Friday, June 20, 2025

Latest Posts

ಭಾರತದಲ್ಲಿ ಕೋವಿಡ್ ಪ್ರಕರಣ ಏರಿಕೆ..!

- Advertisement -

www.karnatakatv.net: ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 14,348 ಹೊಸ ಕೊವಿಡ್ ಪ್ರಕರಣಗಳು ಕಂಡು ಬಂದಿದೆ.

ಹೌದು.. 3,198 ಗುಣಮುಖರಾದರೆ, 805 ಸಾವುಗಳು ವರದಿಯಾಗಿದೆ. ಇದೀಗ ಒಟ್ಟು ಪ್ರಕರಣಗಳ ಸಂಖ್ಯೆ 3,42,46,157 ಆಗಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ 1,61,334ಕ್ಕೆ ತಲುಪಿದೆ. ಒಟ್ಟು 1,04,82,00,966 ಡೋಸ್ ಲಸಿಕೆ ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಕೇರಳದಲ್ಲಿ 7,838 ಹೊಸ ಪ್ರಕರಣಗಳು ಮತ್ತು 90 ಸಾವುಗಳು ವರದಿಯಾಗಿವೆ.

ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ 247 ಪ್ರಕರಣಗಳ ಸೇರ್ಪಡೆಯೊಂದಿಗೆ ಕೊರೊನಾವೈರಸ್ ಸೋಂಕಿನ ಸಂಖ್ಯೆ 5,65,366 ಕ್ಕೆ ಏರಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಈ ವೈರಸ್ ಆರು ಜನರ ಜೀವವನ್ನು ಬಲಿ ತೆಗೆದುಕೊಂಡಿದ್ದು, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 11,516 ಕ್ಕೆ ಏರಿದೆ. ಥಾಣೆಯಲ್ಲಿ ಕೊವಿಡ್ ಮರಣ ಪ್ರಮಾಣವು ಶೇಕಡಾ 2.03 ರಷ್ಟಿದೆ. ನೆರೆಯ ಪಾಲ್ಘರ್ ಜಿಲ್ಲೆಯಲ್ಲಿ ಈಗ ಕೊವಿಡ್ ಪ್ರಕರಣಗಳ 1,37,950 ಕ್ಕೆ ತಲುಪಿದ್ದು ಸಾವಿನ ಸಂಖ್ಯೆ 3,282 ಆಗಿದೆ. ಎನ್‌ಸಿಪಿ ನಾಯಕ ಮತ್ತು ಮಹಾರಾಷ್ಟ್ರ ಸಚಿವ ಜಿತೇಂದ್ರ ಅವ್ಹಾದ್ ಅವರು ಆಯೋಜಿಸಿದ್ದ ಮೂರು ದಿನಗಳ ಲಸಿಕೆ ಶಿಬಿರದ ಮೊದಲ ದಿನವಾದ ಗುರುವಾರ ಥಾಣೆಯ ಮುಂಬ್ರಾ ಮತ್ತು ಕೌಸಾ ಪ್ರದೇಶಗಳಲ್ಲಿ 10,000 ಜನರಿಗೆ ಆಂಟಿ-ಕೊರೊನಾವೈರಸ್ ಲಸಿಕೆ ಡೋಸ್‌ಗಳನ್ನು ನೀಡಲಾಯಿತು ಎಂದು ಅವರ ಪಕ್ಷದ ಪ್ರಕಟಣೆ ತಿಳಿಸಿದೆ.

- Advertisement -

Latest Posts

Don't Miss