್ಮಿಕೊಂಡಿದೆ.

ನಗರದಲ್ಲಿಂದು ಪ್ರತಿಜ್ಞಾ ಪಂಚಾಯತ್ ಸಭೆಗೂ ಮುನ್ನ ಚೆನ್ನಮ್ಮ ವೃತ್ತದಲ್ಲಿ ಸೇರಿದ ಪಂಚಮಸಾಲಿ ಮುಖಂಡರ ಶಕ್ತಿ ಪ್ರದರ್ಶನ ನಡೆಸಿದರು ‌. ಚೆನ್ನಮ್ಮ ಪುತ್ಥಳಿಗೆ ಬಳಿ ಜೈ ಪಂಚಮಸಾಲಿ ಘೋಷಣೆ ಕೂಗಿ, 2ಎ ಮೀಸಲಾತಿ ನೀಡಬೇಕೆಂದು ಮುಖಂಡರ ಒತ್ತಾಯಿಸಿದರು‌.

ಇಂದು ಮಧ್ಯಾಹ್ನ ಖಾಸಗಿ ಹೋಟೆಲ್ ನಲ್ಲಿ ಸಭೆ ಆಯೋಜಿಸಿದ್ದು, ಸಭೆಯಲ್ಲಿ ಜಯಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಬಸನಗೌಡ ಯತ್ನಾಳ್, ಲಕ್ಷ್ಮೀ ಹೆಬ್ಬಾಳಕರ, ವಿಜಯಾನಂದ ಕಾಶಪ್ಪನವರ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಕರ್ನಾಟಕ ಟಿವಿ- ಹುಬ್ಬಳ್ಳಿ

About The Author