ಭಾರತೀಯರ ಆಯಸ್ಸಿಗೆ ಕತ್ತರಿ ಹಾಕಿದ ಕೊರೋನಾ..!

ಜಗತ್ತಿನಾದ್ಯಂತ ಈ ಕೊರೋನಾ ವೈರಸ್ ಸೃಷ್ಟಿಸಿರೋ ಅವಾಂತರ ಅಷ್ಟಿಷ್ಟಲ್ಲ. ಪ್ರಪಂಚದಾದ್ಯಂತ ಮನುಷ್ಯರ   ಜೀವ ಹಿಂಡಿ ಹಿಪ್ಪೆ ಮಾಡುತ್ತಿರೋ ಈ ಮಹಾಮಾರಿ ಸದ್ಯ ಈಗ ಮನುಷ್ಯನ ಆಯಸ್ಸಿಗೇ ಕತ್ತರಿ ಹಾರಿದೆ. ಹೌದು. ಕೊರೋನಾ ಹಾವಳಿಯಿಂದ ಮನುಷಯ ನ ಆಯಸ್ಸಿನಲ್ಲಿ ಸದ್ಯ 2 ವರ್ಷ ಕಡಿತಗೊಂಡಿದೆ. ಈ ಆಘಾತಕಾರಿ ಮಾಹಿತಿಯನ್ನ ತಜ್ಞರು ನಡೆಸಿದ ಅಧ್ಯಯನ ವೊಂದರ ವರದಿ ತಿಳಿಸಿದೆ.

ಹೌದು, ಮನುಷ್ಯ ಸರಿಯಾದ ಆಹಾರ ಮತ್ತು ಜೀವನ ಶೈಲಿ ರೂಢಿಸಿಕೊಂಡ್ರೆ ನೂರಲ್ಲ 130 ವರ್ಷದವರೆಗೂ ಬದುಕಬಹುದು ಅಂತ ಹೇಳಲಾಗಿದೆ. ಆದ್ರೆ ಈಗಿನ ಕಾಲದಲ್ಲಿ ನಾವು 70 ವರ್ಷ ಬದುಕೋದೆ ಹೆಚ್ಚು ಅನ್ನೋ ರೀತಿ ಪರಿಸ್ಥಿತಿ ಬಂದಿದೆ. ಇದೆಲ್ಲದರ ನಡುವೆ ಭೂಮಿಗೆ ಎಂಟ್ರಿಕೊಟ್ಟಿರೋ ಕೊರೋನಾ ಮನುಷ್ಯನ ಆಯಸ್ಸಿಗೆ ಕತ್ತರಿಹಾಕಿದೆ.

ಕೋವಿಡ್ ಅನ್ನೋ ಸಾಂಕ್ರಾಮಿಕವು ವಿವಿಧ ಹಂತಗಳಲ್ಲಿ ವಿಶ್ವಾದ್ಯಂತ ಜನ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ಸದ್ಯ ಈ ಬಗ್ಗೆ ವಿಜ್ಞಾನಿಗಳು ನಡೆಸಿರೋ ಅಧ್ಯಯನ ವೊಂದರ ಪ್ರಕಾರ ಭಾರತದಲ್ಲಿ ಮನುಷ್ಯರ ಜೀವಿತಾವಧಿಯಲ್ಲಿ 2 ವರ್ಷ ಕಡಿಮೆಯಾಗಿದೆ ಅಂತ ತಿಳಿದುಬಂದಿದೆ.

ಅಂತಾರಾಷ್ಟ್ರೀಯ ಜನಸಂಖ್ಯಾ ಅಧ್ಯಯನ ಸಂಸ್ಥೆಯೊಂದರ ವಿಜ್ಞಾನಿಗಳು ಕೋವಿಡ್ ನಂತರ ದೇಶದಲ್ಲಿನ ಜನತೆಯ ಅಂಕಿ ಅಂಶಗಳ ವಿಶ್ಲೇಷಣೆ ನಡೆಸಿದ್ರು. ಇದರಲ್ಲಿ  ಕೋವಿಡ್ ಬಳಿಕ, ಅಂದ್ರೆ, 2020ರಲ್ಲಿ ಪುರುಷರ ಜೀವಿತಾವಧಿ  67.5 ವರ್ಷ ಮತ್ತು ಮಹಿಳೆಯರ ಜೀವಿತಾವಧಿ 69.8 ವರ್ಷ ಅನ್ನೋ ವಿಚಾರವನ್ನು ಬಹಿರಂಗಪಡಿಸಲಾಗಿದೆ.

ಇನ್ನು ಕೋವಿಡ್ ಗೂ ಮುನ್ನ, ಅಂದ್ರೆ, 2019 ರಲ್ಲಿಪುರುಷರ ಆಯಸ್ಸು 69. 5 ವರ್ಷ ಮತ್ತು ಮಹಿಳೆಯರ ಆಯಸ್ಸು 72 ವರ್ಷಗಳು  ಅಂತ ಇದೇ  ವಿಜ್ಞಾನಿಗಳು ವರದಿ ನೀಡಿದ್ರು.ಹೀಗಾಗಿ ಕೋವಿಡ್ ಸಾಂಕ್ರಾಮಿಕದ ನಂತರ ಭಾರತದ ಜನತೆಯ ಆಯಸ್ಸು ಬರೋಬ್ಬರಿ 2 ವರ್ಷ ಕಡಿತವಾಗಿದೆ.

ಇನ್ನು ಪ್ರತಿ ಬಾರಿ ಸಾಂಕ್ರಾಮಿಕ ರೋಗಗಳಿಗೆ ತುತ್ತಾದಾಗ, ಜನನದ ಅಂಕಿ ಅಂಶಗಳಲ್ಲಿನ ಜೀವಿತಾವಧಿ ಕ್ಷೀಣಿಸುತ್ತಿದೆ. ಉದಾಹರಣೆಗೆ, ಆಫ್ರಿಕನ್ ರಾಷ್ಟ್ರಗಳಲ್ಲಿ ಎಚ್ಐವಿ-ಏಡ್ಸ್ ಸಾಂಕ್ರಾಮಿಕ ರೋಗದ ನಂತರ, ಜೀವಿತಾವಧಿಯ ಸರಾಸರಿ ಕುಸಿದಿತ್ತು ಅಂತ ಹೇಳಿರೋ ತಜ್ಞರು, ಸದ್ಯ ಕೋವಿಡ್ ನಿಂದಾಗಿ ಕೂಡ 2 ವರ್ಷ ಆಯಸ್ಸು ಕಡಿಮೆಯಾಗಿದೆ ಅಂತ ವಿಜ್ಞಾನಿಗಳು ಸ್ಪಷ್ಟನೆ ನೀಡಿದ್ದಾರೆ.

ಒಟ್ಟಾರೆ ಕೊರೋನಾ ಸೋಂಕಿನಿಂದ ನಾವು ಬಚಾವ್ ಆದ್ವಿ ಅಂತ ಖುಷಿ ಪಡ್ತಿದ್ದ ಭಾರತೀಯರಲ್ಲಿ ಈ ವರದಿ ಬೇಸರದ ಜೊತೆ ಆತಂಕ ಸೃಷ್ಟಿಸುವಂತಿದೆ.  

ಬ್ಯೂರೋ ರಿಪೋರ್ಟ್, ಕರ್ನಾಟಕ ಟಿವಿ

About The Author