ತುoಬಾ ಜನಕ್ಕೆ ಆ್ಯಂಬರ್ ಗ್ರೀಸ್ ಎಂದರೆ ಗೊತ್ತಿರುವುದಿಲ್ಲ ಇದು ಏನು, ಏತಕ್ಕೆ ಇದನ್ನ ಬಳಸುತ್ತಾರೆ ಎನ್ನುವುದು ಈ ಆ್ಯಂಬರ್ ಗ್ರೀಸ್ ಬಗ್ಗೆ ಹೇಳ್ತಿವಿ ಕೇಳಿ. ಆ್ಯಂಬರ್ ಗ್ರೀಸ್ ಸಮುದ್ರದಲ್ಲಿ ಸಿಗುವ ತಿಮಿಂಗಲದ ವಾಂತಿಯಾಗಿದ್ದು ಇದನ್ನ ಸುಗಂಧದ್ರವ್ಯ , ಮಾದಕವಸ್ತು ,ಮತ್ತು ಔಷದೀಯ ವಸ್ತುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ .ಈಗಾಗಿ ಆ್ಯಂಬರ್ ಗ್ರೀಸ್ ಗೆ ಇಂಟೆರ್ ನ್ಯಾಶನಲ್ ಮಾರುಕಟ್ಟೆಯಲ್ಲಿ ಕೋಟಿಕೋಟಿ ರುಪಾಯಿ ಬೆಲೆಬಾಳುತ್ತದೆ , ಇದರ ಒಂದು ಕೆಜಿ ಆ್ಯಂಬರ್ ಗ್ರೀಸ್ ಬೆಲೆ 1.7 ಕೋಟಿ ರುಪಾಯಿಯಾಗಿರುತ್ತದೆ .
ಭಾರತದಲ್ಲಿ ಆ್ಯಂಬರ್ ಗ್ರೀಸ್ ಮಾರುವುದು ಕಾನೂನಿನ ಪ್ರಕಾರ ನಿಷೇಧವಾಗಿರುತ್ತದೆ , ಒಂದುವೇಳೆ ಆ್ಯಂಬರ್ ಗ್ರೀಸ್ ಸಿಕ್ಕಿದರೆ ಅದನ್ನು ಅರಣ್ಯ ಇಲಾಕೆಗೆ ಒಪ್ಪಿಸಬೇಕಾಗಿರುತ್ತದೆ. ಆದರೆ ನೆನ್ನೆ ಅಪರೂಪ ಜಾತಿಯ ವೀರ್ಯ ತಿಮಿಂಗಲದ ವಾಂತಿ 17 ಕೋಟಿರೂ ಮೌಲ್ಯದ ಆ್ಯಂಬರ್ ಗ್ರೀಸ್ ಮಾರಲು ಯತ್ನಿಸಿದ ಐವರು ಆರೋಪಿಗಳನ್ನು ಬೆಂಗಳೂರಿನ ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ. ಪುನೀತ್ ,ಮಧುಕುಮಾರ್,ನಂದೀಶ್ ,ಯೋಗೇಶ್ ಹಾಗು ಗೋಪಾಲ್ ಬಂಧಿತ ಆರೋಪಿಗಳು. ಪೊಲೀಸರ ದಾಳಿ ವೇಳೆ
ಎ1 ಆರೋಪಿ ಪ್ರಸನ್ನ ಅಲಿಯಾಸ್ ಯಾರ್ಬಿಟ್ ನಾಪತ್ತೆಯಾಗಿದ್ದಾರೆ .ಕೋಟ್ಯಾಂತರ ಮೌಲ್ಯದ ಬೆಲೆಬಾಳುವ 17 ಕೆಜಿ ಆ್ಯಂಬರ್ ಗ್ರೀಸ್ ಹಾಗು ಒಂದು ಕಾರನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸುವಲ್ಲಿ ಮಲ್ಲೇಶ್ವರಂ ಪೋಲಿಸರು ಯಶಸ್ವಿಯಾಗಿದ್ದಾರೆ .
ಸಂಪತ್ಶೈವ,ನ್ಯೂಸ್ ಡೆಸ್ಕ್ ,ಕರ್ನಾಟಕಟಿವಿ
ತಿಮಿಂಗಲದ ವಾಂತಿ ಆ್ಯಂಬರ್ ಗ್ರೀಸ್ 17 ಕೋಟಿ : ಆ್ಯಂಬರ್ ಗ್ರೀಸ್ ಮಾರಲು ಯತ್ನಿಸಿದವರ ಬಂಧನ..!
- Advertisement -
- Advertisement -