ಜೂನಿಯರ್ ವಿಶ್ವಚಾಂಪಿಯನ್‌ಶಿಪ್ ನಲ್ಲಿ 43 ಪದಕ ಗೆದ್ದ ಭಾರತ

www.karnatakatv.net : ಲಿಮಾದಲ್ಲಿ ನಡೆದ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಭಾರತವು 17 ಚಿನ್ನದ ಪದಕ 43 ಪದಕಗಳನ್ನು ಗೆಲ್ಲುವುದರ ಮುಖಾಂತರ ಅಗ್ರಸ್ಥಾನಕ್ಕೇರಿದೆ .
ವಿಜಯವೀರ್ ಸಿಧು , ರಿದಮ್ ಸಾಂಗ್ವಾನ್ , ಅರ್ಜುನ್ ಸಿಂಗ್ ಚೀಮಾ ಮತ್ತು ಶಿಖಾ ನರ್ವಾಲ್ ಅಂತಿಮ ದಿನದಲ್ಲಿ ಭಾರತದ ಪರವಾಗಿ ಆಡಿ ಕೀರ್ತಿಯನ್ನು ತಂದರು , ಇದರ ಜೊತೆಗೆ 17 ಚಿನ್ನದ ಪದಕಗಳನ್ನು ಭಾರತಕ್ಕೆ ತರುವುದರ ಮೂಲಕ ಸಂತಸವನ್ನು ಮೂಡಿಸಿದರು .
ಜೊತೆಯಲ್ಲಿ ಭಾರತದ ಉಳಿದ ಆಟಗಾರರು ಸಹ ಅತ್ಯುತ್ತಮ ಪ್ರದರ್ಶನವನ್ನು ನೀಡುವುದರ ಮುಖಾಂತರ ಬೆಳ್ಳಿ, ಕಂಚಿನ ಪದಕಗಳನ್ನು ಗೆದ್ದರು , ಒಟ್ಟು 16 ಬೆಳ್ಳಿ ಪದಕ ಮತ್ತು 10 ಕಂಚಿನ ಪದಕಗಳನ್ನು ಗೆದ್ದರು ,ಮತ್ತು ಬರೋಬ್ಬರಿ 17 ಚಿನ್ನದ ಪದಕಗಳನ್ನು ಗೆದ್ದರು , ಒಟ್ಟಾರೆಯಾಗಿ 43 ಪದಕಗಳನ್ನು ದಾಖಲೆಗಳೊಂದಿಗೆ ಜಯಶಾಲಿಯಾದರು .
ಸಂಪತ್ ಶೈವ, ಸ್ಪೋಟ್ಸ್ ಡೆಸ್ಕ್ , ಕರ್ನಾಟಕ ಟಿವಿ.

About The Author