Friday, December 27, 2024

Latest Posts

ರಾಜ್ಯದ ಪ್ರತಿ ತಾಲೂಕಿಗೂ ಗೋವುಗಳಿಗಾಗಿ ಆಂಬುಲೆನ್ಸ್…!

- Advertisement -

ರಾಯಚೂರು: ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ವಿಚಾರವಾಗಿ  400 ಕೇಸ್ ಗಳನ್ನು ದಾಖಲಿಸಿ, 10 ಸಾವಿರ ಗೋವುಗಳ ರಕ್ಷಣೆ ಮಾಡಿರೋದಾಗಿ ಪಶು ಸಂಗೋಪನಾ ಸಚಿವ ಪ್ರಭುಗೌಡ ಚವ್ಹಾಣ್ ತಿಳಿಸಿದ್ದಾರೆ.

ತಾಲೂಕಿನ ಮಲಿಯಾಬಾದ ಗೋಶಾಲೆಗೆ ಭೇಟಿ ನೀಡಿದ ಸಚಿವ ಪ್ರಭುಗೌಡ ಚವ್ಹಾಣ್, ಮಲಿಯಾಬಾದ ಗೋಶಾಲೆ, ರಮಣಿ ಗೋಶಾಲೆ  ಐತಿಹಾಸಿಕ ಗೋಶಾಲೆಯಾಗಿದೆ ಅಂತ ಸಂತಸ ವ್ಯಕ್ತಪಡಿಸಿದ ಸಚಿವ, ಗೋ ಸಂಜೀವಿನಿ ಯೋಜನೆ ಮುಖಾಂತರ ಗೋವುಗಳ ತುರ್ತು ಚಿಕಿತ್ಸೆಗಾಗಿ ಆ್ಯಂಬುಲೆನ್ಸ್ ವಿತರಿಸಲಾಗುತ್ತೆ ಅಂದರು.

ಗೋವುಗಳ ಆರೋಗ್ಯದ ದೃಷ್ಟಿಯಿಂಜ ಗೋ ಸಂಜೀವಿನಿ ಯೋಜನೆ ಜಾರಿಗೆ ತಂದಿದ್ದು, ರಾಜ್ಯದ ಎಲ್ಲಾ 275 ತಾಲೂಕುಗಳಿಗೂ ತಲಾ ಒಂದು ಆಂಬುಲೆನ್ಸ್ ನೀಡಲಾಗುವುದು ಅಂತ ಮಾಹಿತಿ ನೀಡಿದ್ರು.

ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು

- Advertisement -

Latest Posts

Don't Miss