- Advertisement -
ರಾಯಚೂರು: ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿರುವ ದಲಿತ ಸಂಘಟನೆಗಳ ಹೋರಾಟಗಾರರು ರಾಯಚೂರಿನಲ್ಲಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್‍ಗೆ ಘೇರಾವ್ ಹಾಕಿದ್ರು.
ಜಿಲ್ಲಾ ಪ್ರವಾಸದಲ್ಲಿರುವ ಸಚಿವ ಪ್ರಭು ಚವ್ಹಾಣ್ ನಗರದ ಡಿಸಿ ಕಚೇರಿ ಎದುರು ಕಾರಿನಲ್ಲಿ ಆಗಮಿಸುತ್ತಿದ್ದಂತೆಯೇ ದಲಿತ ಸಂಘಟನೆಗಳು ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು. ಸದಾಶಿವ ಆಯೋಗ ವರದಿ ಜಾರಿಗೆಗೆ ವಿರೋಧ ವ್ಯಕ್ತಪಡಿಸಿರುವ ಸಚಿವರ ಕ್ರಮ ಖಂಡಿಸಿ ಘೋಷಣೆ ಕೂಗಿದ್ರು ಅಲ್ಲದೇ ಕಪ್ಪು ಪಟ್ಟಿ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಕಾರಿಗೆ ಘೇರಾವ್ ಹಾಕಿದ 3 ಮಂದಿ ಹೋರಾಟಗಾರರನ್ನು ಬಂಧಿಸಲಾಗಿದೆ.
ಅನಿಲ್ ಕುಮಾರ್, ಕರ್ನಾಟಕ ಟಿವಿ-ರಾಯಚೂರು
- Advertisement -

